ಜನಮನ

ಹೆಮ್ಮಾಡಿ: ಬೈಕಿಗೆ ಕಾರು ಡಿಕ್ಕಿ, ಬೈಕ್ ಸವಾರ ಸ್ಥಳದಲ್ಲೇ ಸಾವು

Views: 0

ಕುಂದಾಪುರ ಬೈಕಿಗೆ ಕಾರು ಡಿಕ್ಕಿಯಾಗಿ ಬೈಕ್ ಸವಾರ ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ಕುಂದಾಪುರ- ಬೈಂದೂರು ರಾಷ್ಟ್ರೀಯ ಹೆದ್ದಾರಿ 66ರ ಹೆಮ್ಮಾಡಿ ಹಾಲು ಡೈರಿ ಬಳಿ ಸಂಭವಿಸಿದೆ.

ಬೈಕ್ ಸವಾರ ವಂಡ್ಸೆ ನಿವಾಸಿ ಮಹಾಬಲ ಪೂಜಾರಿ(52) ಮೃತಪಟ್ಟವರು.

ಖಾಸಗಿ ಬಸ್ ಚಾಲಕರಾಗಿದ್ದ ಮಹಾಬಲ ಪೂಜಾರಿಯವರು ಗುರುವಾರ ಸಂಜೆ ಕೊನೆಯ ಟ್ರಿಪ್ ಮುಗಿಸಿಕೊಂಡು ಕುಂದಾಪುರದಲ್ಲಿ ಬಸ್ ನಿಲ್ಲಿಸಿ ಪತ್ನಿಯ ಮನೆಗೆ ತೆರಳುತ್ತಿದ್ದ ವೇಳೆ ಈ ದುರ್ಘಟನೆ ಸಂಭವಿಸಿದೆ.

ಕುಂದಾಪುರ ಸಂಚಾರ ಠಾಣಾ ಪೋಲೀಸರು ಸ್ಥಳಕ್ಕೆ ಆಗಮಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

Related Articles

Back to top button
error: Content is protected !!