ಯುವಜನ
‘ಹಾಯ್’ ಎಂಬ ಸಂದೇಶದಿಂದ ಶುರುವಾದ ಪ್ರೀತಿಗೆ ಅಮೆರಿಕನ್ ಯುವತಿ ಮದುವೆ ಆಗುವ ತನಕ!

Views: 125
ಕನ್ನಡ ಕರಾವಳಿ ಸುದ್ದಿ: ಆಂಧ್ರ ಮೂಲದ ಯುವಕನ ಪ್ರೇಮಕ್ಕೆ ಮರುಳಾದ ಅಮೆರಿಕನ್ ಯುವತಿಯೊಬ್ಬಳು ಆತನಿಗಾಗಿದ ದೇಶ ಬಿಟ್ಟು ಬಂದಂತಹ ಅಚ್ಚರಿಯ ಘಟನೆ ವರದಿಯಾಗಿದೆ.
ಹೌದು ಮೂಲತಹ ಫೋಟೋಗ್ರಾಫರ್ ಜಾಕ್ಲಿನ್ ಫೊರೆರೊ ಹಾಗೂ ಚಂದನ್ ಇಬ್ಬರು ಇನ್‌ಸ್ಟಾಗ್ರಾಮ್ ಪ್ರೊಫೈಲ್ ನೋಡಿ ಲವ್ ಮಾಡಲು ಶುರು ಮಾಡಿಕೊಂಡಿದ್ದರು.
ಹಾಯ್ ಎಂಬ ಸಂದೇಶದಿಂದ ಶುರುವಾದ ಪ್ರೀತಿ ಈಗ ಮದುವೆ ಆಗುವ ತನಕ ಬಂದು ನಿಂತಿದೆ. ಈ ಬಗ್ಗೆ ಖುದ್ದು ಅಮೆರಿಕಾದ ಫೋಟೋಗ್ರಾಫರ್ ಜಾಕ್ಲಿನ್ ಫೊರೆರೊ ತಮ್ಮ ಇನ್‌ಸ್ಟಾಗ್ರಾಮ್ ಪೋಸ್ಟ್‌ನಲ್ಲಿ ಫೊರೆರೊ 14 ತಿಂಗಳು ಒಟ್ಟಿಗೆ ಮತ್ತು ಹೊಸ ಅಧ್ಯಾಯಕ್ಕೆ ಸಿದ್ಧ ಅಂತ ಬರೆದುಕೊಂಡು ವಿಡಿಯೋ ಶೇರ್ ಮಾಡಿಕೊಂಡಿದ್ದಾರೆ.
ಕೇವಲ 45 ಸೆಕೆಂಡುಗಳ ಕ್ಲಿಪ್‌ನಲ್ಲಿ ಈ ಇಬ್ಬರ ಸುಂದರ ಕ್ಷಣಗಳನ್ನು ಹಂಚಿಕೊಂಡಿದ್ದಾರೆ. ಅದು ಹೇಗೆ ಮರೆಯಲಾರದ ಬಂಧವಾಗ ಬದಲಾಯಿತು ಎಂಬುದನ್ನು ಬಹಿರಂಗಪಡಿಸಿದ್ದಾರೆ. ಇನ್ನೂ ಈ ಇಬ್ಬರು ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ.