ಕ್ರೀಡೆ

ಸ್ಟಾರ್ ಕ್ರಿಕೆಟಿಗ ಯಜುವೇಂದ್ರ ಚಹಲ್, ಧನಶ್ರೀ ಡಿವೋರ್ಸ್‌

Views: 105

ಕನ್ನಡ ಕರಾವಳಿ ಸುದ್ದಿ: ಸ್ಟಾರ್ ಕ್ರಿಕೆಟಿಗ ಯಜುವೇಂದ್ರ ಚಹಲ್, ಧನಶ್ರೀ ವರ್ಮಾ ಡಿವೋರ್ಸ್‌ಗೆ ಅಧಿಕೃತ ಮುದ್ರೆ ಬಿದ್ದಿದೆ.

ಮುಂಬೈ ಫ್ಯಾಮಿಲಿ ಕೋರ್ಟ್ ಇಂದು ಇವರಿಬ್ಬರ ಅರ್ಜಿ ಪುರಸ್ಕರಿಸಿ ಡಿವೋರ್ಸ್‌ ಮಂಜೂರು ಮಾಡಿದೆ. ಧನಶ್ರೀ ಅವರಿಂದ ಎರಡೂವರೆ ವರ್ಷದಿಂದ ದೂರವಾಗಿದ್ದ ಚಹಲ್‌ ಅಧಿಕೃತವಾಗಿ ದಾಂಪತ್ಯಕ್ಕೆ ಬ್ರೇಕ್ ಹಾಕಿದ್ದಾರೆ.

ಮಾರ್ಚ್‌ 22ರಿಂದ ಐಪಿಎಲ್ ಹಣಾಹಣಿ ಆರಂಭವಾಗುವ ಹಿನ್ನೆಲೆಯಲ್ಲಿ ಯಜುವೇಂದ್ರ ಚಹಲ್ ಹೈಕೋರ್ಟ್‌ ಮೊರೆ ಹೋಗಿದ್ದರು. ಈ ಡಿವೋರ್ಸ್‌ ರಾದ್ಧಾಂತದಿಂದ ನನಗೆ ಐಪಿಎಲ್‌ ಕಡೆ ಗಮನಹರಿಸಲು ಕಷ್ಟವಾಗುತ್ತಿದೆ. ಹೀಗಾಗಿ ಆದಷ್ಟು ಬೇಗ ವಿಚ್ಛೇದನದ ಅರ್ಜಿ ಇತ್ಯರ್ಥಗೊಳಿಸುವಂತೆ ಮನವಿ ಮಾಡಿದ್ದರು.

ಯಜುವೇಂದ್ರ ಚಹಲ್ ಅವರ ಅರ್ಜಿ ವಿಚಾರಣೆ ನಡೆಸಿದ ನಿನ್ನೆ ಬಾಂಬೆ ಹೈಕೋರ್ಟ್‌, ಫ್ಯಾಮಿಲಿ ನ್ಯಾಯಾಲಯಕ್ಕೆ ನಾಳೆಯೊಳಗೆ ಡಿವೋರ್ಸ್‌ಗೆ ಸಂಬಂಧಪಟ್ಟಂತೆ ಅಂತಿಮ ಆದೇಶ ನೀಡುವಂತೆ ಸೂಚನೆ ನೀಡಿತ್ತು. ಬಾಂಬೆ ಹೈಕೋರ್ಟ್ ಆದೇಶದಂತೆ ಬಾಂದ್ರಾ ಫ್ಯಾಮಿಲಿ ಕೋರ್ಟ್‌ ಇಂದು ಅಂತಿಮ ಆದೇಶ ನೀಡಿದೆ.

ಫ್ಯಾಮಿಲಿ ಕೋರ್ಟ್‌ ಆದೇಶದ ಹಿನ್ನೆಲೆಯಲ್ಲಿ ಯಜುವೇಂದ್ರ ಚಹಲ್ ಹಾಗೂ ಧನಶ್ರೀ ಅವರು ಖುದ್ದು ನ್ಯಾಯಾಲಯಕ್ಕೆ ಹಾಜರಾಗಿದ್ದರು. ಪರಸ್ಪರ ಒಪ್ಪಿಗೆ ಹಾಗೂ ಜೀವನಾಂಶ ನೀಡಲು ಯಜುವೇಂದ್ರ ಚಹಲ್ ಒಪ್ಪಿಗೆ ಸೂಚಿಸಿದ ಹಿನ್ನೆಲೆಯಲ್ಲಿ ಡಿವೋರ್ಸ್ ಮಂಜೂರು ಮಾಡಲಾಗಿದೆ.

ಕ್ರಿಕೆಟಿಗ ಯಜುವೇಂದ್ರ ಚಹಲ್- ಧನುಶ್ರೀ ವರ್ಮಾ ಡಿವೋರ್ಸ್ ಬಗ್ಗೆ ಹಲವು ದಿನಗಳಿಂದ ವದಂತಿ ಹಬ್ಬಿತ್ತು. ಯಜುವೇಂದ್ರ ಚಹಲ್ ಅವರು ಮಾಜಿ ಪತ್ನಿಗೆ 60 ಕೋಟಿ ರೂಪಾಯಿ ಜೀವನಾಂಶ ಕೊಡುವ ಸಾಧ್ಯತೆ ಇದೆ ಎನ್ನಲಾಗಿತ್ತು. ಆದರೆ ಚಹಲ್, ಧನುಶ್ರೀ ವರ್ಮಾಗೆ 4.75 ಕೋಟಿ ರೂಪಾಯಿ ಜೀವನಾಂಶ ನೀಡಲು ಕೋರ್ಟ್ ಆದೇಶ ನೀಡಿದೆ.

Related Articles

Back to top button