ಜನಮನ

ಹನಿ ಟ್ರ್ಯಾಪ್ ಪ್ರಕರಣ: ಡೆತ್ ನೋಟ್ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡ ನಿವೃತ್ತ ಯೋಧನ ಶವ ಪತ್ತೆ

Views: 0

ಮಡಿಕೇರಿ: ನಿವೃತ್ತ ಯೋಧನೊಬ್ಬ ಡೆತ್ ನೋಟ್ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡ ಪ್ರಕರಣಕ್ಕೆ ಸಂಬಂಧಿಸಿದಂತೆ ಯೋಧನ ಮೃತ ದೇಹ ನಗರದ ಪಂಪಿನ ಕೆರೆಯಲ್ಲಿ ದೊರೆತಿದೆ.

ಯೋಧ ಕಣ್ಮರೆಯಾಗಿ 30 ಗಂಟೆಗಳ ಬಳಿಕ  ಬುಧವಾರ ರಾತ್ರಿ ಮೃತದೇಹ ಪತ್ತೆಯಾಗಿದ್ದು, ಕೆರೆಯಲ್ಲಿ 40 ಅಡಿ ಆಳದಲ್ಲಿ ಮೃತ ದೇಹ ದೊರೆತಿದೆ.

ಹನಿ ಟ್ರ್ಯಾಪ್ ಜಾಲಕ್ಕೆ ಬಿದ್ದು ಮಾಜಿ ಸೈನಿಕ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ.

ನನ್ನ ಸಾವಿಗೆ ಜವಿತಾ ಹಾಗೂ ರೆಸಾರ್ಟ್ ಮಾಲೀಕ ಸತ್ಯ ಕಾರಣ ಎಂದು ಡೆತ್ ನೋಟ್ ಬರೆದಿಟ್ಟು ಪಂಪಿನ ಕೆರೆಗೆ ಹಾರಿದ್ದರು.

ಸಂದೇಶ ಪತ್ನಿ ದೂರಿನ ಆಧಾರದ ಮೇಲೆ ಸದ್ಯದಲ್ಲಿಯೇ ಜವಿತಾ ಅವರನ್ನು ಬಂಧನ ಮಾಡುವ ಸಾಧ್ಯತೆ ಇದೆ.

ಹಾಗೆಯೇ ಡೆತ್ ನೋಟ್ ನಲ್ಲಿ ಹೆಸರಿದ್ದವರನ್ನು ಪೊಲೀಸರು ಬಂಧಿಸುವ ಸಾಧ್ಯತೆ ಇದೆ ಎಂದು ತಿಳಿದುಬಂದಿದೆ.

Related Articles

Back to top button
error: Content is protected !!