ಹೆಂಡತಿಯನ್ನು ಸ್ಮಶಾನಕ್ಕೆ ಕರೆದೊಯ್ದು ಕೊಲೆಗೈದ ಪತಿರಾಯ!

Views: 75
ಬೆಂಗಳೂರು: ಗಂಡ ಹೆಂಡತಿಯ ನಡುವೆ ಕಲಹ ವಿಕೋಪಕ್ಕೆ ತಿರುಗಿ ಪತ್ನಿಯನ್ನೇ ಪತಿ ಕೊಲೆಗೈದಿರುವ ಘಟನೆ ನಗರದ ಬನಶಂಕರಿ ಲೇಔಟ್‌ನಲ್ಲಿ ನಡೆದಿದೆ.ಹತ್ಯೆಯ ಆರೋಪಿ ಗಂಡನಿಗಾಗಿ ಪೊಲೀಸರು ಹುಡುಕಾಟದಲ್ಲಿದ್ದಾರೆ.
ಗೌರಿ (26) ಮೃತ ಮಹಿಳೆ. ನಾಗೇಶ್ ಕೊಲೆ ಆರೋಪಿ. ಬನಶಂಕರಿ 6ನೇ ಹಂತದ ಜಟ್ಟಿಗನಹಳ್ಳಿಯಲ್ಲಿ ಘಟನೆ ನಡೆದಿದೆ. ಸಂಜೆ 7.30 ರ ಸುಮಾರಿಗೆ ಕೊಲೆ ನಡೆದಿರುವುದು ಬೆಳಕಿಗೆ ಬಂದಿದ್ದು, ಬೆಳಗ್ಗೆ ಸ್ಥಳೀಯರು ನೋಡಿ 112ಗೆ ಕರೆ ಮಾಡಿದ್ದಾರೆ. ಘಟನಾ ಸ್ಥಳಕ್ಕೆ ಕೆಂಗೇರಿ ಪೊಲೀಸರು ಭೇಟಿ ನೀಡಿ, ಪರಿಶೀಲಿಸಿ, ಮೃತದೇಹವನ್ನು ಆರ್.ಆರ್.ಆಸ್ಪತ್ರೆಗೆ ರವಾನೆ ಮಾಡಿದ್ದಾರೆ
7 ರಿಂದ 8 ವರ್ಷಗಳ ಹಿಂದೆ ನಾಗೇಶ್ ಹಾಗೂ ಗೌರಿ ಮದುವೆ ಆಗಿದ್ದರು. ಆಗಾಗ ಕೌಟುಂಬಿಕ ಸಮಸ್ಯೆಯಿಂದ ಇವರು ಜಗಳ ಮಾಡಿಕೊಳ್ಳುತ್ತಿದ್ದರು. 5 ವರ್ಷಗಳಿಂದ ಬೇರೆ ಊರಲ್ಲಿ ಹೆಂಡತಿಯನ್ನು ಇಟ್ಟಿದ್ದ ನಾಗೇಶ್, 3 ದಿನಗಳ ಹಿಂದೆ ಪತ್ನಿಯನ್ನು ಮನೆಗೆ ಕರೆತಂದಿದ್ದ. ಕೌಟುಂಬಿಕ ಕಲಹ ವಿಕೋಪಕ್ಕೆ ತಿರುಗಿ ಸ್ಮಶಾನಕ್ಕೆ ಕರೆದೊಯ್ದು ಪತ್ನಿಯನ್ನು ಗಂಡ ನಾಗೇಶ್ ಕೊಲೆ ಮಾಡಿದ್ದಾನೆ. ಕೆಂಗೇರಿ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.






