ವಕ್ವಾಡಿಯಲ್ಲಿ ಬಾವಿಗೆ ಬಿದ್ದ ಹೆಬ್ಬಾವಿನ ರಕ್ಷಣೆ

Views: 246
ಕುಂದಾಪುರ: ತಾಲೂಕಿನ ಕಾಳಾವರ ಗ್ರಾಮ ಪಂಚಾಯಿತ್ ವ್ಯಾಪ್ತಿಯ ವಕ್ವಾಡಿ ಗ್ರಾಮದ ಎ.ಕೆ ಇಂಡಸ್ಟ್ರೀಸ್ ಹತ್ತಿರದ ಸರಕಾರಿ ಬಾವಿಗೆ ನೀರನ್ನು ಅರಸಿಕೊಂಡು ಬಂದ 8 ಅಡಿ ಉದ್ದದ ಹೆಬ್ಬಾವೊಂದು 60 ಅಡಿ ಆಳದ ಬಾವಿಗೆ ಬಿದ್ದಿತ್ತು.
ವಿಷಯ ತಿಳಿದ ಪಂಚಾಯಿತಿಯವರು ಉರಗ ತಜ್ಞ ನರಸಿಂಹ ಅವರಿಗೆ ತಿಳಿಸಲಾಯಿತು. ಕೂಡಲೇ ಸ್ಥಳಕ್ಕೆ ಆಗಮಿಸಿದ ಅವರು ಧರ್ಮಸ್ಥಳದ ಸ್ವಯಂಸೇವಾ ಸಂಘದ ಪ್ರತಿನಿಧಿಗಳು, ಕೃಷಿ, ಅರಣ್ಯ ಇಲಾಖೆ, ಪಂಚಾಯಿತಿಯ ಸಹಕಾರದೊಂದಿಗೆ ಹಾವನ್ನು ಮೇಲಕ್ಕೆತ್ತಲು ಸುಮಾರು 6 ಗಂಟೆಗಳ ಕಾಲ ಹರಸಾಹಸ ಕಾರ್ಯಾಚರಣೆ ನಡೆಸಿ ಹಾವನ್ನು ಮೇಲಕ್ಕೆ ಎತ್ತಲಾಯಿತು.
ನಂತರ ಅರಣ್ಯ ಇಲಾಖೆಯ ಅಧಿಕಾರಿಗೆ ಹಾವನ್ನು ವಶಕ್ಕೆ ನೀಡಿ ಸುರಕ್ಷಿತ ಸ್ಥಳಕ್ಕೆ ಬಿಡಲಾಯಿತು.
ಯಶಸ್ವಿ ಕಾರ್ಯಾಚರಣೆಯಲ್ಲಿ ಶೌರ್ಯ ಟೀಮಿನ ಸದಸ್ಯರು, ತೆಕ್ಕಟ್ಟೆ ವಲಯ ಅಧ್ಯಕ್ಷರಾದ ಸುಕುಮಾರ್, ಕಾಳಾವರ ವಲಯ ಮೇಲ್ವಿಚಾರಕರಾದ ದಿವಾಕರ್, ರಾಜು, ತಾಲೂಕಿನ ಜ್ಞಾನವಿಕಾಸ ಸಮನ್ವಯ ಅಧಿಕಾರಿ ಕವಿತಾ, ಕೃಷಿ ಅಧಿಕಾರಗಳಾದ ಪ್ರದೀಪ್, ಇನ್ನಿತರರು ಕಾರ್ಯಾಚರಣೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಈ ಸಂದರ್ಭದಲ್ಲಿ ಹಾವನ್ನು ಸುರಕ್ಷಿತವಾಗಿ ಮೇಲಕ್ಕೆತ್ತಲು ಸಹಕರಿಸಿದವರನ್ನು ಅಭಿನಂದಿಸಲಾಯಿತು.









