ರೈತನನ್ನು ಒಂದೇ ಏಟಿಗೆ ನುಂಗಿದ್ದ 23 ಅಡಿ ಉದ್ದದ ಹೆಬ್ಬಾವು

Views: 3
ಹೆಬ್ಬಾವುಗಳು ಆಡು, ಕೋಳಿ, ಕುರಿಗಳನ್ನು ಒಂದೇ ಏಟಿಗೆ ನುಂಗಿ ನೀರು ಕುಡಿಯುವುದು ಗೊತ್ತು. ಆದರೆ, ಮನುಷ್ಯನೊಬ್ಬನನ್ನು ಹೆಬ್ಬಾವು ಒಂದೇ ಏಟಿಗೆ ನುಂಗಿರುವುದು ಬಹುಶಃ ಅಪರೂಪ. ಈ ರೀತಿಯ ಘಟನೆ ವರ್ಷಗಳ ಹಿಂದೆ ವರದಿಯಾಗಿತ್ತು. ಈ ಸುದ್ದಿಯೀಗ ಮತ್ತೆ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ರೈತ ಸುಲವೇಶಿ ದ್ವೀಪದಲ್ಲಿರುವ ತನ್ನ ಹೊಲಕ್ಕೆ ಹೋಗಿದ್ದ. ಆಗ ಆತ ಕಣ್ಮರೆಯಾಗಿದ್ದ. 24 ಗಂಟೆಗಳ ಕಾಲ ಹುಡುಕಿದ ಬಳಿಕವೂ ಆತ ಪತ್ತೆಯಾಗದ ಕಾರಣ ಹಳ್ಳಿಗರು ಪೊಲೀಸರಿಗೆ ದೂರು ನೀಡಿದ್ದರು. ಅಕ್ಬರ್ನನ್ನು ಹುಡುಕಲು ಪೊಲೀಸರು ಕಾರ್ಯಾಚರಣೆ ನಡೆಸಿದರು. ಆದರೆ, ಯಾವುದೇ ಪ್ರಯೋಜನವಾಗಲಿಲ್ಲ. ಅಕ್ಬರ್ನ ಗೆಳೆಯ, ಕುಟುಂಬದ ಪಾಮ್ ತೋಟದ ಪಕ್ಕದಲ್ಲಿ ಹೆಬ್ಬಾವೊಂದನ್ನು ಪತ್ತೆ ಹಚ್ಚಿದರು. ಈ ಹೆಬ್ಬಾವು ಸಾಮಾನ್ಯಕ್ಕಿಂತಲೂ ಗಾತ್ರದಲ್ಲಿ ತುಸು ದೊಡ್ಡದಾಗಿತ್ತು. ಆಗ ಅನುಮಾನ ಬಂದು ಹೆಬ್ಬಾವು ಹೊಟ್ಟೆಯನ್ನು ಬಗೆದಾಗ ಅದರ ಒಳಗಡೆ ಅಕ್ಬರ್ ದೇಹ ಕಂಡು ಬಂದಿದೆ
ಅಕ್ಬರ್ನನ್ನು ಇಡೀಯಾಗಿ ನುಂಗಿದ ಹೆಬ್ಬಾರುವ ಸುಮಾರು 7 ಮೀಟರ್ , ಅಂದರ 23 ಅಡಿ ಉದ್ದವಿತ್ತು. ಅಕ್ಬರ್ ನನ್ನು ನುಂಗಿದ ಹೆಬ್ಬಾವು 7 ಮೀಟರ್ (23 ಅಡಿ) ಉದ್ದವಿದ್ದು, ರೆಟಿಕ್ಯುಲೇಟೆಡ್ ಹೆಬ್ಬಾವು ಜಾತಿಗೆ ಸೇರಿತ್ತು. ಈ ಜಾತಿಯು ಪ್ರಪಂಚದ ಅತಿ ಉದ್ದದ ಸರೀಸೃಪವೆಂದು ತಿಳಿದುಬಂದಿದೆ. ಈ ಹಾವು ತನ್ನ ಬೇಟೆಯನ್ನು ಕೊಲ್ಲುವ ಮೊದಲು ಉಸಿರುಗಟ್ಟಿಸುತ್ತದೆ.






