ಶಿಕ್ಷಣ

ಶಾಲಾ ವಾಟರ್ ಟ್ಯಾಂಕ್ ಗೆ ದುಷ್ಕರ್ಮಿಗಳಿಂದ ಕೀಟನಾಶಕ ಬೆರೆಸಿದ ಆರೋಪ :12 ಮಕ್ಕಳು ಆಸ್ಪತ್ರೆಗೆ ದಾಖಲು

Views: 82

ಕನ್ನಡ ಕರಾವಳಿ ಸುದ್ದಿ: ಬೆಳಗಾವಿ ಜಿಲ್ಲೆಯ ಸವದತ್ತಿ ತಾಲೂಕಿನ ಹೂಲಿಕಟ್ಟಿ ಗ್ರಾಮದಲ್ಲಿ ಕೀಟನಾಶಕ‌ ಮಿಶ್ರಿತ ನೀರು ಸೇವಿಸಿ 12 ಮಕ್ಕಳ ಆರೋಗ್ಯದಲ್ಲಿ ಏರುಪೇರಾಗಿ ಆಸ್ಪತ್ರೆಗೆ ದಾಖಲಾದ ಘಟನೆ ನಡೆದಿದೆ.

ಗ್ರಾಮದ ಜನತಾ ಕಾಲೋನಿ ಸರ್ಕಾರಿ ಕಿರಿಯ ಪ್ರಾಥಮಿಕ ಕನ್ನಡ ಶಾಲಾ ಆವರಣದಲ್ಲಿರುವ ವಾಟರ್ ಟ್ಯಾಂಕ್ ಗೆ ದುಷ್ಕರ್ಮಿಗಳು ಕೀಟನಾಶಕ ಬೆರೆಸಿದ್ದಾರೆ ಎನ್ನಲಾಗಿದೆ.

ಕೀಟನಾಶಕ ಮಿಶ್ರಿತ ನೀರು ಸೇವನೆ ಮಾಡ್ತಿದ್ದಂತೆ ಮಕ್ಕಳ‌ ಆರೋಗ್ಯದಲ್ಲಿ ಏರುಪೇರಾಗಿದೆ. ನೀರು ಸೇವಿಸಿದ ಬಳಿಕ 12 ಮಕ್ಕಳಿಗೆ ತಲೆಸುತ್ತು, ವಾಂತಿ ಹಿನ್ನೆಲೆ ಸವದತ್ತಿ ತಾಲೂಕಾ ಆಸ್ಪತ್ರೆಗೆ ರವಾನಿಸಿ ಚಿಕಿತ್ಸೆ ನೀಡಲಾಗುತ್ತಿದೆ.

ಬೆಳಗಾವಿ ಜಿಲ್ಲಾ ಆರೋಗ್ಯಾಧಿಕಾರಿ ಈಶ್ವರ್ ಗಡಾದ್,‌ ಡಿಡಿಪಿಐ ಲೀಲಾವತಿ ಹಿರೇಮಠ ಭೇಟಿ ‌ನೀಡಿ ಮಕ್ಕಳ ಆರೋಗ್ಯ ವಿಚಾರಿಸಿದ್ದಾರೆ. ಮಕ್ಕಳ ಆರೋಗ್ಯದಲ್ಲಿ ಸದ್ಯ ಚೇತರಿಕೆ ಕಂಡುಬಂದಿದೆ.

ಕೀಟನಾಶಕ ಬೆರೆಸಿದ್ದರ ಬಗ್ಗೆ ಪೊಲೀಸರು ತನಿಖೆ ಮಾಡುತ್ತಿದ್ದಾರೆ ಎಂದು ಡಿಎಚ್ಒ ಮಾಹಿತಿ ನೀಡಿದ್ದಾರೆ. ಸವದತ್ತಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

Related Articles

Back to top button