ಶಿಕ್ಷಣ
ವಕ್ವಾಡಿ ಗುರುಕುಲ ಪಬ್ಲಿಕ್ ಸ್ಕೂಲ್ ನಲ್ಲಿ ಶಿಕ್ಷಕರ ವೃತ್ತಿಪರ ತರಬೇತಿ
Views: 32
ಕನ್ನಡ ಕರಾವಳಿ ಸುದ್ದಿ: ವಕ್ವಾಡಿಯ ಗುರುಕುಲ ಪಬ್ಲಿಕ್ ಸ್ಕೂಲ್‌ನಲ್ಲಿ ಸಿಬಿಎಸ್ಸಿ ವತಿಯಿಂದ ಶಿಕ್ಷಕರ ವೃತ್ತಿಪರ ಸಾಮರ್ಥ್ಯವನ್ನು ವೃದ್ಧಿಸುವ ಉದ್ದೇಶದಿಂದ “ಹ್ಯಾಪಿ ಕ್ಲಾಸ್ ರೂಮ್” ವಿಷಯದ ಮೇಲೆ ಸಾಮರ್ಥ್ಯ ವೃದ್ಧಿ ಕಾರ್ಯಕ್ರಮವನ್ನು ಗುರುಕುಲ ಆಡಿಟೋರಿಯಂನಲ್ಲಿ ಯಶಸ್ವಿಯಾಗಿ ಆಯೋಜಿಸಲಾಗಿತ್ತು.
ಈ ಕಾರ್ಯಕ್ರಮಕ್ಕೆ ಸಂಪನ್ಮೂಲ ವ್ಯಕ್ತಿಗಳಾಗಿ ಸುಪ್ರಿಯಾ ಶೆಟ್ಟಿ ಹಾಗೂ ನವ್ಯ ಜಿ.ಕೆ. ಅವರು ಆಗಮಿಸಿ, ತಮ್ಮ ಮಾರ್ಗದರ್ಶನದ ಮೂಲಕ ಸಂತೋಷಕರ ತರಗತಿ ವಾತಾವರಣ ನಿರ್ಮಾಣ, ವಿದ್ಯಾರ್ಥಿಗಳ ಮನೋವೈಜ್ಞಾನಿಕ ಅಗತ್ಯಗಳು, ಶಿಕ್ಷಕರ ಧನಾತ್ಮಕ ಪಾತ್ರ ಹಾಗೂ ಕಲಿಕೆಯನ್ನು ಆನಂದಕರವಾಗಿಸುವ ವಿಧಾನಗಳ ಕುರಿತು ಉಪಯುಕ್ತ ಮಾಹಿತಿಯನ್ನು ನೀಡಿದರು. ಶಿಕ್ಷಕರು ಕಾರ್ಯಕ್ರಮದಲ್ಲಿ ಉತ್ಸಾಹದಿಂದ ಭಾಗವಹಿಸಿದರು.
ಮುಖ್ಯೋಪಾಧ್ಯಾಯರಾದ ಡಾ. ರೂಪ ಶೆಣೈರವರು ಸ್ವಾಗತಿಸಿದರು.
ಶ್ರೀಮತಿ ಸುಜಾತ ಅವರು ನಿರ್ವಹಿಸಿ ಅಂತಿಮವಾಗಿ ವಂದಿಸಿದರು.






