ಇತರೆ

ವಂಡ್ಸೆ: ಚೀಟಿ ಬರೆದಿಟ್ಟು ವಿವಾಹಿತ ಮಹಿಳೆ ನಾಪತ್ತೆ

Views: 186

ಕೊಲ್ಲೂರು, ಇಲ್ಲಿಗೆ ಸಮೀಪ ವಂಡ್ಸೆ ಎಂಬಲ್ಲಿ ಚೀಟಿ ಬರೆದಿಟ್ಟ ನಾಪತ್ತೆಯಾದ ಘಟನೆ ನಡೆದಿದೆ.

ವಂಡ್ಸೆ ನಿವಾಸಿ ಅಫ್ಸನಾ (23) ಕಾಣೆಯಾದವರು.

ಕುಂದಾಪುರ ತಾಲೂಕಿನ ವಂಡ್ಸೆ ಗ್ರಾಮದಲ್ಲಿ ವಾಸವಿದ್ದ ವಿವಾಹಿತೆಯಾಗಿರುವ ಅಫ್ಸನಾ ಜ.30ರಂದು ರೂಮಿನಲ್ಲಿ ಮಲಗಿದ್ದವರು ಮಾರನೇ ದಿನ ಬೆಳಗ್ಗೆ ನಾಪತ್ತೆಯಾಗಿದ್ದರು. ಈ ನಡುವೆ ಮನೆಯ ಕೋಣೆಯಲ್ಲಿ ಬರೆದ ಚೀಟಿ ಸಿಕ್ಕಿದ್ದು, ಅದರಲ್ಲಿ ‘ನಾನು ತುಂಬಾ ದೂರ ಹೋಗುತ್ತಿದ್ದು ನನ್ನನ್ನು ಹುಡುಕಬೇಡಿ’ ಎಂದು ಬರೆದಿತ್ತು ಎಂದು ಅಫ್ಸನಾರ ಪತಿ ಅಬ್ದುರ್ರಹ್ಮಾನ್ ಕೊಲ್ಲೂರು ಪೊಲೀಸ್ ಠಾಣೆಗೆ ನೀಡಿರುವ ದೂರಿನಲ್ಲಿ ತಿಳಿಸಿದ್ದಾರೆ.

ಮಹಿಳೆಯ ಕುರಿತಂತೆ ಯಾವುದೇ ಮಾಹಿತಿ ದೊರೆತಲ್ಲಿ ಕೊಲ್ಲೂರು ಠಾಣೆ: (08254) 258233, 9480805460. ಬೈಂದೂರು ವೃತ್ತ ನಿರೀಕ್ಷಕರ ಕಚೇರಿ: (08254) 251031, 9480805434, ಕಂಟ್ರೋಲ್ ರೂಂ- 100 (0820) 2526444ನ್ನು ಸಂಪರ್ಕಿಸಲು ಪೊಲೀಸರು ಕೋರಿದ್ದಾರೆ

Related Articles

Back to top button
error: Content is protected !!