ಸಾಂಸ್ಕೃತಿಕ

ಲಕ್ಷ್ಮೀ ಬಾರಮ್ಮ ಸೀರಿಯಲ್ ನಟಿ ಲಾವಣ್ಯ ಅದ್ಧೂರಿ ಮದುವೆ 

Views: 165

ಕನ್ನಡ ಕರಾವಳಿ ಸುದ್ದಿ: ಕನ್ನಡದ ಟಾಪ್ ಸೀರಿಯಲ್ ಲಕ್ಷ್ಮೀ ಬಾರಮ್ಮ ಧಾರಾವಾಹಿಯಲ್ಲಿ ಹಾಗೂ ಕೃಷ್ಣ ಪುತ್ರಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಲಕ್ಷ್ಮೀ ಬಾರಮ್ಮ ಸೀರಿಯಲ್ನಲ್ಲಿ ವೈಷ್ಣವ್ ತಂಗಿ ವಿಧಿ ಪಾತ್ರದಲ್ಲಿ ಅಭಿನಯಿಸುತ್ತಿರೋ ನಟಿ ಲಾವಣ್ಯ ಹಿರೇಮಠ ಮದುವೆಯಾಗಿದ್ದಾರೆ.

ವಿಧಿ ಪಾತ್ರದ ಮೂಲಕ ಸಾಕಷ್ಟು ಜನಪ್ರಿಯತೆ ಪಡೆದುಕೊಂಡಿದ್ದರು ನಟಿ ಲಾವಣ್ಯ ಹಿರೇಮಠ. ಮೊನ್ನೆಯಷ್ಟೇ ತಾನು ಮದುವೆಯಾಗುತ್ತಿರೋ ಹುಡುಗ ಯಾರೆಂದು ರಿವೀಲ್ ಮಾಡಿದ್ದರು. ದೀಪಾವಳಿ ಹಬ್ಬದ ದಿನವೇ ಭಾವಿ ಪತಿಯೊಂದಿಗಿನ ರೊಮ್ಯಾಂಟಿಕ್ ಫೋಟೋಗಳನ್ನು ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಂಡಿದ್ದರು.

ಹುಡುಗ ದಂತ ವೈದ್ಯರಾಗಿದ್ದು, ನಟನೆಯ ಜೊತೆಜೊತೆಗೆ ತಮ್ಮ ವೃತ್ತಿಯಲ್ಲೂ ಕೂಡ ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾರೆ. ಇದೀಗ ಲಾವಣ್ಯ ತಮ್ಮ ಪತಿಯೊಂದಿಗಿನ ಗುರು ಹಿರಿಯರ ಸಮ್ಮುಖದಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.

ಇನ್ನು, ನಟಿ ಲಾವಣ್ಯ ಮದುವೆಯಾದ ಹುಡುಗನ ಹೆಸರು ಅಕ್ಷಯ್ ಆಚಾರ್ಯ. ಅವರು ಕೂಡ ಡೆಂಟಿಸ್ಟ್ ಆಗಿದ್ದು, ಈ ಜೋಡಿ ನವೆಂಬರ್ 11ರಂದು ವೈವಾಹಿಕ ಜೀವನಕ್ಕೆ ಕಾಲಿಟ್ಟಿದೆ. ಅಕ್ಷಯ್ ಹಾಗೂ ಲಾವಣ್ಯ ಅವರು ಬಹಳ ವರ್ಷಗಳಿಂದ ಪ್ರೀತಿಸುತ್ತಿದ್ದರಂತೆ. ಈ ಇಬ್ಬರ ಪ್ರೀತಿಗೆ ಎರಡು ಕುಟುಂಬಸ್ಥರು ಸಮ್ಮತಿ ನೀಡಿದ ಬೆನ್ನಲ್ಲೇ ಮದುವೆಯಾಗಿದ್ದಾರೆ.

ಸದ್ಯ ಮದುವೆ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿವೆ. ನಟಿ ಲಾವಣ್ಯ ಮದುವೆಯಲ್ಲಿ ಇಡೀ ಲಕ್ಷ್ಮೀ ಬಾರಮ್ಮ ಸೀರಿಯಲ್ ತಂಡದವರು ಭಾಗಿಯಾಗಿದ್ದರು. ಇದೇ ಫೋಟೋಗಳನ್ನು ನೋಡಿದ ಅಭಿಮಾನಿಗಳು ನವ ದಂಪತಿಗೆ ಶುಭ ಹಾರೈಸುತ್ತಿದ್ದಾರೆ.

Related Articles

Back to top button
error: Content is protected !!