ಜನಮನ

ಸುರಂಗದಿಂದ ಮಗನ ಬರುವಿಕೆಗಾಗಿ ಕಾಯುತ್ತಿದ್ದ ತಂದೆ, ರಕ್ಷಣೆ ಮಾಡುವ 1 ಗಂಟೆ ಮೊದಲೇ ಹೃದಯಾಘಾತ!

Views: 0

ರಾಂಚಿ: ಉತ್ತರಾಖಂಡ್​ನ ಉತ್ತರಕಾಶಿಯ ಸುರಂಗದಲ್ಲಿ ಸಿಲುಕಿದ್ದ 41 ಕಾರ್ಮಿಕರನ್ನು 17 ದಿನಗಳ ಬಳಿಕ ಯಶಸ್ವಿಯಾಗಿ ಕಾರ್ಯಾಚರಣೆ ಮಾಡಿ ಹೊರತೆಗೆಯಲಾಗಿದೆ. ಸುರಂಗದಿಂದ ಹಂತ ಹಂತವಾಗಿ 41 ಕಾರ್ಮಿಕರನ್ನು ಹೊರಗೆ ಕರೆತಂದ ಬಳಿಕ ಅವರನ್ನು ಆಸ್ಪತ್ರೆಗೆ ಸ್ಥಳಾಂತರ ಮಾಡಲಾಗಿದ್ದು ಕುಟುಂಬಸ್ಥರೆಲ್ಲ ಸಂತಸ ವ್ಯಕ್ತಪಡಿಸಿದ್ದಾರೆ. ಆದ್ರೆ ಈ ಎಲ್ಲ ಯಶಸ್ಸಿನ, ಸಂತಸದ ನಡುವೆ ಮಗನ ಬರುವಿಕೆಗಾಗಿ ಕಾಯುತ್ತಿದ್ದ ಕಾರ್ಮಿಕನೋರ್ವನ ತಂದೆ, ರಕ್ಷಣೆ ಮಾಡುವ 1 ಗಂಟೆ ಮೊದಲೇ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ.

ಜಾರ್ಖಂಡ್​ನ ಸಿಂಘ್​​ಬೂಮ್​ ಜಿಲ್ಲೆಯ ಭಾಡಾ ಗ್ರಾಮದ ನಿವಾಸಿ ಬಾಸೆಟ್ ಮುರ್ಮು (70) ಹೃದಯಾಘಾತದಿಂದ ಸಾವನ್ನಪ್ಪಿದವರು. ಉತ್ತರಕಾಶಿಯ ಸಿಲ್ಕ್ಯಾರಾ ಸುರಂಗದಲ್ಲಿ ಸಿಲುಕಿದ್ದ 41 ಕಾರ್ಮಿಕರ ಪೈಕಿ ಭಕ್ತು ಮುರ್ಮು (29) ಎನ್ನುವ ಕಾರ್ಮಿಕನು ಒಬ್ಬರಾಗಿದ್ದಾರೆ. ಕಳೆದ 17 ದಿನಗಳಿಂದ ನನ್ನ ಮಗ ಬರುತ್ತಾನೆಂದು ಕಾದು, ಉಸಿರು ಬಿಗಿ ಹಿಡಿದು ಕಾಯುತ್ತಿದ್ದ ಬಾಸೆಟ್ ಮುರ್ಮು, ಮಗನನ್ನು ರಕ್ಷಣೆ ಮಾಡುವ 1 ಗಂಟೆ ಮೊದಲೇ ಸಾವನ್ನಪ್ಪಿರುವುದು ಅತ್ಯಂತ ನೋವಿನ ಸಂಗತಿಯಾಗಿದೆ.

ನವೆಂಬರ್​​ 12 ರಂದು ಸುರಂಗದಲ್ಲಿ ಮಗ ಸಿಲುಕಿದ್ದಾನೆಂಬ ವಿಷಯ ತಿಳಿಯುತ್ತಿದ್ದಂತೆ ಬಾಸೆಟ್ ಮುರ್ಮು ಖಿನ್ನತೆಗೆ ಒಳಗಾಗಿದ್ದನು. ಮಗನ ಬಗ್ಗೆ ದಿನಲೂ ಮಾಹಿತಿ ತಿಳಿದುಕೊಳ್ಳುತ್ತಿದ್ದನು. ಆದ್ರೆ ಸುರಂಗದಿಂದ ಹೊರ ಬರುವುದು ತಡವಾಗುತ್ತಿದ್ದಂತೆ ಹೆಚ್ಚು ಖಿನ್ನತೆಗೆ ಒಳಗಾಗಿದ್ದರು. ಇದೇ ಅವರಿಗೆ ಹೃದಯಾಘಾತವಾಗಲು ದೊಡ್ಡ ಕಾರಣ ಎಂದು ಅವರ ಕುಟುಂಬಸ್ಥರು ಮಾಹಿತಿ ನೀಡಿದ್ದಾರೆ.

ಮೃತನಿಗೆ ಮೂವರು ಗಂಡು ಮಕ್ಕಳಿದ್ದು ಅದರಲ್ಲಿ ಟನಲ್​​ನಲ್ಲಿ ಸಿಲುಕಿದ್ದ ಭಕ್ತು ಮುರ್ಮು 2ನೇ ಮಗನಾಗಿದ್ದನು ಎಂದು ತಿಳಿದು ಬಂದಿದೆ. ದೊಡ್ಡ ಮಗ ಚೆನ್ನೈನಲ್ಲಿ ಕೆಲಸ ಮಾಡುತ್ತಿದ್ದಾರೆ. ಕೊನೆ ಮಗ ಅದೇ ಗ್ರಾಮದಲ್ಲಿ ದಿನಗೂಲಿ ಕೆಲಸ ಮಾಡುತ್ತಿದ್ದಾನೆ. ದುರಂತ ಎಂಬಂತೆ ಮಗ ಸುರಂಗದಿಂದ ಹೊರ ಬರುವ 1 ಗಂಟೆ ಮೊದಲೇ ತಂದೆ ಮೃತ ಪಟ್ಟಿರುವುದು ಖೇದಕರ ಸಂಗತಿಯಾಗಿದೆ. ಸದ್ಯ ಅವರ ಕುಟುಂಬಸ್ಥರೆಲ್ಲ ದುಃಖದಲ್ಲಿ ಮುಳುಗಿದ್ದಾರೆ ಎನ್ನಲಾಗಿದೆ.

Related Articles

Back to top button
error: Content is protected !!