ಜನಮನ

ವಕ್ವಾಡಿ ಫ್ರೆಂಡ್ಸ್ ( ರಿ ) ವಕ್ವಾಡಿ ಇವರ ಆಶ್ರಯದಲ್ಲಿ  ಉಚಿತ ಬೇಸಿಗೆ ಶಿಬಿರ

Views: 135

ಕುಂದಾಪುರ:ಸ್ಪಂದನ -2024 ಸಾಮರಸ್ಯದ ಸಮ್ಮಿಲನ ಕಾರ್ಯಕ್ರಮವನ್ನು ಉದ್ಯಮಿಗಳಾದ ಶ್ರೀ ಗಜೇಂದ್ರ ಶೆಟ್ಟಿ ಅವರು ಉದ್ಘಾಟಿಸಿದರು.

ಮುಖ್ಯ ಅತಿಥಿಗಳಾಗಿ ಆಗಮಿಸಿದ ಶಿಕ್ಷಕರಾದ ಶ್ರೀ ಅಶೋಕ್ ಶೆಟ್ಟಿ ಅವರು ಶಿಬಿರವು ಮಕ್ಕಳ ವ್ಯಕ್ತಿತ್ವ ವಿಕಸನ ಆಗಲು ಸಹಕಾರಿ ಚಿಕ್ಕವರಿದ್ದಾಗ ನಾವೆಲ್ಲ ಹಳ್ಳಿಯ ಆಟಗಳನ್ನು ಆಡುತ್ತಾ ಬೆಳೆಯುತ್ತಾ ಬಂದವರು ಆದರೆ ಈವಾಗ ಮೊಬೈಲ್ ಯುಗದಲ್ಲಿ ಮಕ್ಕಳಿಗೆ ಹೊರಗಿನ ಪ್ರಪಂಚದ ಅರಿವೇ ಇಲ್ಲದೆ ಹೋಗಿದೆ. ವಕ್ವಾಡಿ ಸಂಸ್ಥೆಯ ಈ ಒಂದು ಕಾರ್ಯ ಸಫಲವಾಗಲಿ ಎಂದು ಶುಭ ಹಾರೈಸಿದರು.

ವೇದಿಕೆಯಲ್ಲಿ ವಕ್ವಾಡಿ ಪ್ರೆಂಡ್ಸ್  ಸಂಸ್ಥೆಯ ಅಧ್ಯಕ್ಷರಾದ ಶ್ರೀ ಕಿರಣ್ ಶೆಟ್ಟಿ , ಮಹಿಳಾ ಸಂಘದ ಅಧ್ಯಕ್ಷರಾದ ಶ್ರೀಮತಿ ವನಿತಾ ಆಚಾರ್ಯ ಮತ್ತು ಪೋಷಕರಾದ ಶ್ರೀ ಭಾಸ್ಕರ ಮತ್ತು ನಾಲ್ಕು ತಂಡದ ಸದಸ್ಯರು ಮತ್ತು  ವಕ್ವಾಡಿ ಫ್ರೆಂಡ್ಸ್ ರುವಾರಿ ಕೀರ್ತಿ ಕುಮಾರ್ ಶೆಟ್ಟಿ ಉಪಸ್ಥಿತರಿದ್ದರು..

ಸುಮಾರು 150 ಶಿಬಿರಾರ್ಥಿಗಳು ಭಾಗವಹಿಸಿದ್ದರು. ಶಿಬಿರದ ನಿರ್ದೇಶಕರಾದ ಶ್ರೀ ಕುಮಾರ್ ಜಿ ಪ್ರಸ್ತಾವನೆ ಮಾಡಿ, ಶಿಬಿರಾರ್ಥಿಗಳು ಕಾರ್ಯಕ್ರಮ ನಿರೂಪಿಸಿದರು

Related Articles

Back to top button
error: Content is protected !!