ಸಾಮಾಜಿಕ

ಸ್ನೇಹ ಪ್ರೀತಿಯಾಗಿ ಬೆಳೆದು…ಮದುವೆಗಾಗಿ ಅವಳು ರಾಹುಲ್ ಹೆಸರಿನಿಂದ ಅವನಾದಳು!

Views: 90

ಕನ್ನಡ ಕರಾವಳಿ ಸುದ್ದಿ: ಬಿಹಾರದ ಜಮುಯಿ ಜಿಲ್ಲೆಯಲ್ಲಿ ನಡೆದ ಅಪರೂಪದ ವಿವಾಹವೊಂದು ದೇಶಾದ್ಯಂತ ಬಾರಿ ಚರ್ಚೆಗೆ ಕಾರಣವಾಗಿದೆ. ಸರ್ಕಾರಿ ಶಾಲೆಯ ಶಿಕ್ಷಕಿಯೊಬ್ಬಳು ತಮ್ಮ ಸಂಬಂಧಿಯೊಂದಿಗೆ ಪ್ರೀತಿಯಲ್ಲಿ ಬಿದ್ದಿದ್ದು, ಬಳಿಕ ಲಿಂಗ ಪರಿವರ್ತನೆ ಶಸ್ತ್ರಚಿಕಿತ್ಸೆಯ ನಂತರ ಮದುವೆಯಾಗಿರುವ ಘಟನೆ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಮೇ 31ರಂದು ಜಮುಯಿಯ ಪಟ್ಟೇಶ್ವರನಾಥ ದೇವಸ್ಥಾನದಲ್ಲಿ ಕೆಲವೇ ಆಪ್ತರ ಸಮ್ಮುಖದಲ್ಲಿ ಇಬ್ಬರೂ ಹಿಂದೂ ಸಂಪ್ರದಾಯದಂತೆ ವಿವಾಹವಾಗಿದ್ದಾರೆ. ಸಪ್ತಪದಿ, ಸಿಂಧೂರ ಸೇರಿದಂತೆ ಸಾಂಪ್ರದಾಯಿಕ ವಿಧಿವಿಧಾನಗಳ ಮೂಲಕ ಮದುವೆ ನೆರವೇರಿದ್ದು, ಬಳಿಕ ಮದುವೆಯ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ.

ನಯನಶ್ರೀ ಕುಮಾರಿ ಮತ್ತು ರಾಖಿ ಕುಮಾರಿ ಬಾಲ್ಯದಿಂದಲೂ ಒಟ್ಟಿಗೆ ಬೆಳೆದವರು. ಇಬ್ಬರೂ ಒಂದೇ ಶಾಲೆಯಲ್ಲಿ ಓದಿದ್ದು, ಬಳಿಕ ಉನ್ನತ ಶಿಕ್ಷಣ ಹಾಗೂ ಸ್ಪರ್ಧಾತ್ಮಕ ಪರೀಕ್ಷೆಗಳ ತಯಾರಿಯನ್ನೂ ಜೊತೆಯಾಗಿ ನಡೆಸಿದ್ದರು. ಇದೇ ವೇಳೆ ಇವರ ಸ್ನೇಹ ಪ್ರೀತಿಯಾಗಿ ಬದಲಾಗಿತ್ತು ಎಂದು ತಿಳಿದು ಬಂದಿದೆ.

ಅವರ ಸಂಬಂಧಕ್ಕೆ ಸಾಮಾಜಿಕ ಮತ್ತು ಕಾನೂನು ಮಾನ್ಯತೆ ಸಿಗಲೆಂದು ರಾಖಿ ಕುಮಾರಿ ಲಿಂಗ ಪರಿವರ್ತನೆ ಶಸ್ತ್ರಚಿಕಿತ್ಸೆಗೆ ಒಳಗಾಗಿ ರಾಹುಲ್ ಎಂಬ ಹೆಸರನ್ನು ಬದಲಾಯಿಸಿಕೊಂಡಿದ್ದಾಳೆ. ಈ ಶಸ್ತ್ರಚಿಕಿತ್ಸೆಗೆ ಸುಮಾರು 8 ಲಕ್ಷ ವೆಚ್ಚವಾಗಿದ್ದು, ಅದಕ್ಕಾಗಿ ಸಾಲವನ್ನೂ ಪಡೆಯಲಾಗಿದೆ ಎಂದು ತಿಳಿದು ಬಂದಿದೆ.

ಇನ್ನು ಇವರ ಮದುವೆ ವಿಚಾರ ತಿಳಿದ ಕುಟುಂಬದ ಕೆಲ ಸದಸ್ಯರು ವಿರೋಧ ವ್ಯಕ್ತಪಡಿಸಿದ್ದು, ಸಾಮಾಜಿಕ ಜಾಲತಾಣಗಳಲ್ಲಿಯೂ ವ್ಯಾಪಕ ಚರ್ಚೆಗೆ ಕಾರಣವಾಗಿದೆ. ಕೆಲವರು ಇದನ್ನು ವೈಯಕ್ತಿಕ ಸ್ವಾತಂತ್ರ್ಯ ಮತ್ತು ಪ್ರೀತಿಯ ಗೆಲುವು ಎಂದು ಬೆಂಬಲಿಸಿದ್ದಾರೆ.

 

Related Articles

Back to top button
error: Content is protected !!