ಸಮವಸ್ತ್ರದಲ್ಲೇ ‘ಓ ಮೇರಿ ಜಾನ್, ಹೇ ಓ ಮೇರಿ ಜಾನ್’ ಹಾಡಿಗೆ ರೀಲ್ಸ್ ಇಬ್ಬರು ಮಹಿಳಾ ಕಾನ್ಸ್‌ಟೇಬಲ್ ಅಮಾನತು

Views: 0
ಪಾಟ್ನಾ: ಪೊಲೀಸ್ ಸಮವಸ್ತ್ರದಲ್ಲೇ ರೀಲ್ಸ್ ಮಾಡಿದ್ದಕ್ಕೆ ಮಹಿಳಾ ಕಾನ್ಸ್ಟೇಬಲ್ನನ್ನು ಅಮಾನತು ಮಾಡಿರುವ ಘಟನೆ ಬಿಹಾರದಲ್ಲಿ ನಡೆದಿದೆ. ಖುಷ್ಬೂ ಕುಮಾರಿ ಅಮಾನತ್ತಾದ ಮಹಿಳಾ ಕಾನ್ಸ್‌ಟೇಬಲ್. ಮಹಾಬೋಧಿ ದೇವಸ್ಥಾನದೊಳಗೆ ಮಹಿಳಾ ಕಾನ್ಸ್ಟೇಬಲ್ವೊಬ್ಬರು ರೀಲ್ಸ್ ಮಾಡುವ ಮೂಲಕ ಯಡವಟ್ಟಿಗೆ ಸಿಲುಕಿಕೊಂಡಿದ್ದಾರೆ.

ರೀಲ್ಸ್ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ ಮಹಿಳಾ ಕಾನ್ಸ್ಟೇಬಲ್ನನ್ನು ಕರ್ತವ್ಯದಿಂದ ಅಮಾನತುಗೊಳಿಸಿದ್ದಾರೆ. ಕರ್ತವ್ಯದಲ್ಲಿದ್ದ ಇಬ್ಬರು ಮಹಿಳಾ ಕಾನ್‌ಸ್ಟೆಬಲ್‌ಗಳು ದೇವಾಲದಲ್ಲಿ ‘ಓ ಮೇರಿ ಜಾನ್, ಹೇ ಓ ಮೇರಿ ಜಾನ್’ ಎಂಬ ಹಾಡಿಗೆ ಡ್ಯಾನ್ಸ್ ಮಾಡುತ್ತಾ ರೀಲ್ಸ್ ರೆಕಾರ್ಡ್ ಮಾಡಿದ್ದಾರೆ. ಆ ರೀಲ್ಸ್ ಅನ್ನು ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿಕೊಂಡಿದ್ದಾರೆ. ಇದೇ ವಿಡಿಯೋ ಎಲ್ಲೆಡೆ ವೈರಲ್ ಆಗಿದೆ.
ವೈರಲ್ ಆದ ವಿಡಿಯೋ ಗಮನಿಸಿದ ಉಪವಿಭಾಗದ ಪೊಲೀಸ್ ಅಧಿಕಾರಿ, ಬೋಧಗಯಾ, ಪೊಲೀಸ್ ಇನ್ಸ್‌ಪೆಕ್ಟರ್ ಕಮ್ ಸ್ಟೇಷನ್ ಹೆಡ್ ತನಿಖೆ ನಡಸಿ ಮಹಿಳಾ ಕಾನ್‌ಸ್ಟೆಬಲ್ ಅನ್ನು ಕರ್ತವ್ಯದಿಂದ ಅಮಾನತುಗೊಳಿಸಿದ್ದಾರೆ. ಮಹಾಬೋಧಿ ದೇವಾಲಯದ ಒಳಗೆ ಮೊಬೈಲ್ ಫೋನ್‌ಗಳನ್ನು ನಿಷೇಧಿಸಲಾಗಿದೆ. ಆದರೂ ತಿಳುವಳಿಕೆಯಿದ್ದ ಪೊಲೀಸ್ ಕಾನ್‌ಸ್ಟೆಬಲ್ ಹೀಗೆ ರೀಲ್ಸ್ ಮಾಡಿ ಪೋಸ್ಟ್ ಮಾಡಿದ್ದರಿಂದ ಕೆಲಸದಿಂದ ಅವರನ್ನು ತೆಗೆದು ಹಾಕಲಾಗಿದೆ.






