ಶಿಕ್ಷಣ

ವಕ್ವಾಡಿ ಗುರುಕುಲ ಶಾಲೆಯ UKG ವಿದ್ಯಾರ್ಥಿಗಳ ಪದವಿ ಪ್ರದಾನ ಸಮಾರಂಭ

"ಪೋಷಕರು ತಮ್ಮ ಮಗುವಿನ ಶಿಕ್ಷಣಕ್ಕಾಗಿ ಕೇವಲ ಒಂದು ಶಾಲೆಯನ್ನು ಆಯ್ಕೆ ಮಾಡಿದರೆ ಸಾಲದು, ಶಾಲೆ ಮತ್ತು ಶಿಕ್ಷಕರ ಜೊತೆ ಉತ್ತಮ ಬಾಂಧವ್ಯ ಹೊಂದಿದಾಗ ಮಾತ್ರ ಮಗುವಿನ ಸರ್ವತೋಮುಖ ಬೆಳವಣಿಗೆ ಸಾಧ್ಯ"---ಡಾ.ಚಂದ್ರಾವತಿ

Views: 190

ಕನ್ನಡ ಕರಾವಳಿ ಸುದ್ದಿ: ಪ್ರತಿವರ್ಷದಂತೆ ವಕ್ವಾಡಿ  ಗುರುಕುಲ ಸಂಸ್ಥೆಯ ಪುಷ್ಪ ವಾಟಿಕಾದ UKG ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ಸಮಾರಂಭ ಮಾ.28ರಂದು ಆಚರಿಸಲಾಯಿತು.

ಮುಖ್ಯ ಅತಿಥಿಯಾಗಿ ಬಸ್ರೂರು ಶ್ರೀ ಶಾರದಾ ಕಾಲೇಜಿನ ಪ್ರಾಂಶುಪಾಲರಾದ ಡಾ.ಚಂದ್ರಾವತಿ ಇವರು ಪೋಷಕರು ತಮ್ಮ ಮಕ್ಕಳ ಜೊತೆ ಹೆಚ್ಚಿನ ಸಮಯವನ್ನು ಕಳೆಯಬೇಕು, ಅದರಲ್ಲೂ ಸಣ್ಣ ವಯಸ್ಸಿನಲ್ಲೇ ಹೆಚ್ಚಿನ ಕಥೆಗಳನ್ನು ಹೇಳಿ ಅವರನ್ನು ಸರಿಯಾದ ಮಾರ್ಗದಲ್ಲಿ ನಡೆಯುವಂತೆ ಮಾಡಿದಾಗ ಮುಂದೆ ಎಂದು ಅವರು ತಮ್ಮ ಬದುಕಿನಲ್ಲಿ ಎಡುವುದಿಲ್ಲ ಎಂದರು.ಮಕ್ಕಳನ್ನು ಬೆಳೆಸುವಲ್ಲಿ ಶಾಲೆಯ ಶಿಕ್ಷಕರ ಪಾತ್ರಕ್ಕಿಂತಲೂ ಪೋಷಕರ ಪಾತ್ರ ಹಿರಿದಾದ್ದದ್ದು ಅದನ್ನು ಅರಿತು ಮಕ್ಕಳನ್ನು ಬೆಳೆಸಿದ್ದಾದರೆ ಒಂದು ಉತ್ತಮ ಸಮಾಜ ನಿರ್ಮಾಣಕ್ಕೆ ಬೇರೆ ಏನು ಬೇಕಿಲ್ಲ, ಅಷ್ಟೇ ಅಲ್ಲದೆ ನಾವೆಲ್ಲ ಮೊದಲು ಪದವಿ ಪ್ರದಾನವನ್ನು ಸಂಪೂರ್ಣ ಶಿಕ್ಷಣ ಮುಗಿಸಿದ ಒಂದು ಹಂತದಲ್ಲಿ ಪಡೆಯುತ್ತಿತ್ತು ಆದರೆ ಇಂದು ಮಕ್ಕಳಿಗೆ ಈ ಪುಟ್ಟ ವಯಸ್ಸಿನಲ್ಲಿ ಇಂತಹ ಅವಕಾಶ ಸಿಗುವುದು ನಿಜಕ್ಕೂ ಸಂತಸದ ವಿಷಯ, ಜೊತೆಗೆ ಪೋಷಕರು ತಮ್ಮ ಮಗುವಿನ ಶಿಕ್ಷಣಕ್ಕಾಗಿ ಕೇವಲ ಒಂದು ಶಾಲೆಯನ್ನು ಆಯ್ಕೆ ಮಾಡಿದರೆ ಸಾಲದು, ಶಾಲೆ ಮತ್ತು ಶಿಕ್ಷಕರ ಜೊತೆ ಉತ್ತಮ ಬಾಂಧವ್ಯ ಹೊಂದಿದಾಗ ಮಾತ್ರ ಮಗುವಿನ ಸರ್ವತೋಮುಖ ಬೆಳವಣಿಗೆ ಸಾಧ್ಯ ಎಂದು ಅರ್ಥಪೂರ್ಣವಾಗಿ ತಮ್ಮ ಅತಿಥಿ ಭಾಷಣದಲ್ಲಿ ತಿಳಿಸಿದರು.

ಯುಕೆಜಿ ವಿದ್ಯಾರ್ಥಿಗಳಿಗಾಗಿ ಜೂನಿಯರ್ ಕೆ. ಜಿ ವಿದ್ಯಾರ್ಥಿಗಳು ನೃತ್ಯ ಮಾಡವ ಮೂಲಕ ಅವರ ಜೊತೆ ಕಳೆದ ಸುಂದರ ಸಮಯವನ್ನು ಮೆಲುಕು ಹಾಕಿಕೊಂಡರು. ಯು ಕೆ ಜಿ ವಿದ್ಯಾರ್ಥಿಗಳು ಪುಷ್ಪ ವಾಟಿಕಾದಲ್ಲಿ ಕಳೆದ ತಮ್ಮ ಮಧುರ ಕ್ಷಣಗಳನ್ನು ಪದಗಳ ರೂಪದಲ್ಲಿ ಎಲ್ಲರಿಗೂ ಉಣಬಡಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಬಾಂಡ್ಯ ಎಜುಕೇಶನಲ್ ಟ್ರಸ್ಟನ ಜಂಟಿ ಕಾರ್ಯನಿರ್ವಾಹಕಿ ಶ್ರೀಮತಿ ಅನುಪಮಾ ಎಸ್.ಶೆಟ್ಟಿ ಮಾತನಾಡಿ,. ನಮ್ಮ ಆಚಾರ ವಿಚಾರಗಳನ್ನು ಅದರ ಮಹತ್ವವನ್ನು ಈ ಹಂತದಲ್ಲಿ ಮಕ್ಕಳಿಗೆ ತಿಳಿಸುವ ಕೆಲಸವನ್ನು ನಾವೆಲ್ಲರೂ ಜೊತೆ ಸೇರಿ ಮಾಡಬೇಕಿದೆ, ಪೋಷಕರಿಗೆ ಶಾಲೆ ಮತ್ತು ಶಿಕ್ಷಕರ ಬಗ್ಗೆ ಗೌರವ ಭಾವನೆ ಇದ್ದರೆ ಖಂಡಿತವಾಗಿ ಮಗು ಅದನ್ನು ತನ್ನಲ್ಲಿ ಆಳವಡಿಸಿಕೊಂಡು ಅವರನ್ನು ಗೌರವಿಸುವ ಕೆಲಸ ಮಾಡುತ್ತದೆ ,ಅದುವೇ ಮಗುವಿನ ಕಲಿಕೆಯ ಮೊದಲ ಹಂತ ಎಂದು ತಿಳಿಸಿ, ಎಲ್ಲರಿಗೂ ಶುಭ ಹಾರೈಸಿದರು.

ಈ ಸಂದರ್ಭದಲ್ಲಿ ಪೂರ್ವ ಪ್ರಾಥಮಿಕ ವಿಭಾಗದ ಸಂಯೋಜಕಿ ಶ್ರೀಮತಿ ವಿಶಾಲ ಶೆಟ್ಟಿ, ಶಿಕ್ಷಕಿಯರು, ಪೋಷಕರು, ವಿದ್ಯಾರ್ಥಿಗಳು ಹಾಗೂ ಶಿಕ್ಷಕೇತರ ಸಿಬ್ಬಂಧಿಗಳು ಉಪಸ್ಥಿತರಿದ್ದರು.

ಕಾರ್ಯಕ್ರಮವನ್ನು ಬೇಬಿ.ಧನ್ವಿ ಮತ್ತು ಶರ್ವಿನ್ ನಿರೂಪಿಸಿದರು, ಬೇಬಿ.ಖದೀಜಾ ಪರ್ವಾ ಸ್ವಾಗತಿಸಿ, ಮಾಸ್ಟರ್ ಅಯಾನ್ ವಂದಿಸಿದರು.

Related Articles

Back to top button