ವಿಜಯ್ ದೇವರಕೊಂಡ, ರಶ್ಮಿಕಾ ಮಂದಣ್ಣ ಪ್ರೀತಿ ಬ್ರೇಕಪ್..?

Views: 84
ರಶ್ಮಿಕಾ ಮಂದಣ್ಣ ಮತ್ತು ವಿಜಯ್ ದೇವರಕೊಂಡ ಸ್ನೇಹಕ್ಕೆ ಸಿನಿ ಅಭಿಮಾನಿಗಳು ಸಂಭ್ರಮಿಸಿದ್ರು. ಆದರೆ ಇದೀಗ ಆಗಿರೋದೆ ಬೇರೆ. ರಶ್ಮಿಕಾ ಮತ್ತು ವಿಜಯ್ ದೇವರಕೊಂಡ ನಡುವೆ ಏನು ಸರಿ ಇಲ್ಲಾ..ಎಂಬ ಸುದ್ದಿಯೊಂದು ವೈರಲ್ ಆಗಿದ್ದು ಎಲ್ಲಡೆ ಚರ್ಚೆ ಆಗ್ತಿದೆ.
ಈ ಚರ್ಚೆ ಹುಟ್ಟುಹಾಕೋದಿಕ್ಕೆ ಕಾರಣ ರಶ್ಮಿಕಾ, ವಿಜಯ್ ದೇವರಕೊಂಡಾ ಬರ್ತ್‌ಡೆಗೆ ವಿಶ್ ಮಾಡದೇ ಇರೋದು. ಮೊನ್ನೆ ವಿಜಯ್ ದೇವರಕೊಂಡ ಹುಟ್ಟುಹಬ್ಬ ಆಚರಿಸಿಕೊಂಡಿದ್ದಾರೆ. ಆದ್ರೆ ಪ್ರತಿ ಭಾರಿ ಬರ್ತಡೇ ಬಂದಾಗ ವಿಶ್ ಮಾಡುತ್ತಿದ್ದ ರಶ್ಮಿಕಾ ಈ ಭಾರಿ ವಿಜಯ್ ಹುಟ್ಟುಹಬ್ಬವನ್ನೇ ಮರೆತಂತೆ ಇದ್ದಾರೆ. ಹೀಗಾಗಿ ಈ ಜೋಡಿ ನಡುವೆ ಬಿರುಕು ಮೂಡಿದೆ ಎನ್ನು ಸುದ್ದಿಯ ಬಾಲಿವುಡ್ ಟು ಟಾಲಿವುಡ್ ವರೆಗೂ ಗಿರಿಕಿ ಹೊಡಿತಿದೆ. ಕಳೆದ ತಿಂಗಳು ಏಪ್ರಿಲ್ 5 ರಂದು ರಶ್ಮಿಕಾ ತಮ್ಮ ಬರ್ತ್‌ಡೆ ಆಚರಿಸಿಕೊಂಡರು.
ಇಡೀ ಭಾರತೀಯ ಚಿತ್ರರಂಗವೇ ವಿಶ್ ಮಾಡಿತ್ತು,. ಭಟ್ ವಿಜಯ್ ದೇವರಕೊಂಡ ವಿಷಸ್ ಮಾತ್ರ ಸೋಷಿಯಲ್ ಮೀಡಿಯಾಲ್ಲಿ ಕಾಣಿಸಿರ‍್ಲಿಲ್ಲಾ.. ಆಗ್ಲೇ ಇವರ ನಡುವೆ ಯಾಕೋ ಏನು ಸರಿ ಇದ್ದಂಗೆ ಕಾಣಿಸ್ತಿಲ್ಲಾ ಅಂತಾ ಮಾತಾಡಿಕೊಂಡಿದ್ರು. ಹಾಗೆ ನೋಡಿದ್ರೆ, ವಿಜಯ್ ದೇವರಕೊಂಡ ಆಗಲೀ, ರಶ್ಮಿಕಾ ಮಂದಣ್ಣ ಆಗಲೀ ತಾವಿಬ್ರೂ ಡೇಟಿಂಗ್ ಮಾಡುತ್ತಿದ್ದೀವಿ, ಲವ್‌ನಲ್ಲಿದ್ದೀವಿ ಅಂತಾ ಇಲ್ಲಿಯ ವರೆಗೂ ಎಲ್ಲೂ ಹೇಳಿಕೊಂಡಿಲ್ಲ. ಪ್ರತಿ ಬಾರಿ ಈ ಬಗ್ಗೆ ಇವರಿಬ್ಬರಲ್ಲಿ ಯಾರನ್ನೇ ಈ ಕುರಿತಾಗಿ ಕೇಳಿದರೂ ನಾವಿಬ್ಬರೂ ಜಸ್ಟ್ ಫ್ರೆಂಡ್ಸ್ ಎಂದು ಸುಮ್ಮನಾಗುತ್ತಿದ್ರು. ಆದ್ರೂ ಇವರ ನಡುವೆ ಇದ್ದಂತ ಆತ್ಮೀಯತೆ, ಲವ್ವಿ ಡವ್ವಿ ಕತೆಗೆ ಸಾಕಷ್ಟು ಪುಷ್ಟಿಗಳು ಸಿಗುತ್ತಿದ್ವು. ಈಗ ಆಗಿರೋ ಬೆಳವಣಿಗೆ ನೋಡಿದ್ರೆ ಇವರಿಬ್ಬರೂ ಬ್ರೇಕಪ್ ಮಾಡಿಕೊಂಡಂತೆ ಕಾಣುತ್ತಿದೆ.






