ಜನಮನ

ಹೆತ್ತ ತಂದೆ ತಾಯಿಯನ್ನೇ ಹತ್ಯೆ ಮಾಡಿದ ಮಗ

Views: 1

ತಂದೆ ತಾಯಿಯನ್ನು ರಾಡ್ ನಿಂದ ಹೊಡೆದು ಹತ್ಯೆ ಮಾಡಿದ ಘಟನೆ ಬೆಂಗಳೂರಿನ ಬ್ಯಾಟರಾಯನಪುರದಲ್ಲಿ ಮಂಗಳವಾರ ನಡೆದಿದೆ.

ಕೊಲೆಯಾದ ತಂದೆ ಮಂಗಳೂರು ಮೂಲದ ಭಾಸ್ಕರ್ (64) ಶಾಂತ (60) ಎಂದು ಗುರುತಿಸಲಾಗಿದೆ.

ಮಂಗಳೂರು ಮೂಲದ ಕುಟುಂಬವೊಂದು ಬೆಂಗಳೂರಿನಲ್ಲಿ ನೆಲೆಸಿದ್ದು, ಇವರಿಗೆ ಇಬ್ಬರು ಮಕ್ಕಳಿದ್ದಾರೆ ಹಿರಿಯ ಮಗ ಖಾಸಗಿ ಕಂಪನಿಯಲ್ಲಿ ಉದ್ಯೋಗ ಮಾಡಿಕೊಂಡಿದ್ದಾನೆ. ಎರಡನೇ ಮಗ ಆರೋಪಿ ಶರತ್( 27) ಕೊಲೆ ಮಾಡಿದ ಆರೋಪದಲ್ಲಿ ನಾಪತ್ತೆಯಾಗಿದ್ದು, ಆತನಿಗಾಗಿ ಶೋಧ ಮುಂದುವರೆದಿದೆ.

ಇಂದು ಬೆಳಿಗ್ಗೆ ಉದ್ಯೋಗಕ್ಕೆ ತೆರಳಿದ್ದ ಹಿರಿಯ ಮಗ ತಂದೆ ತಾಯಿಗೆ ಕರೆ ಮಾಡಿದ್ದಾನೆ. ಯಾರೂ ಫೋನ್ ರಿಸೀವ್ ಮಾಡದಿದ್ದಾಗ ಪಕ್ಕದ ಮನೆಯವರಿಗೆ ಕರೆ ಮಾಡಿ ಪೋಷಕರ ಬಗ್ಗೆ ವಿಚಾರಿಸಿದ್ದಾನೆ.

ಫೋನ್ ರಿಸೀವ್ ಮಾಡದಿದ್ದಾಗ ಪಕ್ಕದ ಮನೆಯವರಿಗೆ ಫೋನ್ ಮಾಡಿ ಮಾತಾಡಿದ್ದಾನೆ.

ಪಕ್ಕದ ಮನೆಯವರು ಮನೆಗೆ ಬಂದು ನೋಡಿದಾಗ ಕೊಲೆ ನಡೆದಿರುವುದು ಬೆಳಕಿಗೆ ಬಂದಿದೆ.

ಶರತ್ ಮಾನಸಿಕವಾಗಿ ನೊಂದಿದ್ದು ಪೋಷಕರೊಂದಿಗೆ ಆಗಾಗ ಜಗಳವಾಡುತ್ತಿದ್ದ 20 ವರ್ಷಗಳಿಂದಲೂ ಬೆಂಗಳೂರಿನಲ್ಲಿ ನೆಲೆಸಿದ್ದು ಶರತ್ ಮಾತ್ರ ಯಾವಾಗಲೂ ಮನೆಯಲ್ಲಿ ಇರುತ್ತಿದ್ದನು.

ಕೆಲಸವಿಲ್ಲದೆ ಶರತ್ ಮಾನಸಿಕ ಸ್ವಾಸ್ಥ್ಯವನ್ನು ಕಳೆದುಕೊಂಡಿದ್ದ ಎಂದು ತಿಳಿದುಬಂದಿದೆ.

Related Articles

Back to top button
error: Content is protected !!