ಶಿಕ್ಷಣ

ಹೆಮ್ಮಾಡಿ ಜನತಾ ಪದವಿಪೂರ್ವ ಕಾಲೇಜಿನಲ್ಲಿ ಮಾದಕ ವ್ಯಸನದ ವಿರುದ್ಧ ಮಾಹಿತಿ ಕಾರ್ಯಕ್ರಮ

ಆರೋಗ್ಯಕ್ಕೆ ಹಾನಿಯುಂಟುಮಾಡುವ ಮಾದಕ ವ್ಯಸನಗಳು ತುಂಬಾ ಸುಲಭವಾಗಿ ಕೈಗೆ ಸಿಗುತ್ತಿದ್ದು, ಅವೆಲ್ಲವನ್ನೂ ಸ್ವೀಕರಿಸಬೇಡಿ---ಠಾಣಾಧಿಕಾರಿ ಶ್ರೀ ಭೀಮಾಶಂಕರ್

Views: 1

ಕನ್ನಡ ಕರಾವಳಿ ಸುದ್ದಿ: ಹೆಮ್ಮಾಡಿ ಜನತಾ ಪದವಿಪೂರ್ವ ಕಾಲೇಜಿನಲ್ಲಿ ಮಾದಕ ವ್ಯಸನದ ವಿರುದ್ಧ ಮಾಹಿತಿ ಕಾರ್ಯಕ್ರಮ ನಡೆಯಿತು.

ಕಂಡ್ಲೂರು ಪೋಲಿಸ್ ಠಾಣೆಯ ಠಾಣಾಧಿಕಾರಿಗಳಾಗಿರುವ ಶ್ರೀ ಭೀಮಾಶಂಕರ್ ರವರು ಮಾದಕ ವ್ಯಸನದ ವಿರುದ್ಧದ ಕುರಿತಾಗಿ ಮಾಹಿತಿ ನೀಡಿದರು.

ಇಂದಿನ ಈ ಯುಗದಲ್ಲಿ ಆರೋಗ್ಯಕ್ಕೆ ಹಾನಿಯುಂಟುಮಾಡುವ ಮಾದಕ ವ್ಯಸನಗಳು ತುಂಬಾ ಸುಲಭವಾಗಿ ಕೈಗೆ ಸಿಗುತ್ತಿದ್ದು, ಅವೆಲ್ಲವನ್ನೂ ಸ್ವೀಕರಿಸಬೇಡಿ ಆರೋಗ್ಯದ ಕುರಿತಾಗಿ ಜಾಗ್ರತಿ ವಹಿಸಿ ಎಂದು ಕರೆ ನೀಡಿದರು.

ಕಾರ್ಯಕ್ರಮದಲ್ಲಿ ಠಾಣಾ ಸಿಬ್ಬಂದಿಗಳು, ವಿದ್ಯಾರ್ಥಿಗಳು ಹಾಗೂ ಉಪನ್ಯಾಸಕರು ಉಪಸ್ಥಿತರಿದ್ದರು. ಉಪನ್ಯಾಸಕರಾದ ಉದಯ ನಾಯ್ಕ ಕಾರ್ಯಕ್ರಮ ನಿರ್ವಹಿಸಿ, ಸ್ವಾಗತಿಸಿದರು.ಅಭಿಜಿತ್ ವಂದಿಸಿದರು.

 

Related Articles

Back to top button