ಜನಮನ

ವಿಶಾಖಪಟ್ಟಣ:40 ಮೀನುಗಾರಿಕಾ ದೋಣಿ ಬೆಂಕಿಗಾಹುತಿ 30 ಕೋಟಿಗೂ ಹೆಚ್ಚು ನಷ್ಟ 

Views: 0

ವಿಶಾಖಪಟ್ಟಣ, ಇಲ್ಲಿನ ಬಂದರಿನಲ್ಲಿ ತಡರಾತ್ರಿ ಸಂಭವಿಸಿದ ಭೀಕರ ಅಗ್ನಿದುರಂತದಲ್ಲಿ 25 ಮೀನುಗಾರಿಕಾ ಯಾಂತ್ರಿಕಾ ದೋಣಿಗಳು ಸುಟ್ಟು ಕರಕಲಾಗಿದೆ. ಘಟನೆಯಿಂದಾಗಿ 30 ಕೋಟಿಗೂ ಹೆಚ್ಚು. ನಷ್ಟ ಸಂಭವಿಸಿದೆ. ಯಾವುದೇ ಪ್ರಾಣಹಾನಿಯಾಗಿಲ್ಲ.

ವಿಶಾಖಪಟ್ಟಣದ ದಕ್ಷಿಣ ವಿಭಾಗ ಕ್ಷೇತ್ರದ ಬಂದರಿನಲ್ಲಿ ಈ ಅವಘಡ ಸಂಭವಿಸಿದೆ. ಪೆಟ್ರೋಲ್ ಟ್ಯಾಂಕ್, ಎಲ್‌ಪಿಜಿ ಸಿಲಿಂಡರ್‌ಗಳು ಸ್ಫೋಟಗೊಂಡು ಯಾಂತ್ರಿಕ ದೋಣಿಗಳು ಧಗಧಗನೆ ಹೊತ್ತಿ ಉರಿದಿದೆ. ಇದರಿಂದಾಗಿ ಇಡೀ ಪ್ರದೇಶದಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿತ್ತು. ಬೆಂಕಿ ದುರಂತದಲ್ಲಿ ಕನಿಷ್ಠ 40 ದೋಣಿಗಳು ಬೆಂಕಿಗೆ ಆಹುತಿಯಾಗಿದೆ ಎಂದು ವಿಶಾಖಪಟ್ಟಣದ ಡಿಸಿಪಿ ಆನಂದ ರೆಡ್ಡಿ ಸುದ್ದಿಗಾರರಿಗೆ ತಿಳಿಸಿದರು.

ಮಧ್ಯೆ ರಾತ್ರಿ ಸುಮಾರಿಗೆ ವಿಶಾಖಪಟ್ಟಣ ಬಂದರಿನಲ್ಲಿ ಬೆಂಕಿ ತಗುಲಿರುವ ಸುದ್ದಿ ಬಂತು. ತಕ್ಷಣ ಅಗ್ನಿ ಶಾಮಕ ಸ್ಥಳಕ್ಕೆ ಧಾವಿಸಿ ಮುಂಜಾನ್ 4.30ರ ವೇಳೆಗೆ ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದೆ.

14 ಅಗ್ನಿಶಾಮಕ ವಾಹನಗಳು ಕಾರ್ಯಾಚರಣೆ ನಡೆಸಿ ಬೆಂಕಿಯನ್ನು ನಂದಿಸಿತು. ಈ ಭೀಕರ ಅಗ್ನಿ ಅವಘಡಕ್ಕೆ ನಿಖರ ಕಾರಣ ತಿಳಿದು ಬಂದಿಲ್ಲ. ತನಿಖೆಯಿದ್ದಷ್ಟೇ ಮಾಹಿತಿ ಲಭ್ಯವಾಗಿದೆ. ಮೂಲಗಳ ಪ್ರಕಾರ ಈ ಯಾತ್ರಿಕ ದೋಣಿಗಳ ಪೈಕಿ ಒಂದು ದೋಣಿಯಲ್ಲಿ ಮದ್ಯಪಾರ್ಟಿ ಆಯೋಜಿಸಲಾಗಿತ್ತು. ಈ ವೇಳೆ ಎರಡು ಗುಂಪುಗಳ ನಡುವೆ ಗಲಾಟೆ ನಡೆದು ಈ ದುರಂತ ಸಂಭವಿಸಿರಬಹುದು ಎಂದು ಹೇಳಲಾಗಿದೆ.

ಎರಡು ಗುಂಪುಗಳ ನಡುವೆ ಗಲಭೆ ಸಂಭವಿಸಿ, ಮದ್ಯ ಕೆಳಗಡೆ ಸುರಿದಿದ್ದರಿಂದಲೇ ಬೆಂಕಿ ಹೊತ್ತಿಕೊಳ್ಳಲು ಪ್ರಮುಖ ಕಾರಣ ಎನ್ನಲಾಗಿದೆ.

ದೋಣಿಯಲ್ಲಿ ಮದ್ಯ ಪಾರ್ಟಿ ಮಾಡುತ್ತಿದ್ದ ಜನರನ್ನು ಪತ್ತೆ ಹಚ್ಚುವ ಕಾರ್ಯ ಮುಂದುವರಿದ್ದಿದ್ದು ಈ ಆಯಾಮಗಳಿಂದಲೂ ತನಿಖೆ ನಡೆಸಲಾಗುತ್ತದೆ ಎಂದು ಮೂಲಗಳು ತಿಳಿಸಿವೆ.

ಈ ಘಟನೆಯ ಬಗ್ಗೆ ಕೂಲಂಕುಶ ತನಿಖೆ ನಡೆಸಬೇಕೆಂದು ಮೀನುಗಾರರ ಯುವ ಕಲ್ಯಾಣ ಸಂಘದ ಮುಖಂಡ ಅರ್ಜಿಲಿದಾಸ್ ಒತ್ತಾಯಿಸಿದ್ದಾರೆ.

Related Articles

Back to top button
error: Content is protected !!