ಇತರೆ

ವಿವಾಹಿತ ಮಹಿಳೆ ಹಿಂದೆ ಬಿದ್ದ ಯುವಕನನ್ನು ಮರಕ್ಕೆ ಕಟ್ಟಿ ಹಾಕಿ ಹಿಗ್ಗಾ ಮುಗ್ಗಾ ಥಳಿಸಿದ ಪತಿ

Views: 112

ಕನ್ನಡ ಕರಾವಳಿ ಸುದ್ದಿ: ಯುವಕನೊಬ್ಬ ವಿವಾಹಿತ ಮಹಿಳೆ  ಹಿಂದೆ ಬಿದ್ದು, ಆಕೆಯ ಪತಿಯಿಂದ ಹಲ್ಲೆಗೊಳಗಾಗಿರುವ ಘಟನೆ ಬೆಳಕಿಗೆ ಬಂದಿದೆ.

ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಕರೋಶಿ ಗ್ರಾಮದ ಹೊರವಲಯದಲ್ಲಿ ಈ ಘಟನೆ ನಡೆದಿದೆ. ಯಕ್ಸಾಂಬಾ ಪಟ್ಟಣದ ಅಕ್ಷಯ್ ಕಲ್ಲಟಗಿ ಎಂಬ ಯುವಕ ವಿವಾಹಿತ ಮಹಿಳೆಯ ಹಿಂದೆ ಬಿದ್ದಿದ್ದ. ಮಹಿಳೆಗೆ ಮೂವರು ಮಕ್ಕಳು- ಪತಿ ಕೂಡ ಇದ್ದಾರೆ. ಕಳೆದ ನಾಲ್ಕು ವರ್ಷಗಳಿಂದ ವಿವಾಹಿತ ಮಹಿಳೆಯ ಸಂಪರ್ಕದಲ್ಲಿದ್ದ ಯುವಕ ಆಗಾಗ ಮಹಿಳೆ ಭೇಟಿಯಾಗುತ್ತಿದ್ದ.

ಮಹಿಳೆ ಯುವಕನಿಗೆ ಭೇಟಿಯಾಗಲು ಬರುವಂತೆ ಕರೆ ಮಾಡಿದ್ದಳು, ಇದನ್ನು ನಂಬಿ ಆಕೆಯನ್ನು ಭೇಟಿಯಾಗಲು ಯುವಕ ಕರೋಶಿ ಗ್ರಾಮದತ್ತ ಹೋಗುತ್ತಿದ್ದ. ಈ ವೇಳೆ ಅರ್ಧ ದಾರಿಯಲ್ಲಿಯೇ ಯುವಕನನ್ನು ತಡೆದ ಮಹಿಳೆಯ ಪತಿ ಹಾಗೂ ಆತನ ಸಹೋದರ, ಯುವಕನನ್ನು ಮರಕ್ಕೆ ಕಟ್ಟಿ ಹಾಕಿ ಹಿಗ್ಗಾ ಮುಗ್ಗಾ ಥಳಿಸಿದ್ದಾರೆ.

ಯುವಕ ಗಂಭೀರವಾಗಿ ಹಲ್ಲೆಗೊಳಗಾಗಿದ್ದು, ಆಸ್ಪತ್ರೆಗೆ ದಾಖಲಾಗಿದ್ದಾನೆ. ಚಿಕ್ಕೋಡಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

Related Articles

Back to top button
error: Content is protected !!