ಸ್ಮೃತಿ ಮಂಧಾನ ಮದುವೆ ಮುಂದೂಡಿದ ಬೆನ್ನಲ್ಲೇ ಫೋಟೊ ಮತ್ತು ವಿಡಿಯೋ ಡಿಲೀಟ್.. ಪಲಾಶ್’ನ ನಂಬಿಕೆ ದ್ರೋಹ ಬಯಲಾಯ್ತು
Views: 179
ಕನ್ನಡ ಕರಾವಳಿ ಸುದ್ದಿ: ಟೀಂ ಇಂಡಿಯಾ ಆಟಗಾರ್ತಿ ಸ್ಮೃತಿ ಮಂಧಾನ ಮತ್ತು ಪಲಾಶ್ ಮುಚ್ಚಲ್ ಅವರ ವಿವಾಹವನ್ನು ಹಠಾತ್ತನೆ ಮುಂದೂಡಿದ್ದರಿಂದ ಅಭಿಮಾನಿಗಳು ಆಘಾತಕ್ಕೊಳಗಾಗಿದ್ದರು.
ನವೆಂಬರ್ 23ರ ಭಾನುವಾರ ಸ್ಮೃತಿ ಅವರ ತಂದೆಯ ಆರೋಗ್ಯ ಹದಗೆಟ್ಟಿತ್ತು. ಹೃದಯಾಘಾತದಿಂದಾಗಿ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂಬ ಸುದ್ದಿ ಹೊರಬಿತ್ತು. ನಂತರ ಸ್ಮೃತಿ ಅವರ ವಿವಾಹ ವ್ಯವಸ್ಥಾಪಕರು ಭಾರತೀಯ ಆಟಗಾರ್ತಿ ತಮ್ಮ ವಿವಾಹವನ್ನು ಮುಂದೂಡಲು ನಿರ್ಧರಿಸಿದ್ದಾರೆ ಎಂದು ಘೋಷಿಸಿದರು.
ಈ ಮಧ್ಯೆ, RCB ನಾಯಕಿ ಮತ್ತು ಟೀಂ ಇಂಡಿಯಾ ಆಟಗಾರ್ತಿ ಸ್ಮೃತಿ ಮಂಧಾನ ಅವರ ಕೈ ಹಿಡಿಯಬೇಕಿದ್ದ ಬಾಲಿವುಡ್‌ನ ಸಂಗೀತ ನಿರ್ದೇಶಕ ಪಲಾಶ್ ಮುಚ್ಚಲ್ ಮಾತ್ರ ಸ್ಮೃತಿ ಜೊತೆ ಮದುವೆ ನಿಶ್ಚಯವಾಗಿದ್ದರೂ ಬೇರೆ ಮಹಿಳೆಯ ಜೊತೆ ಪಲಾಶ್ ಮುಚ್ಚಲ್ ಮಾಡಿದ್ದಾರೆ ಎನ್ನಲಾದ ಚಾಟ್‌ನ ಸ್ಕ್ರೀನ್‌ಶಾಟ್ ವೈರಲ್ ಆಗಿವೆ. ಇದು ಈಗ ತೀವ್ರ ಚರ್ಚೆಗೆ ಗ್ರಾಸವಾಗಿದೆ. ಪಲಾಶ್ ಸ್ಮೃತಿ ಮಂಧಾನಗೆ ಮೋಸ ಮಾಡಿದ್ದಾರಾ? ಈ ಸಂಗತಿ ತಿಳಿದ ಮೇಲೆ ಮದುವೆ ಮನೆಯಲ್ಲಿ ರದ್ಧಾಂತವಾಗಿರಬಹುದಾ? ಅಲ್ಲದೆ ಸ್ಮೃತಿ ಮಂಧಾನ ಮದುವೆ ಮುಂದೂಡಿದ ಬೆನ್ನಲ್ಲೇ ತಮ್ಮ ಮದುವೆಯ ಸಂಭ್ರಮಾಚರಣೆಯ ಫೋಟೊ ಮತ್ತು ವಿಡಿಯೋಗಳನ್ನು ಏಕಾಏಕಿ ಡಿಲೀಟ್ ಮಾಡಿರುವುದು ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿವೆ.






