ಜನಮನ

ಸೀಟಿನಲ್ಲಿ ಕೂತಿದ್ದ ಅಪರಿಚಿತೆ ಕೈಗೆ ಮಗು ಕೊಟ್ಟ ತಾಯಿ,ಮಗು ಕದ್ದು ಪರಾರಿಯಾದ ಮಹಿಳೆ

Views: 89

ಮಂಡ್ಯ: ತುಂಬಿದ್ದ ಬಸ್​ನಲ್ಲಿ ಸೀಟು ಸಿಗದೆ ಎತ್ತಿಕೊಳ್ಳಲು ನೀಡಿದ್ದ ಮಗುವನ್ನು ಅಪರಿಚಿತೆ ಕದ್ದು  ಕ್ಷಣಾರ್ಧದಲ್ಲಿ ಪರಾರಿಯಾದ ಘಟನೆ ಬೆಳಕಿಗೆ ಬಂದಿದೆ.

ಮಂಡ್ಯ ಜಿಲ್ಲೆಯ ಮಳವಳ್ಳಿ KSRTC ಬಸ್ ನಿಲ್ದಾಣದಲ್ಲಿ ಇಂತಹದೊಂದು ಕೃತ್ಯ ಬಯಲಾಗಿದೆ.

ನರಸೀಪುರ ತಾಲೂಕಿನ ವಡ್ಡರಕೊಪ್ಪಲು ನಿವಾಸಿ ಸವಿತಾ ಮಗು ಕಳೆದುಕೊಂಡ ತಾಯಿ. ಚನ್ನಪಟ್ಟಣದ ಬಸ್ ನಿಲ್ದಾಣದಲ್ಲಿ ಸವಿತಾ ಮಗುವಿನ ಸಮೇತ ಬಸ್ ಹತ್ತಿದ್ದಾರೆ. ಬಸ್ ನಲ್ಲಿ ಜನರು ತುಂಬಿದ್ದ ಕಾರಣ ಸೀಟ್ ನಲ್ಲಿ ಕೂತಿದ್ದ ಅಪರಿಚಿತ ಮಹಿಳೆಯೊಬ್ಬರ ಕೈಗೆ ಸವಿತಾ ಮಗು ನೀಡಿದ್ದಾರೆ. ಆದರೆ ಮಳವಳ್ಳಿ ಬಸ್ ನಿಲ್ದಾಣದಲ್ಲಿ ತಾನೂ ಇಳಿಯುವುದಾಗಿ ಹೇಳಿ ಕ್ಷಣಾರ್ಧದಲ್ಲಿ ಮಗು ಜೊತೆ ಮಹಿಳೆ ಪರಾರಿಯಾಗಿದ್ದಾಳೆ.

ಸವಿತಾ ಲಗೇಜ್ ಹಿಡಿದುಕೊಂಡು ಬಸ್ ನಿಂದ ಇಳಿಯುವಷ್ಟರಲ್ಲಿ ಮಗು ಸಮೇತ ಅಪರಿಚಿತ ಮಹಿಳೆ ಎಸ್ಕೇಪ್ ಆಗಿದ್ದಾಳೆ. ಸದ್ಯ 7 ತಿಂಗಳ ಗಂಡು ಮಗು ಕಳೆದುಕೊಂಡು ತಾಯಿ ಕಂಗಾಲಾಗಿದ್ದು, ಮಳವಳ್ಳಿ ಪಟ್ಟಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Related Articles

Back to top button
error: Content is protected !!