ಇತರೆ

ವಾಯುಭಾರ ಕುಸಿತ:ಭಾರೀ ಚಳಿ ವಾತಾವರಣ ಮುನ್ಸೂಚನೆ ನೀಡಿದ ಹವಾಮಾನ ಇಲಾಖೆ 

Views: 84

ಕನ್ನಡ ಕರಾವಳಿ ಸುದ್ದಿ,  ಬಂಗಾಳಕೊಲ್ಲಿ ಬಳಿಕ ಅರಬ್ಬಿ ಸಮುದ್ರ ಮೇಲ್ಮೈನಲ್ಲಿ ಕಿಲೋ ಮೀಟರ್‌ಗಳಷ್ಟು ಎತ್ತರದಲ್ಲಿ ಚಂಡಮಾರುತದ ಬಿರುಗಾಳಿ (ವೈಪರಿತ್ಯ) ಸೃಷ್ಟಿಯಾಗಿದೆ. ಮಹಾರಾಷ್ಟ್ರ ಸೇರಿದಂತೆ ವಿವಿಧ ರಾಜ್ಯಗಳ ಕರಾವಳಿ ಭಾಗದಿಂದ ಕೆಲವೇ ಕಿಲೋ ಮೀಟರ್‌ದಲ್ಲಿ ಚಂಡಮಾರುತ ಪರಿಚಲನೆ ಕೇಂದ್ರೀಕೃತವಾಗಿದೆ. ಇದರಿಂದ ಕರ್ನಾಟಕ ಸೇರಿ ವಿವಿಧ ರಾಜ್ಯಗಳಲ್ಲಿ ಮಂಜು, ಚಳಿ ವಾತಾವರಣದ ಮುನ್ಸೂಚನೆ ಇದೆ.

ಭಾರತೀಯ ಹವಾಮಾನ ಇಲಾಖೆ (IMD) ನೀಡಿರುವ ಮುನ್ಸೂಚನೆ ಪ್ರಕಾರ, ಈಶಾನ್ಯ ರಾಜಸ್ಥಾನ ಸುತ್ತಮುತ್ತಲಿನ ಕರಾವಳಿ ಭಾಗದ ಸಮುದ್ರ ಮೇಲ್ಮೈ ಮೇಲೆ 1.5 ಕಿಮೀ ಎತ್ತರದಲ್ಲಿ ಚಂಡಮಾರುತ ನಿರ್ಮಾಣವಾಗಿದೆ.

ಈಶಾನ್ಯ ರಾಜಸ್ಥಾನ ಮತ್ತು ನೆರೆಹೊರೆಯಲ್ಲಿ ಚಂಡಮಾರುತದ ಪರಿಚಲನೆಯಿಂದ ಉತ್ತರ ಗುಜರಾತ್‌ಗೆ 1.5 ಕಿಮೀ ಎತ್ತರದಲ್ಲಿ ಟ್ರಫ್ (ಗಾಳಿಯ ಒತ್ತಡದ ಪ್ರದೇಶ) ಮುಂದುವರಿಯಲಿದೆ

ಅರಬ್ಬಿ ಸಮುದ್ರದ ಪೂರ್ವಭಾಗದಲ್ಲಿರುವ ಟ್ರಫ್ ಈಗ ಆಗ್ನೇಯ ಭಾಗದಿಂದ ದಕ್ಷಿಣ ಮಹಾರಾಷ್ಟ್ರ ಕರಾವಳಿಯವರೆಗೆ ಸರಾಸರಿ ಸಮುದ್ರ ಮಟ್ಟದಿಂದ 9 ಕಿಮೀ ಎತ್ತರದಲ್ಲಿ ಚಲಿಸುತ್ತಿದೆ. ಇಂದು (ಡಿ.30) ಸಂಜೆ ಈ ವೈಪರಿತ್ಯವು ದುರ್ಬಲಗೊಳ್ಳುವ ಸಾಧ್ಯತೆ ಇದೆ ಎಂದು ಊಹಿಸಲಾಗಿದೆ.

Related Articles

Back to top button
error: Content is protected !!