ಧಾರ್ಮಿಕ

ಸೆಪ್ಟೆಂಬರ್ 17ರಂದು ವಕ್ವಾಡಿ ಗ್ರಾಮಸ್ಥರಿಂದ ಆನೆಗುಡ್ಡೆ ಶ್ರೀವಿನಾಯಕ ದೇವಸ್ಥಾನದಲ್ಲಿ ಸಾಮೂಹಿಕ ಮೂಡು ಗಣಪತಿ ಸೇವೆ

Views: 0

 

ಭಗವದ್ಭಕ್ತರೇ,

ಇದೇ ಬರುವ 17.09.2023 ನೇ ರವಿವಾರ ಅಪರಾಹ್ನ  ಗಂಟೆ 3.30 ಕ್ಕೆ  ಸರಿಯಾಗಿ ವಕ್ವಾಡಿಯ ಸಮಸ್ತ ಗ್ರಾಮಸ್ಥರಿಂದ ಆನೆಗುಡ್ಡೆ ಶ್ರೀ ವಿನಾಯಕ ದೇವಸ್ಥಾನದಲ್ಲಿ ಲೋಕ ಕಲ್ಯಾಣಕ್ಕಾಗಿ ಸಾಮೂಹಿಕ 1008 ಕಾಯಿ ಮೂಡುಗಣಪತಿ ಸೇವೆ ನಡೆಸಲು ಹಮ್ಮಿಕೊಂಡಿದ್ದೇವೆ.

ಅನಾದಿಕಾಲದಿಂದಲೂ ನಮ್ಮೂರಿನ ಸುಕ್ಷೇಮಕ್ಕಾಗಿ ಗ್ರಾಮಸ್ಥರಿಂದ ಸಾಮೂಹಿಕ ಮೂಡುಗಣಪತಿ ಸೇವೆಯನ್ನು ನಡೆಸಿಕೊಂಡು ಬರಲಾಗಿತ್ತು. ಆದರೆ, ಇತ್ತೀಚಿನ ದಿನಗಳಲ್ಲಿ ಕಾರಣಾಂತರದಿಂದ ಈ ಮೂಡು ಗಣಪತಿ ಸೇವೆಯು ಕೆಲವು ವರ್ಷಗಳಿಂದ ನಡೆಯದೇ ಇರುವುದರಿಂದ ಊರಿನ ಸಮಸ್ತ ಭಕ್ತಾಭಿಮಾನಿಗಳ ಅಭಿಲಾಷೆಯಂತೆ ಮತ್ತೆ ಪುನಃ ಸಾಮೂಹಿಕ 1008 ಕಾಯಿ ಮೂಡುಗಣಪತಿ ಸೇವೆಯನ್ನು ಹಮ್ಮಿಕೊಂಡಿದ್ದೇವೆ.

ಊರಿನ ಸಮಸ್ತ ಭಕ್ತಾಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಈ ಸೇವೆಯಲ್ಲಿ ಪಾಲ್ಗೊಂಡು ಶ್ರೀ ಮಹಾಗಣಪತಿ ದೇವರ ಪೂರ್ಣಾನುಗ್ರಹಕ್ಕೆ ಪಾತ್ರರಾಗಬೇಕಾಗಿ ಅಪೇಕ್ಷಿಸುತ್ತಿದ್ದೇವೆ.

—ವಕ್ವಾಡಿಯ ಸಮಸ್ತ ಭಕ್ತಾಭಿಮಾನಿಗಳು

ವಿಶೇಷ ಸೂಚನೆ :ಮೂಡು ಗಣಪತಿ ಸೇವೆಗೆ ತೆಂಗಿನಕಾಯಿ ನೀಡುವವರು ಶ್ರೀ ಮಹಾಲಿಂಗೇಶ್ವರ ಸಭಾಗ್ರಹ ಮತ್ತು ವಕ್ವಾಡಿ ಜನರಲ್ ಮರ್ಚಂಟ್ ಜಯರಾಮ್ ಶೆಟ್ಟಿ ಅವರ ಅಂಗಡಿಯಲ್ಲಿ ಸೆಪ್ಟೆಂಬರ್ 16ರ ಸಂಜೆ 6. ಗಂಟೆಯೊಳಗೆ ಸೇವಾ ರೂಪದಲ್ಲಿ ನೀಡುವ ತೆಂಗಿನ ಕಾಯಿಯನ್ನು ನೀಡಿ, ತಮ್ಮ ಹೆಸರನ್ನು ನೋಂದಾಯಿಸಿಕೊಳ್ಳುವಂತೆ ವಿನಂತಿಸಲಾಗಿದೆ.

 ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿರಿ : 

ಗಿರೀಶ್ ಐತಾಳ್ ವಕ್ವಾಡಿ 9449555633

ಸುಧಾಕರ ಶೆಟ್ಟಿಗಾರ್ ವಕ್ವಾಡಿ 9900476322

Related Articles

Back to top button
error: Content is protected !!