ಇತರೆ

ಹೆಂಡತಿಯನ್ನು ಶೂಟ್ ಮಾಡಿದ ಬೋಪಣ್ಣ ಕೋವಿಯೊಂದಿಗೆ ಪೊಲೀಸರಿಗೆ ಶರಣು! 

Views: 298

ಕನ್ನಡ ಕರಾವಳಿ ಸುದ್ದಿ : ಗುಂಡಿಟ್ಟು ಹೆಂಡತಿಯನ್ನೇ ಹತ್ಯೆ ಮಾಡಿರೋ ದಾರುಣ ಘಟನೆ ಕೊಡಗಿನಲ್ಲಿ ನಡೆದಿದೆ. ಶಿಲ್ಪ ಸೀತಮ್ಮ (36) ಹತ್ಯೆಯಾದ ಮಹಿಳೆ. ಹೆಂಡತಿಯನ್ನು ಕೊಂದ ಬಳಿಕ ಪತಿ ನಾಯಕಂಡ ಬೋಪಣ್ಣ ಕೋವಿಯೊಂದಿಗೆ ಪೊಲೀಸರಿಗೆ ಶರಣಾಗಿದ್ದಾರೆ.

ವಿರಾಜಪೇಟೆ ತಾಲೂಕಿನ ಬೋಟೋಳಿ ಗ್ರಾಮದಲ್ಲಿ ಈ ಭಯಾನಕ ಮರ್ಡರ್ ನಡೆದಿದೆ. ಮನೆಯಲ್ಲಿ ಜಗಳವಾಡಿಕೊಂಡು ಬಳಿಕ ಪತಿ ಹತ್ಯೆ ಮಾಡಿದ್ದಾರೆಂದು ವಿರಾಜಪೇಟೆ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪತಿಯ ಗುಂಡಿಗೆ ಬಲಿಯಾಗಿರುವ ಶಿಲ್ಪ ಗ್ರಾಮ ಪಂಚಾಯಿತಿ ಮಾಜಿ ಸದಸ್ಯೆಯಾಗಿದ್ದರು. ಇಂದು ಬೆಳಗ್ಗೆ 9ಗಂಟೆಗೆ ಪತಿ ಬೋಪಣ್ಣ (45) ಗುಂಡು ಹೊಡೆದು ಕೊಲೆ ಮಾಡಿದ್ದಾರೆ ಎನ್ನಲಾಗಿದೆ.

ಕೊಲೆಯಾದ ಶಿಲ್ಪ ಸೀತಮ್ಮ ನಿನ್ನೆ ರಾತ್ರಿ ಬೇರೊಬ್ಬರ ದೂರವಾಣಿ ಕರೆ ಸ್ವೀಕರಿಸಿ ಮಾತನಾಡಿದ್ದರು. ಇದಕ್ಕೆ ಗಂಡ ಬೋಪಣ್ಣ ಆಕ್ಷೇಪಿಸಿದ್ದಾರೆ. ನಂತರ ಈ ವಿಚಾರವಾಗಿ ಜಗಳ ನಡೆದು ಇಂದು ಬೆಳಗ್ಗೆ ಈ ಘಟನೆ ನಡೆದಿದೆ ಎಂದು ಹೇಳಲಾಗಿದೆ.

 

Related Articles

Back to top button
error: Content is protected !!