ಜನಮನ

ಶತಾಯುಷಿ ಪಟೇಲರ ಕಮಲಮ್ಮಮತ ಚಲಾಯಿಸಿ ಪ್ರೇರಣೆಯಾದರು..!

Views: 35

ಮಹದೇವಪುರ, ಚುನಾವಣಾ ಆಯೋಗವು 85 ವರ್ಷ ಮೇಲ್ಪಟ್ಟ ಹಿರಿಯ ನಾಗರಿಕರ ಮನೆಗೆ ಮತಗಟ್ಟೆ ಅಧಿಕಾರಿಗಳು ಪೊಲಿಸ್ ಭದ್ರತೆಯೊಂದಿಗೆ ತೆರಳಿ ಮತದಾನ ಪಡೆಯುವ ವಿಧಾನ ರೂಪಿಸಿದ ಹಿನ್ನೆಲೆಯಲ್ಲಿ ಮಂಡೂರು ಗ್ರಾಮದ ಶತಾಯುಷಿ ಪಟೇಲರ ಕಮಲಮ್ಮ ನಾರಾಯಣಸ್ವಾಮಿ ಮತ ಚಲಾಯಿಸಿದರು.

ಶತಾಯುಷಿ ಪಟೇಲರ ಕಮ್ಮಲಮ್ಮ ಅವರ ಪುತ್ರ ಶ್ರೀನಿವಾಸ್ ಗೌಡ ಮಾತನಾಡಿ, ಭಾರತ ದೇಶದಲ್ಲಿ ಮತದಾನ ಪ್ರಾರಂಭಗೊಂಡಾಗಿನಿಂದಲು ನಮ್ಮ ತಾಯಿ ಮತದಾನದ ಹಕ್ಕನ್ನು ಚಲಾಯಿಸುತ್ತಿದ್ದಾರೆ

ಇಂತಹ ಶತಾಯುಷಿ ಮತ ದಾರರು ನಮ್ಮ ಗ್ರಾಮದ ಹೆಮ್ಮೆ. ಮತದಾರರು ತಾವೆಲ್ಲರೂ ಇವರನ್ನು ಪ್ರೇರಣೆಯಾಗಿಟ್ಟುಕೊಂಡು, ಮತದಾನ ಪ್ರಕ್ರಿಯೆಯಲ್ಲಿ ಭಾಗವಹಿಸಬೇಕು ಎಂದು ಮನವಿ ಮಾಡಿದರು.

Related Articles

Back to top button
error: Content is protected !!