ಕ್ರೀಡೆ

ವಕ್ವಾಡಿ:ತಾಲೂಕು ಕ್ರೀಡಾಕೂಟದ ಅಧ್ಯಕ್ಷರಾಗಿ ಪ್ರವೀಣ್ ಕುಮಾರ್ ಶೆಟ್ಟಿ ಸಣಗಲ್ಲುಮನೆ ಆಯ್ಕೆ

Views: 301

ಕನ್ನಡ ಕರಾವಳಿ ಸುದ್ದಿ: ಸರಕಾರಿ ಪ್ರೌಢಶಾಲೆ ವಕ್ವಾಡಿಯಲ್ಲಿ 2025-26 ನೇ ಸಾಲಿನ ಕುಂದಾಪುರ ತಾಲೂಕಿನ 14 ಮತ್ತು 17 ರ ವಯೋಮಾನದ ವಿದ್ಯಾರ್ಥಿಗಳ ಕ್ರೀಡಾಕೂಟ ನಡೆಯಲಿದೆ.

ಅಗಸ್ಟ್ 25ರಂದು ಸೋಮವಾರ ವಕ್ವಾಡಿ ಸರಕಾರಿ ಪ್ರೌಢಶಾಲೆಯಲ್ಲಿ  ನಡೆದ ತಾಲೂಕು ಕ್ರೀಡಾ ಕೂಟದ ಪೂರ್ವಭಾವಿ ಸಭೆಯಲ್ಲಿ  ಕಾಳಾವರ ಗ್ರಾಮ ಪಂಚಾಯಿತಿ ಅಧ್ಯಕ್ಷ ಮಂಜುನಾಥ್ ಶೆಟ್ಟಿಗಾರ್ ಇವರ ಅಧ್ಯಕ್ಷತೆಯಲ್ಲಿ ನಡೆಯಿತು.

ಈ ಸಭೆಯಲ್ಲಿ ಕ್ರೀಡಾಕೂಟದ ಅಧ್ಯಕ್ಷರಾಗಿ ಪ್ರವೀಣ್ ಕುಮಾರ್ ಶೆಟ್ಟಿ ಸಣಗಲ್ಲುಮನೆ ಇವರನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು. 

ಕ್ರೀಡಾಕೂಟದ ಪ್ರಧಾನ ಕಾರ್ಯದರ್ಶಿಗಳಾಗಿ ಸತೀಶ್ ಪೂಜಾರಿ ವಕ್ವಾಡಿ ,ಕೋಶಾಧಿಕಾರಿಯಾಗಿ ಶ್ರೀ ವಿ ಕೆ ಶೆಟ್ಟಿ ವಕ್ವಾಡಿ ಆಯ್ಕೆಯಾದರು.

ಉಪಾಧ್ಯಕ್ಷರಾಗಿ ನರಸಿಂಹ ಪೂಜಾರಿ ವಕ್ವಾಡಿ,  ಸತ್ಯರಂಜನ್ ಹೆಗ್ಡೆ ವಕ್ವಾಡಿ, ರಮೇಶ್ ಶೆಟ್ಟಿ ವಕ್ವಾಡಿ, ರವಿರಾಜ್ ಶೆಟ್ಟಿ ವಕ್ವಾಡಿ, ಆನಂದ್ ಆಚಾರ್ಯ ವಕ್ವಾಡಿ, ಕರುಣಾಕರ ಶೆಟ್ಟಿ ನಿವೃತ್ತ ಶಿಕ್ಷಕರು ವಕ್ವಾಡಿ ಆಯ್ಕೆಯಾದರು. 

ಜೊತೆ ಕಾರ್ಯದರ್ಶಿಯಾಗಿ ಗಿರೀಶ್ ಐತಾಳ್, ಸಂದೀಪ್ ಶೆಟ್ಟಿ

ಆರ್ಥಿಕ ಸಮಿತಿಯ ಅಧ್ಯಕ್ಷರಾಗಿ  ಅಶೋಕ್ ಪೂಜಾರಿ ಬಾಲಾಜಿ ಕನ್ಸ್ಟ್ರಕ್ಷನ್ ವಕ್ವಾಡಿ ಸದಸ್ಯರಾಗಿ ಗಜೇಂದ್ರ ಶೆಟ್ಟಿ,  ರಘುರಾಮ ಶೆಟ್ಟಿ, ಪ್ರಮೋದ ಶೆಟ್ಟಿ ಸಾರ್ಕಲ್ಲುಮನೆ   ಪ್ರಮೋದ ಶೆಟ್ಟಿ ಸಣಗಲ್ಲುಮನೆ. 

ಕ್ರೀಡಾ ಸಮಿತಿಯ ಸದಸ್ಯರು: ಪುಟ್ಟರಾಜ ಹೆಬ್ಬಾರ್, ವಿಜಯ್ ಪೂಜಾರಿ, ಪ್ರದೀಪ್ ಹಲ್ತೂರು,  ಪುನೀತ್ ಪೂಜಾರಿ, ಸುಧಾಕರ ಪೂಜಾರಿ, ಅಂಕಿತ್ ಶೆಟ್ಟಿ, ಡಾ. ಪ್ರಶಾಂತ್ ಶೆಟ್ಟಿ, ಕೃಷ್ಣ ಮೊಗವೀರ, ರಾಮಚಂದ್ರ ಆಚಾರ್ಯ, ಶಂಕರ ಕುಲಾಲ್, ಅರುಣ ದೇವಾಡಿಗ, ದಿನೇಶ್ ಹಲ್ತೂರು, ಸದಾನಂದ ಶೆಟ್ಟಿ ಶಿಕ್ಷಕರು, ಬಾಲಕೃಷ್ಣ ಶೆಟ್ಟಿ ಶಿಕ್ಷಕರು, ಸಚಿನ್ ಶೆಟ್ಟಿ, ಶ್ರೀಮತಿ ರಶ್ಮಿ ಶೆಟ್ಟಿ, ರಘುರಾಮ ಶೆಟ್ಟಿ,  ಗಜೇಂದ್ರ ಶೆಟ್ಟಿ, ಸುಧೀರ್ ಕುಮಾರ್ ಶೆಟ್ಟಿ, ಗಿರೀಶ್ ಆಚಾರ್ಯ,  ಅಶೋಕ್ ಪೂಜಾರಿ, ಉಮೇಶ್ ಪೂಜಾರಿ ಇವರನ್ನು  ಆಯ್ಕೆ ಮಾಡಲಾಯಿತು. 

ಮುಂದಿನ ಕ್ರೀಡಾ ಸಮಿತಿಯ ಸಭೆಯಲ್ಲಿ ಎಲ್ಲರನ್ನು ಸೇರಿಸಿಕೊಂಡು ಉಳಿದ ಸಮಿತಿಗಳನ್ನು ಮಾಡಲಾಗುವುದು. 

ಸಭೆಯಲ್ಲಿ SDMC ಅಧ್ಯಕ್ಷರಾದ  ರಾಜು ಕುಲಾಲ್, ಗ್ರಾಮ ಪಂಚಾಯತ್ ಸದಸ್ಯರಾದ ಶ್ರೀ ರಮೇಶ್ ಶೆಟ್ಟಿ, ರವಿರಾಜ ಶೆಟ್ಟಿ, ಶ್ರೀಮತಿ ಭಾರತಿ .ಶ್ರೀಮತಿ ಆಶಾಲತಾ ಶೆಟ್ಟಿ ಶಾಲೆಯ ಮುಖ್ಯೋಪಾಧ್ಯಾಯರಾಗಿರುವ ಶ್ರೀಮತಿ ಸುಜಾತ ಬಿ, ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಮಂಜಯ್ಯ ಬಿಲ್ಲವ, ಶ್ರೀ ಬಾಲಕೃಷ್ಣ ಶೆಟ್ಟಿ, ದೈಹಿಕ ಶಿಕ್ಷಣ ಶಿಕ್ಷಕರ ಸಂಘದ ಅಧ್ಯಕ್ಷರು. SDMC ಸದಸ್ಯರು ಹಾಗೂ ಸಂಸ್ಥೆಯ ಎಲ್ಲಾ ಶಿಕ್ಷಕರು ಸಭೆಯಲ್ಲಿ ಉಪಸ್ಥಿತರಿದ್ದರು.

ಮುಖ್ಯೋಪಾಧ್ಯಾಯರಾದ ಶ್ರೀಮತಿ ಸುಜಾತ ಬಿ  ಸ್ವಾಗತಿಸಿದರು. ಯುವಜನ ಸೇವಾ ಕ್ರೀಡಾ ಅಧಿಕಾರಿ ದೈಹಿಕ ಶಿಕ್ಷಣ ಶಿಕ್ಷಕರು ಕುಸುಮಾಕರ ಶೆಟ್ಟಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಸತೀಶ್ ಪೂಜಾರಿ ವಂದಿಸಿದರು. ಶಿಕ್ಷಕ ಸದಾನಂದ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.

 

Related Articles

Back to top button