ಚಿತ್ರದುರ್ಗ ಹಾಳು ಬಿದ್ದು ಮನೆಯಲ್ಲಿ ಐದು ಆಸ್ತಿ ಪಂಜರ ಸಿಕ್ಕ ಬೆನ್ನಲ್ಲೇ… ಮತ್ತೊಂದು ಅಸ್ಥಿಪಂಜರ ಪತ್ತೆ..!

Views: 80
ಚಿತ್ರದುರ್ಗ: ಚಳ್ಳಕೆರೆ ಗೇಟ್ ಬಳಿಯ ಪಾಳು ಬಿದ್ದ ಮನೆಯಲ್ಲಿ ಐದು ಮಂದಿಯ ಅಸ್ಥಿಪಂಜರ ಸಿಕ್ಕ ಘಟನೆ ಎಲ್ಲರನ್ನೂ ಬೆಚ್ಚಿ ಬೀಳಿಸಿದೆ. ಇದು ಆತ್ಮಹತ್ಯೆಯೋ? ಕೊಲೆಯೋ ಅನ್ನೋ ಅನುಮಾನ ಕಾಡುತ್ತಿದೆ. ಐದು ಮಂದಿಯ ಅಸ್ಥಿಪಂಜರ ಸಿಕ್ಕ ಘಟನೆ ತನಿಖೆ ನಡೆಯುತ್ತಿರುವಾಗಲೇ ಚಿತ್ರದುರ್ಗದಲ್ಲಿ ಮತ್ತೊಂದು ಅಸ್ಥಿಪಂಜರ ಪತ್ತೆಯಾಗಿದೆ.
ಸಿದ್ದವ್ವನದುರ್ಗ ಗ್ರಾಮದ ಜಮೀನಿನಲ್ಲಿ ಅಸ್ಥಿಪಂಜರವೊಂದು ಪತ್ತೆಯಾಗಿದೆ. ಈ ಜಮೀನು ರಂಗಪ್ಪ ಎಂಬುವವರಿಗೆ ಸೇರಿದ್ದಾಗಿದ್ದು, ಮೃತಪಟ್ಟ ದೇಹವನ್ನು ಮಣ್ಣಿನಲ್ಲಿ ಮುಚ್ಚಿಡಲಾಗಿತ್ತು. ನಾಯಿಗಳು ತಲೆ ಬುರುಡೆಯನ್ನ ಎಳೆದಾಡಿದ್ದರಿಂದ ಈ ಸಾವಿನ ಪ್ರಕರಣ ಬೆಳಕಿಗೆ ಬಂದಿದೆ.
ಬುರುಡೆ, ಅಸ್ಥಿಪಂಜರ ಸಿಕ್ಕ ಜಮೀನಿನಲ್ಲಿ ಕಳೆದ ಸುಮಾರು ಒಂದು ತಿಂಗಳ ಹಿಂದೆ ಕಾಣೆಯಾಗಿದ್ದ ಬಸವರಾಜಪ್ಪ ಎಂಬುವವರು ಸೇವಿಸುತ್ತಿದ್ದ ಮಾತ್ರೆ ಹಾಗೂ ಬಟ್ಟೆಗಳು ಸಿಕ್ಕಿವೆ. ಈ ಸುಳಿವುಗಳಿಂದ ಜಮೀನಿನಲ್ಲಿ ಸಿಕ್ಕ ಅಸ್ಥಿಪಂಜರವನ್ನು ಮುದ್ದಾಪುರದ ರಂಗಪ್ಪ ಅವರದ್ದೇ ಎನ್ನಲಾಗಿದೆ.
ಮುದ್ದಾಪುರ ಗ್ರಾಮದ ಬಸವರಾಜಪ್ಪ ಇಸ್ಪೀಟ್ ಆಡುವ ಚಟಕ್ಕೆ ಬಿದ್ದಿದ್ದು ಹಲವರಿಗೆ ಹಣ ಕೊಡಬೇಕಿತ್ತು. ಇಸ್ಪೀಟ್ ಹಣ ಕೊಡದ ವಿಚಾರಕ್ಕೆ ಕೊಲೆ ಮಾಡಿ ಬಿಸಾಡಿರುವ ಶಂಕೆ ವ್ಯಕ್ತವಾಗಿದೆ. ಬಸವರಾಜಪ್ಪ ಕಾಣೆಯಾದ ಬಗ್ಗೆ ತುರುವನೂರು ಪೊಲೀಸ್ ಠಾಣೆಯಲ್ಲಿ ಕೇಸ್ ಕೂಡ ದಾಖಲಾಗಿತ್ತು.