ರಾಜಕೀಯ

ಮೈಸೂರು ರಾಜನ ವಿರುದ್ಧ ಯುದ್ಧ ಸಾರಲು ಬಿಜೆಪಿಯ ಒಕ್ಕಲಿಗ ಸೇನಾನಿಗೆ ಗಾಳ ಹಾಕಿದ ಕಾಂಗ್ರೆಸ್..!

Views: 89

ಕಾಂಗ್ರೆಸ್ ಪಾಳಯ ಪ್ರತಾಪ್ ಸಿಂಹನೇ ತಮ್ಮ ಎದುರಾಳಿ ಅಂತ ಭಾವಿಸಿತ್ತು. ಪ್ರತಾಪ್‌ನ ಕಟ್ಟಿ ಹಾಕಲು ಯತೀಂದ್ರನೆ ಸರಿ ಎಂದು ತಿಳಿದಿದ್ರು  ಆದರೆ ಇದೀಗ ಬಿಜೆಪಿ ಕೊಟ್ಟಿರೋ ಟ್ವಿಸ್ಟ್‌ಗೆ ಹಸ್ತಪಡೆಯ ಲೆಕ್ಕಾಚಾರಗಳೇ ಬುಡಮೇಲಾಗಿವೆ. ಹೀಗಾಗಿ ಮೈಸೂರು ‘ರಾಜ’ನ ವಿರುದ್ಧ ಯುದ್ಧ ಸಾರಲು ಕಾಂಗ್ರೆಸ್, ಬಿಜೆಪಿಯ ಒಕ್ಕಲಿಗ ನಾಯಕನಿಗೆ ಗಾಳ ಹಾಕಲು ಮಾಸ್ಟರ್ ಪ್ಲಾನ್ ಮಾಡಿದೆ.

ಬಿಜೆಪಿ ಒಕ್ಕಲಿಗ ಮುಖಂಡನಿಗೆ ಕಾಂಗ್ರೆಸ್ ನಾಯಕರು ಗಾಳ ಹಾಕಿದ್ದಾರೆ ಎಂದು ತಿಳಿದುಬಂದಿದೆ. ಮಾಜಿ ಶಾಸಕ ದಿ.ವಾಸು ಪುತ್ರ ಕವೀಶ್ ಗೌಡಗೆ ‘ಹಸ್ತ ಪಡೆ ಗಾಳ ಹಾಕಿದೆ. ಮೈಸೂರು- ಕೊಡಗು ಕ್ಷೇತ್ರ ಹೆಚ್ಚು ಒಕ್ಕಲಿಗ ಮತ ಹೊಂದಿರುವ ಕ್ಷೇತ್ರವಾಗಿದ್ದು, ಒಕ್ಕಲಿಗರು ಮತ್ತು ಅಹಿಂದ ಮತಗಳನ್ನ ಒಗ್ಗೂಡಿಸಿ ಬಿಜೆಪಿಗೆ ಟಕ್ಕರ್ ಕೊಡಲು ಕಾಂಗ್ರೆಸ್ ಪ್ಲಾನ್ ಮಾಡಿದೆ.

ಈ ಹಿಂದೆ ವಿಧಾನಸಭಾ ಚುನಾವಣೆಗೆ ಚಾಮುಂಡೇಶ್ವರಿ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿ ಕವೀಶ್‌ಗೌಡ ಸ್ಪರ್ಧೆ ಮಾಡಿದ್ದರು. ಬಿಜೆಪಿ ಅಭ್ಯರ್ಥಿಯಾಗಿ 50 ಸಾವಿರಕ್ಕೂ ಹೆಚ್ಚು ಮತಗಳನ್ನ ಪಡೆದಿದ್ದರು. ಹೀಗಾಗಿ ಕವೀಶ್ ಗೌಡ ಸೂಕ್ತ ಅಭ್ಯರ್ಥಿ ಅಂತ ಕಾಂಗ್ರೆಸ್ ಪಡೆ ತೀರ್ಮಾನ ಮಾಡಿದೆ. ಜೊತೆಗೆ ಕ್ಷೇತ್ರದಲ್ಲಿ ಕ್ಲೀನ್ ಇಮೇಜ್ ಹೊಂದಿರುವ ಕವೀಶ್ ಗೌಡರನ್ನೇ ಅಭ್ಯರ್ಥಿ ಮಾಡುವ ತಂತ್ರ ರೂಪಿಸಿದೆ ಎಂದು ತಿಳಿದುಬಂದಿದೆ.

ಕವೀಶ್ ಗೌಡ ತಂದೆ ವಾಸು ಇತ್ತೀಚಿಗಷ್ಟೇ ಅನಾರೋಗ್ಯದಿಂದ ನಿಧನಹೊಂದಿದ್ದಾರೆ. ಜೊತೆಗೆ ಚಾಮರಾಜ ಕ್ಷೇತ್ರದಲ್ಲಿ ಅಭಿವೃದ್ಧಿ ಕೆಲಸದಿಂದಲೇ ವಾಸು ಸದ್ದು ಮಾಡಿದ್ರು. ಇದೀಗ ಕಾಂಗ್ರೆಸ್‌ನ ನಿಷ್ಠಾವಂತ ನಾಯಕನಾಗಿದ್ದ ವಾಸು ಅವರ ಪುತ್ರನಿಗೆ ಪ್ಲಸ್ ಆಗುವ ಸಾಧ್ಯತೆ ಇದೆ. ಹೀಗಾಗಿ ಕವೀಶ್ ಗೌಡಗೆ ಕಾಂಗ್ರೆಸ್ ಗಾಳ ಹಾಕಲು ಸಜ್ಜಾಗಿದೆ.

ಒಟ್ಟಾರೆ, ಈ ಬಾರಿ ಮೈಸೂರು-ಕೊಡಗು ಕ್ಷೇತ್ರ ಹೈವೋಲ್ಟೇಜ್ ಕ್ಷೇತ್ರವಾಗಿ ಮಾರ್ಪಟ್ಟಿದೆ. ರಾಜನ ಎಂಟ್ರಿಯಿಂದ ಕ್ಷೇತ್ರದಲ್ಲಿ ಸಂಚಲನ ಸೃಷ್ಟಿಯಾಗಿದೆ. ಇದೀಗ ಮೈಸೂರು ಯುದ್ಧಕ್ಕೆ ಕೊನೆಯ ಕ್ಷಣದಲ್ಲಿ  ಕಾಂಗ್ರೆಸ್‌ ಯಾವ ಸೇನಾನಿಯನ್ನು ಕಣಕ್ಕಿಳಿಸುತ್ತೆ ಅನ್ನೋದೆ ಸದ್ಯದ ಕುತೂಹಲ.

Related Articles

Back to top button