ಸಾಂಸ್ಕೃತಿಕ

ರೇಣುಕಾಸ್ವಾಮಿ ಕೊಲೆ  ಪ್ರಕರಣ:ಮತ್ತೊಬ್ಬ ನಟ ಪ್ರದೋಶ್ ಬಂಧನ

Views: 27

ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಪ್ರಕರಣ ದಿನಕ್ಕೊಂದು ತಿರುವು ಪಡೆದುಕೊಳ್ಳುತ್ತಿದ್ದು, ಇದೀಗ ಸ್ಯಾಂಡಲ್ ವುಡ್ ನ ಮತ್ತೋರ್ವ ನಟ ಪೊಲೀಸರಿಗೆ ಬಲೆಗೆ ಬಿದ್ದಿದ್ದಾನೆ. ಈ ಮೂಲಕ ಬಂಧಿತ ಆರೋಪಿಗಳ ಸಂಖ್ಯೆ 14ಕ್ಕೆ ಏರಿಕೆಯಾಗಿದೆ.ಬಂಧಿತನನ್ನು ಪ್ರದೋಶ್ ಎಂದು ಗುರುತಿಲಾಗಿದ್ದು, ಈತ ಕೂಡ ಸ್ಯಾಂಡಲ್ ವುಡ್ ನಟನಾಗಿದ್ದಾನೆ. ಕನ್ನಡದ ಕೆಲ ಚಿತ್ರಗಳಲ್ಲಿ ಅಭಿನಯ ಮಾಡಿರುವ ಈತ ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ 14ನೇ ಆರೋಪಿ ಆಗಿದ್ದಾನೆ.ದರ್ಶನ್ ಜೊತೆಗಿನ ಬೃಂದಾವನ, ಬುಲ್ ಬುಲ್ ಚಿತ್ರಗಳಲ್ಲಿ ಪ್ರದೋಶ್ ನಟಿಸಿದ್ದಾನೆ. ಅಲ್ಲದೇ ದರ್ಶನ್ ಆಪ್ತ ವಲಯದಲ್ಲಿ ಗುರುತಿಸಿಕೊಂಡಿದ್ದ. ಇದಲ್ಲದೆ ಬಿಜೆಪಿ ಸಚಿವರೊಬ್ಬರ ಜೊತೆ ಆಪ್ತ ಸಹಾಯಕನಾಗಿ ಕೂಡ ಕೆಲಸ ಮಾಡಿದ್ದು, ಮಾತ್ರವಲ್ಲದೇ ಬಿಜೆಪಿ ಐಟಿ ವಿಭಾಗದಲ್ಲಿಯೂ ಕೆಲಸ ಮಾಡಿದ್ದ ಎಂಬ ಮಾಹಿತಿ ಲಭ್ಯವಾಗಿದೆ.ದರ್ಶನ್ ಆಪ್ತವಲಯದಲ್ಲಿ ಗುರುತಿಸಿಕೊಂಡಿದ್ದ ಪ್ರದೋಶ್, ಈತನಿಗೆ 30ಲಕ್ಷ ಕೊಟ್ಟ ಕೊಲೆ ಕೇಸ್ ಡೀಲ್ ಮಾಡಲು ದರ್ಶನ್ ಸೂಚಿಸಿದ್ದಾರೆ.ಈ ಕುರಿತು ವಿಚಾರಣೆ ಮುಂದುವರೆಸಲಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.ಪ್ರಕರಣದಲ್ಲಿ ಬಂಧಿತ 14 ಆರೋಪಿಗಳು ಮಾತ್ರ ಭಾಗಿ ಆಗಿಲ್ಲ. ಇವರ ಜತೆ ಇನ್ನೂ ನಾಲ್ವರು ಕೈಜೋಡಿಸಿದ್ದಾರೆ. ಒಟ್ಟು 17 ಆರೋಪಿಗಳು ಈ ಕೃತ್ಯದಲ್ಲಿ ಭಾಗಿಯಾಗಿರೋದು ಗೊತ್ತಾಗಿದೆ. ಅನು ಎಂಬಾಕೆಯ ಜತೆ ಜಗದೀಶ್ ಅಲಿಯಾಸ್ ಜಗ್ಗ, ರವಿ ಹಾಗೂ ರಾಜು ತಲೆಮರೆಸಿಕೊಂಡಿದ್ದಾರೆ.ಜತೆಗೆ ಕೊಲೆಗೆ ಬಳಸಿದ್ದ ಜೀಪ್?, ಸ್ಕಾರ್ಪಿಯೋ ಕಾರು ಸೀಜ್ ಮಾಡಲಾಗಿದ್ದು, ಕೆಂಪು ಬಣ್ಣದ ಜೀಪ್??ನಲ್ಲಿ ಒಂದು ಮದ್ಯದ ಬಾಟಲ್? ಪತ್ತೆ ಆಗಿದೆ. ಸ್ಕಾರ್ಪಿಯೋ ಕಾರಿನಲ್ಲಿ ಲೇಡಿಸ್ ಬ್ಯಾಗ್ ಪತ್ತೆ ಆಗಿದ್ದು, ಆ ಬ್ಯಾಗ್ ಪವಿತ್ರಗೌಡಗೆ ಸೇರಿದ್ದು ಎನ್ನಲಾಗಿದೆ.

Related Articles

Back to top button
error: Content is protected !!