ಇತರೆ
‘ಸಪ್ತಸಾಗರದಾಚೆ ಎಲ್ಲೋ’ ನಟಿ ಚೈತ್ರಾ ಆಚಾರ್ ಹೊಸ ಅವತಾರ!

Views: 200
‘ಟೋಬಿ’ ಮತ್ತು ‘ಸಪ್ತಸಾಗರದಾಚೆ ಎಲ್ಲೋ’ ಸಿನಿಮಾಗಳು ಮೂಲಕ ಖ್ಯಾತಿ ಗಳಿಸಿಕೊಂಡ ನಟಿ ಚೈತ್ರಾ ಆಚಾರ್ ಅವರು ಹೊಸ ಅವತಾರಗಳಲ್ಲಿ ಕಾಣಿಸಿಕೊಂಡಿದ್ದಾರೆ.

ನಟಿ ಚೈತ್ರಾ ಆಚಾರ್ ಬೋಲ್ಡ್ ಆಗಿ ಫೋಟೋಶೂಟ್ ಮಾಡಿಸಿಕೊಳ್ಳುವ ಗಮನ ಸೆಳೆಯುತ್ತಿದೆ. ಸದ್ಯ ಇವರ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿವೆ.

ತೆರೆಮೇಲೆ ಅದ್ಭುತ ಪರ್ಫಾಮೆನ್ಸ್ ಮಾಡಿ ಸೈ ಎನಿಸಿಕೊಂಡಿರುವ ನಟಿ ಚೈತ್ರಾ ಆಚಾರ್ ಆಫ್ ಸ್ಕ್ರೀನ್ ನಲ್ಲಿ ಹಾಟ್ ಅಂಡ್ ಬೋಲ್ಡ್ ಆಗಿ ಕಾಣಿಸಿಕೊಂಡಿದ್ದಾರೆ.

ಬಿಳಿ ಬಣ್ಣದ ಬಟ್ಟೆ ಧರಿಸುವ ಮೂಲಕ ಫೋಟೋಶೂಟ್ ಮಾಡಿಸಿದ್ದಾರೆ. ಮಾದಕ ಲುಕ್ನಲ್ಲಿ ಕಾಣಿಸಿಕೊಂಡ ನಟಿ ಪಡ್ಡೆಗಳ ಹಾರ್ಟ್ ಬ್ರೇಕ್ ಮಾಡಿದ್ದಾರೆ.

ಸದ್ಯ ಚೈತ್ರಾ ಅವರ ಈ ಫೋಟೋಗಳು ಸೋಶಿಯಲ್ ಮಿಡಿಯಾದ ಸೆನ್ಸೇಷನ್ ಆಗಿವೆ. ಅನೇಕರು ನಟಿಯ ಹೊಸ ಅವತಾರವನ್ನು ಕಂಡು ಕಾಮೆಂಟ್ ಮಾಡುತ್ತಿದ್ದಾರೆ.








