ಶಂಕರನಾರಾಯಣ ಸರಕಾರಿ ಪ್ರಥಮ ದರ್ಜೆ ಕಾಲೇಜು: ಸಂವಿಧಾನ ದಿನಾಚರಣೆ
'ಸಂವಿಧಾನವು ಕೇವಲ ಕಾನೂನುಗಳ ಸಂಕಲನವಾಗಿರದೇ, ದೇಶದ ಪ್ರತಿಯೊಬ್ಬ ನಾಗರಿಕನ ಹಕ್ಕುಗಳನ್ನು ರಕ್ಷಿಸುವ ಜೀವಂತ ದಾಖಲೆ' ---- ಸದಾನಂದ ಬೈಂದೂರು. ಸಂಪನ್ಮೂಲ ವ್ಯಕ್ತಿ
Views: 32
ಕನ್ನಡ ಕರಾವಳಿ ಸುದ್ದಿ: ಶಂಕರನಾರಾಯಣ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಸಂವಿಧಾನ ದಿನಾಚರಣೆಯನ್ನು ಅರ್ಥಪೂರ್ಣವಾಗಿ ಆಚರಿಸಲಾಯಿತು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿ ಹಾಗೂ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ ಸದಾನಂದ ಬೈಂದೂರು ಅವರು ಭಾರತೀಯ ಸಂವಿಧಾನದ ಮಹತ್ವ, ಭಾರತೀಯ ಪ್ರಜಾಪ್ರಭುತ್ವ ಪರಂಪರೆ ಹಾಗೂ ಜನಜೀವನದ ಸುಧಾರಣೆಯಲ್ಲಿ ಸಂವಿಧಾನದ ಪಾತ್ರದ ಕುರಿತು ಆಳವಾದ ಚರ್ಚೆ ನಡೆಸಿದರು. ಸಂವಿಧಾನ ಮತ್ತು ಅದರ ಪೂರಕವಾಗಿರುವ ವಿವಿಧ ಕಾನೂನುಗಳ ಬಗ್ಗೆ ವಿದ್ಯಾರ್ಥಿಗಳಿಗೆ ಪ್ರಾಯೋಗಿಕ ಜ್ಞಾನ ನೀಡುವ ಅಗತ್ಯವಿದೆ ಎಂದು ಅವರು ಹೇಳಿದರು. ಸಂವಿಧಾನವು ಕೇವಲ ಕಾನೂನುಗಳ ಸಂಕಲನವಾಗಿರದೇ, ದೇಶದ ಪ್ರತಿಯೊಬ್ಬ ನಾಗರಿಕನ ಹಕ್ಕುಗಳನ್ನು ರಕ್ಷಿಸುವ ಜೀವಂತ ದಾಖಲೆ ಎಂಬುದಾಗಿ ಅವರು ಅಭಿಪ್ರಾಯಪಟ್ಟರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ಕಾಲೇಜಿನ ಪ್ರಾಂಶುಪಾಲರಾದ ಡಾ.ವೆಂಕಟರಾಮ್ ಭಟ್ ಅವರು ಭಾರತ ಸಂವಿಧಾನವು ದೇಶದ ಏಕತೆ, ಸಹಿಷ್ಣುತೆ ಮತ್ತು ನ್ಯಾಯಸಮ್ಮತ ಆಡಳಿತಕ್ಕೆ ಬುನಾದಿಯಾಗಿದೆ ಎಂದು ತಿಳಿಸಿ, ವಿದ್ಯಾರ್ಥಿಗಳು ಸಂವಿಧಾನದ ಮೌಲ್ಯಗಳು, ಮೂಲಭೂತ ಹಕ್ಕುಗಳು ಹಾಗೂ ಕರ್ತವ್ಯಗಳ ಕುರಿತು ಅರಿವು ಹೊಂದಬೇಕೆಂದು ಹಿತೋಪದೇಶ ಮಾಡಿದರು.
ಸಂವಿಧಾನ ದಿನಾಚರಣೆ ಕಾರ್ಯಕ್ರಮದಲ್ಲಿ ಉಪನ್ಯಾಸಕರು ಹಾಗೂ ವಿದ್ಯಾರ್ಥಿಗಳು ಸಹಭಾಗಿತರಾಗಿ ಸಂವಿಧಾನ ಪಿಠಿಕೆಯನ್ನು ಬೋಧಿಸಲಾಯಿತು. ಕಾರ್ಯಕ್ರಮ ಯಶಸ್ವಿಯಾಗಿ ಜರುಗಿತು. ಕಾರ್ಯಕ್ರಮವನ್ನು ಪ್ರಸ್ತುತ ವೈ. ಏನ್. ರಾಜಶಾಸ್ತ್ರ ವಿಭಾಗದ ಮುಖ್ಯಸ್ಥರು ಆತ್ಮೀಯವಾಗಿ ಸ್ವಾಗತಿಸಿ, ಸಂವಿಧಾನ ದಿನಾಚರಣೆಯ ಹಿನ್ನೆಲೆ ಪ್ರಾಸ್ತಾವಿಕಯನ್ನು ಗೈದರು ಕಾರ್ಯಕ್ರಮವನ್ನು ಕು.ಅಕ್ಷತಾ ಇವರು ಸುಂದರವಾಗಿ ನಿರೂಪಿಸಿದರು. ಅಂತ್ಯದಲ್ಲಿ ಸೌಮ್ಯ ಇವರು ವಂದನಾರ್ಪಣೆ ಸಲ್ಲಿಸಿದರು.






