ಸುರಂಗದೊಳಗಿರುವ ಕಾರ್ಮಿಕರ ಮೊದಲ ವಿಡಿಯೋ ಬಿಡುಗಡೆ:41 ಕಾರ್ಮಿಕರು ಸುರಕ್ಷಿತ ಕುಟುಂಬಸ್ಥರು ನಿರಾಳ

Views: 0
ಡೆಹರಾಡೂನ್, ಉತ್ತರಾಖಂಡದ ಸುರಂಗ ಕುಸಿತದಲ್ಲಿ ಸಿಲುಕಿರುವ 41 ಕಾರ್ಮಿಕರನ್ನು ಸುರಕ್ಷಿತವಾಗಿ ಕರೆತರುವ ಕಾರ್ಯ ನಿರಂತರವಾಗಿ 10 ದಿನವೂ ನಡೆಯುತ್ತಿದ್ದು ಎಲ್ಲ ಕಾರ್ಮಿಕರು ಸುರಕ್ಷಿತವಾಗಿದ್ದಾರೆ. ಸುರಂಗದೊಳಗಿರುವ ಕಾರ್ಮಿಕರ ಮೊದಲ ವಿಡಿಯೋ ಬಿಡುಗಡೆಯಾಗಿದ್ದು ಅಧಿಕಾರಿಗಳು ಮತ್ತು ಕಾರ್ಮಿಕ ಕುಟುಂಬಗಳು ನೆಮ್ಮದಿಯ ನಿಟ್ಟಿಸಿರು ಬಿಟ್ಟಿದ್ದಾರೆ.
ಈ ನಡುವೆ ಸಿಲಿಂಡರಾಕಾರದ ಬಾಟಲಿಗಳಲ್ಲಿ ಬಿಸಿ ಬಿಸಿ ಖಿಚಡಿ ತಯಾರಿಸಿ ಕಳುಹಿಸುವ ಕೆಲಸ ನಡೆದಿದೆ . ಈ ನಡುವೆ ಸೇಬುಹಣ್ಣು ಚೂರು ಮಾಡಿ ನೀಡಲಾಗಿತ್ತಿದ್ದು, ಅಗತ್ಯ ಔಷಧಿ ಪೂರೈಕೆ ಮಾಡಲಾಗುತ್ತಿದೆ. ರಕ್ಷಣಾ ಕಾರ್ಯಕರ್ತರು ಸುರಂಗದಲ್ಲಿನ ಅವಶೇಷಗಳ ಮೂಲಕ 25 ಮೀಟರ್ ಕೊರೆದು, ಐದು ದಿನಗಳ ಕಾಲ ಅಲ್ಲಿ ಸಿಕ್ಕಿಬಿದ್ದ 41 ಕಾರ್ಮಿಕರ ಹತ್ತಿರ ತಲುಪಿದ್ದು ಎಲ್ಲಾ ಕಾರ್ಮಿಕರನ್ನು ಸುರಕ್ಷಿತವಾಗಿ ಕರೆತರುವ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಸಿಲ್ಕ್ಯಾರಾ ಸುರಂಗದಲ್ಲಿ ಸಿಲುಕಿರುವ ಕಾರ್ಮಿಕರಿಗೆ 10 ದಿನಗಳಲ್ಲಿ ಇದೇ ಮೊದಲ ಬಿಸಿ ಬಾರಿಗೆಊಟ ಖಿಚಡಿ ಸಿಗಲಿದೆ. ಬಿಸಿ ಬಿಸಿ ಕಿಚಡಿಯನ್ನು ಸುರಂಗದ ಒಳಗೆ ಸಿಲುಕಿರುವ ಕಾರ್ಮಿಕರಿಗೆ ಕಳುಹಿಸಲಾಗುವುದು. ನಾವು ಶಿಫಾರಸು ಮಾಡಿದ ಆಹಾರವನ್ನು ಮಾತ್ರ ನಾವು ತಯಾರಿಸುತ್ತಿದ್ದೇವೆ” ಎಂದು ಅಡುಗೆ ತಯಾರಕರು ಹೇಳಿದ್ದಾರೆ.
ರಕ್ಷಣಾ ಕಾರ್ಯಕರ್ತರು ಸುರಂಗದಲ್ಲಿನ ಅವಶೇಷಗಳ ಮೂಲಕ 25 ಮೀಟರ್ ಕೊರೆದು, ಐದು ದಿನಗಳ ಕಾಲ ಅಲ್ಲಿ ಸಿಕ್ಕಿಬಿದ್ದ ೪೦ ಕಾರ್ಮಿಕರ ಹತ್ತಿರ ತಲುಪಿದ್ದಾರೆ. 800ಎಂಎಂ ಮತ್ತು 900ಎಂಎಂ ವ್ಯಾಸದ ಪೈಪ್‌ಗಳನ್ನು ಒಂದರ ನಂತರ ಒಂದರಂತೆ ಸೇರಿಸಲು ಕಾರ್ಮಿಕರು 60 ಮೀಟರ್‌ಗಳವರೆಗೆ ಡ್ರಿಲ್ ಮಾಡಿ ಅವರ ರಕ್ಷಣೆ ಮಾಡುವ ಕೆಲಸ ಮುಂದುವರಿದಿದೆ.
ಕುಸಿದ ಭಾಗದ ಹಿಂದೆ ಸಿಲುಕಿರುವ ಕಾರ್ಮಿಕರ ರಕ್ಷಣೆಗೆ ಮಾರ್ಗವನ್ನು ರಚಿಸಲಾಗುತ್ತದೆ. ಸುರಂಗ ನಿರ್ಮಾಣದ ನಿರ್ದೇಶಕ ಅಂಶು ಮನೀಶ್ ಖಲ್ಖೋ ಹೇಳಿದ್ದಾರೆ
ಕಾರ್ಮಿಕರು ಸುರಕ್ಷಿತ: ಸಿಎಂ
“ಉತ್ತರಕಾಶಿಯ ಸಿಲ್ಕ್ಯಾರಾದಲ್ಲಿ ನಿರ್ಮಾಣ ಹಂತದಲ್ಲಿರುವ ಸುರಂಗದೊಳಗೆ ಸಿಲುಕಿರುವ ಕಾರ್ಮಿಕರನ್ನು ಸುರಕ್ಷಿತವಾಗಿದ್ದಾರೆ ಎಂದು ಉತ್ತರಾಖಂಡದ ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಹೇಳಿದ್ದಾರೆ.
ರಕ್ಷಣಾ ಕಾರ್ಯಾಚರಣೆಯ ಭಾಗವಾಗಿ, ೬ ಇಂಚಿನ ವ್ಯಾಸದ ಪೈಪ್‌ಲೈನ್ ಅನ್ನು ಶಿಲಾಖಂಡರಾಶಿಗಳಿಗೆ ಅಡ್ಡಲಾಗಿ ಯಶಸ್ವಿಯಾಗಿ ಹಾಕಲಾಗಿದೆ ಇದರ ಮೂಲಕ ಆಹಾರ ಪದಾರ್ಥಗಳು, ಔಷಧಿಗಳು ಮತ್ತು ಇತರ ಸರಕುಗಳು ಅಗತ್ಯಕ್ಕೆ ಅನುಗುಣವಾಗಿ ಕಾರ್ಮಿಕರಿಗೆ ಸುಲಭವಾಗಿ ಕಳುಹಿಸಲಾಗುತ್ತಿದೆ ಎಂದಿದ್ದಾರೆ
ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿರುವ ಕೇಂದ್ರಿಯ ಸಂಸ್ಥೆಗಳು, ಎಸ್‌ಡಿಆರ್‌ಎಫ್ ಮತ್ತು ರಾಜ್ಯ ಆಡಳಿತ ತಂಡಗಳು ಅವಿರತವಾಗಿ ಕೆಲಸ ಮಾಡುತ್ತಿವೆ. ಎಲ್ಲಾ ಕಾರ್ಮಿಕರನ್ನು ಸುರಕ್ಷಿತವಾಗಿ ಸ್ಥಳಾಂತರಿಸಲು ಸಮರೋಪಾದಿಯಲ್ಲಿ ಕಾರ್ಯಾಚರಣೆ ನಡೆಸಲಾಗುತ್ತಿದೆ ಎಂದರು.







