ಇತರೆ

ಸಹದ್ಯೋಗಿ ಪೊಲೀಸ್ ಸಿಬ್ಬಂದಿಯಿಂದ ಕಿರುಕುಳಕ್ಕೊಳಗಾದ ಮಹಿಳೆ ಆತ್ಮಹತ್ಯೆ

Views: 289

ಕನ್ನಡ ಕರಾವಳಿ ಸುದ್ದಿ: ಸಹದ್ಯೋಗಿ ಪೊಲೀಸ್ ಸಿಬ್ಬಂದಿಯಿಂದ ಕಿರುಕುಳಕ್ಕೊಳಗಾದ ಮಹಿಳೆ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಭದ್ರಾವತಿ ಗ್ರಾಮಾಂತರ ಪೊಲೀಸ್ ಕ್ವಾಟರ್ಸ್‌ನಲ್ಲಿ ನಡೆದಿದೆ.

ಸಹದ್ಯೋಗಿಯ ಪತ್ನಿಗೆ ಬ್ಲ್ಯಾಕ್ ಮೇಲ್ ಮಾಡಿ ದೈಹಿಕ-ಮಾನಸಿಕ ಕಿರುಕುಳ ನೀಡಿದ ಪೊಲೀಸ್ ಪೇದೆ ಮೌನೇಶ್ ಶೀಕಲ್‌ನಿಂದ ಬೇಸತ್ತ ರಕ್ಷಿತಾ(35) ಆತ್ಮಹತ್ಯೆಗೆ ಶರಣಾಗಿದ್ದಾರೆ.

ಹನುಮಂತ ನಗರ ಪೊಲೀಸ್ ಕ್ವಾರ್ಟರ್ಸ್ ನಲ್ಲಿ ರಕ್ಷಿತಾ ವಾಸವಿದ್ದಿದ್ದು, ಇದೇ ಕ್ವಾರ್ಟರ್ಸ್ ನೆಲ ಅಂತಸ್ತಿನಲ್ಲಿ ಮೌನೇಶ್ ಶೀಕಲ್ ವಾಸವಿದ್ದರು. ಮಹಿಳೆಗೆ ಅಶ್ಲೀಲ ಮೆಸೇಜ್ ಕಳಿಸಿ ಮಾನಸಿಕ ಹಾಗೂ ದೈಹಿಕ ಹಿಂಸೆ ನೀಡುತ್ತಿದ್ದನು. ಇದರಿಂದ ಬೇಸತ್ತು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಳು.

ಪತ್ನಿಯ ಸಾವಿನಿಂದ ಆಘಾತಕ್ಕೊಳಗಾದ ಪತಿ, ಸಾವಿಗೆ ಕಾರಣ ಕಂಡುಕೊಳ್ಳಲು ಮುಂದಾಗಿದ್ದರು. ಪತ್ನಿ ಬಳಸುತ್ತಿದ್ದ ಮೊಬೈಲ್‌ ಪರಿಶೀಲನೆಗೆ ಒಳಪಡಿಸಿದ್ದು, ಪರಿಶೀಲನೆ ವೇಳೆ ಪತ್ನಿಗೆ ಮೌನೇಶ್ ಶೀಕಲ್ ಬ್ಲ್ಯಾಕ್ ಮೇಲ್ ಮಾಡುತ್ತಿದ್ದ ಎಂಬುದು ಬೆಳಕಿಗೆ ಬಂದಿದೆ. 15 ವರ್ಷದ ಹಿಂದೆ ಮಹಿಳೆಯನ್ನು ಮದುವೆಯಾಗಿದ್ದ ಪೊಲೀಸ್ ಎರಡು ಮಕ್ಕಳೊಂದಿಗೆ ಸಂಸಾರ ನಡೆಸುತ್ತಿದ್ದನು.

ಕಳೆದ ಆಗಸ್ಟ್ 20 ರಿಂದ ಕಿರುಕುಳ ನೀಡುತ್ತಿದ್ದನ್ನು ತನ್ನ ತಾಯಿಯೊಂದಿಗೆ ಮಹಿಳೆ ಈ ವಿಚಾರವನ್ನು ಹಂಚಿಕೊಂಡಿದ್ದಳು. ಪೊಲೀಸ್ ಆಗಿರುವ ತನ್ನ ಪತಿಗೆ ಈ ವಿಚಾರವನ್ನು ತಿಳಿಸಲಾಗುತ್ತಿಲ್ಲ ಎಂದು ಆಸಹಾಯಕತೆ ವ್ಯಕ್ತಪಡಿಸಿದ್ದಳು. ಕಿರುಕುಳ ನಿಲ್ಲದ ಕಾರಣ ಬೇಸತ್ತು ಆತ್ಮಹತ್ಯೆಗೆ ಶರಣಾಗಿದ್ದಾಳೆ. ಪತ್ನಿಯ ಸಾವಿಗೆ ತನ್ನದೇ ಇಲಾಖೆಯ ಸಿಬ್ಬಂದಿ ಕಾರಣ ಎಂದು ಪತಿ ಅರಿತಿದ್ದು, ನಿನ್ನೆ ಪೊಲೀಸ್ ವಿರುದ್ಧ ಮಹಿಳೆ ಪತಿ ದೂರು ನೀಡಿದ್ದಾನೆ.

 

Related Articles

Back to top button
error: Content is protected !!