ಜನಮನ

ವಿದ್ಯುತ್ ಶಾರ್ಟ್ ಸರ್ಕ್ಯೂಟ್ ನಿಂದ ಬೆಂಕಿ:ಕುರಿ, ಹಸು, ಕೋಳಿಗಳು ಸಜೀವ ದಹನ 

Views: 0

ತುಮಕೂರು: ಆಕಸ್ಮಿಕವಾಗಿ ಕೊಟ್ಟಿಗೆಯಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ಬೆಂಕಿಯ ಕೆನ್ನಾಲಿಗೆಗೆ 150 ಕುರಿಗಳು, 200 ಕೋಳಿ, 6 ಹಸುಗಳ ಸಜೀವ ದಹನವಾಗಿದೆ. ತುಮಕೂರು ಜಿಲ್ಲೆ ಚಿಕ್ಕನಾಯಕನಹಳ್ಳಿಯಲ್ಲಿ ತಾಲೂಕು ಹಂದನಕೆರೆ ಬಳಿಯ ರಾಮಘಟ್ಟ ಗ್ರಾಮದಲ್ಲಿ ಈ ಘಟನೆ ನಡೆದಿದೆ.

ರೈತ ಚೇತನ್ ಕುಮಾರ್ ಎಂಬುವರಿಗೆ ಸೇರಿದ ಕುರಿ, ಹಸು, ಕೋಳಿಗಳು ಸಾವನ್ನಪ್ಪಿವೆ. ವಿದ್ಯುತ್ ಶಾರ್ಟ್ ಸರ್ಕ್ಯೂಟ್ ನಿಂದ ಈ ದುರಂತ ನಡೆದಿದೆ ಎನ್ನಲಾಗಿದೆ.

ಸ್ಥಳಕ್ಕೆ ಹಂದನಕೆರೆ ಪೊಲೀಸರು ದೌಡಾಯಿಸಿದ್ದಾರೆ. ಹಂದನಕೆರೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

Related Articles

Back to top button
error: Content is protected !!