ಜನಮನ

ಹೊಸ ವರ್ಷಕ್ಕೆ ಸಿಹಿ ಸುದ್ದಿ ಹೊತ್ತು ತಂದ ಬಜಾಜ್​ ಚೇತಕ್​ ಪ್ರೀಮಿಯಂ ಸ್ಕೂಟರ್

Views: 91

ಹೊಸ ವರ್ಷಕ್ಕೆ ಆಟೋಮೊಬೈಲ್​ ಕಂಪನಿಗಳು ಎನಾದರೊಂದು ಸಿಹಿ ಸುದ್ದಿ ಹೊತ್ತು ತರುತ್ತವೆ. ಅದರಂತೆಯೇ ಇಂದು ಭಾರತದ ಜನಪ್ರಿಯ ಕಂಪನಿಯಾದ ಬಜಾಜ್​​ ಹೊಸ ವರ್ಷಕ್ಕೆ ವಿನೂತನ ಮಾದರಿಯಲ್ಲಿ ಚೇತಕ್​ ಪ್ರೀಮಿಯಂ ಸ್ಕೂಟರ್​ ಪರಿಚಯಿಸುತ್ತಿದೆ.

ಬಜಾಜ್ ಇಂದು​ ಪರಿಚಯಿಸುತ್ತಿರುವ ಹೊಸ ಎಲೆಕ್ಟ್ರಿಕ್​ ಸ್ಕೂಟರ್​​ 3.2kwh ಬ್ಯಾಟರಿ ಪ್ಯಾಕ್​ ಹೊಂದಿದ್ದು, ಒಂದೇ ಚಾರ್ಜ್​ನಲ್ಲಿ 126 ಕಿ.ಮೀ ಕ್ರಮಿಸುತ್ತದೆ. ಸ್ಟ್ಯಾಂಡರ್ಡ್​​​ ಚಾರ್ಜರ್​ ಬಳಸಿಕೊಂಡು 4 ಗಂಟೆಯಲ್ಲಿ 0-100 ಪ್ರತಿಶತ ಬ್ಯಾಟರಿ ಚಾರ್ಜ್​ ಮಾಡಬಹುದಾಗಿದೆ. ಇನ್ನು ಇದರ ಗರಿಷ್ಠ ವೇಗ 63kmphನಿಂದ 73kmph ಕ್ರಮಿಸುವ ಸಾಮರ್ಥ್ಯ ಹೊಂದಿದೆ ಎಂದು ಕಂಪನಿ ಹೇಳಿದೆ.

ಹೊಸ ಬಜಾಜ್​ ಚೇತಕ್​ ಪ್ರೀಮಿಯಂ 7 ಇಂಚಿನ ಡಿಸ್​ಪ್ಲೇಯೊಂದಿಗೆ ಎಲ್​ಇಡಿ ಕನ್ಸೋಲ್​ ಹೊಂದಿದೆ. ರೌಂಡ್​ ಎಲ್​ಸಿಡಿ ಅರ್ಬೇನ್​​ ರೂಪಾಂತರವನ್ನು ಒಳಗೊಂಡಿದೆ. ಅಲ್ಲದೆ, ಈ ಎಲೆಕ್ಟ್ರಿಕ್​ ಸ್ಕೂಟರ್​ ಬ್ಲೂಟೂತ್​​ ಸಂಪರ್ಕ, ಟರ್ನ್​-ಬೈ-ಟರ್ನ್​ ನ್ಯಾವಿಗೇಶನ್​, ಕರೆ, ಎಸ್​ಎಮ್​ಎಸ್​, ಮ್ಯೂಸಿಕ್​, ರಿಮೋಟ್​ ಇಮೊಬಿಲೈಸೇಶನ್​, ಟೈರ್​ ಪ್ರೆಶರ್​ ಮಾನಿಟರಿಂಗ್​ ಅನ್ನು ತೋರಿಸುತ್ತದೆ.

ಇದಲ್ಲದೆ, ನೂತನ ಸ್ಕೂಟರ್​ನಲ್ಲಿ ಇಲ್ಯುಮಿನೇಟೆಡ್​ ಸ್ವಿಚ್​ಗಿಯರ್​, ಸಿಂಗಲ್​ ಸೀಟ್​, ಏಪ್ರನ್​ ಸ್ಟೊರೇಜ್​, ಅಲಾಯ್​ ವೀಲ್​, ಎಲ್​ಇಡಿ ಇಂಡಿಕೇಟರ್​ ನೀಡಲಾಗಿದೆ. ಸದ್ಯ ಮಾರುಕಟ್ಟೆಯಲ್ಲಿ ಹಲವು ಕಂಪನಿಗಳ ಎಲೆಕ್ಟ್ರಿಕ್​ ಸ್ಕೂಟರ್​ ಇವೆ. ಇದೀಗ ಬಜಾಜ್​ ಅವುಗಳಿಗೆ ಸೆಡ್ಡು ಹೊಡೆಯಲು ಹೊಸ ಸ್ಕೂಟರ್​ ಅನ್ನು ಇಂದು ಬಿಡುಗಡೆ ಮಾಡುತ್ತಿದೆ. ಇದರ ಬೆಲೆ 1.35 ಲಕ್ಷ ರೂಪಾಯಿ ಎಂದು ಅಂದಾಜಿಸಲಾಗಿದೆ.

Related Articles

Back to top button
error: Content is protected !!