ಆರೋಗ್ಯ

ರಾಜ್ಯವೇ ಬೆಚ್ಚಿ ಬಿದ್ದಿದ್ದ ಭ್ರೂಣ ಲಿಂಗ ಪತ್ತೆ, ಹತ್ಯೆ ಕೇಸ್​​.. ಶಂಕಿತ ಆರೋಪಿ ಡಾ.ಸತೀಶ್​​ ಆತ್ಮಹತ್ಯೆ

Views: 0

ಭ್ರೂಣ ಲಿಂಗ ಪತ್ತೆ ಮತ್ತು ಹತ್ಯೆ ಪ್ರಕರಣದ ಆರೋಪಿ ಎನ್ನಲಾಗಿದ್ದ ವೈದ್ಯರೊಬ್ಬರು ಕಾರಿನಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಶಂಕೆ ವ್ಯಕ್ತಪಡಿಸಲಾಗಿದೆ. ಈ ಘಟನೆಯು ಕುಶಾಲನಗರದ ಆನೆಕಾಡು ಬಳಿ ನಡೆದಿದೆ.

ಡಾ. ಸತೀಶ್ ಆತ್ಮಹತ್ಯೆ ಮಾಡಿಕೊಂಡ ಆಯುರ್ವೇದ ವೈದ್ಯ. ಇವರು ಆಯುಷ್ ಇಲಾಖೆಯಲ್ಲಿ ಗುತ್ತಿಗೆ ಆಧಾರದ ಮೇಲೆ ​ ಪಿರಿಯಾಪಟ್ಟಣದ ಕೊಣನೂರಿನಲ್ಲಿ ಕೆಲಸ ಮಾಡುತ್ತಿದ್ದರು. ಇದರ ಜೊತೆಗೆ ಶಿವಳ್ಳಿ ಗ್ರಾಮದಲ್ಲಿ ಶ್ರೀ ವೆಂಕಟೇಶ್ವರ ಎನ್ನುವ ಹೆಸರಲ್ಲಿ ಕ್ಲಿನಿಕ್​ ನಡೆಸುತ್ತಿದ್ದರು. ಇದು ಭ್ರೂಣ ಲಿಂಗ ಪತ್ತೆ ಮಾಡುತ್ತಿದ್ದ ಹುಳ್ಳೇನಹಳ್ಳಿ ಸಮೀಪವೇ ಇದೆ. ಇಡೀ ರಾಜ್ಯವೇ ಬೆಚ್ಚಿ ಬಿದ್ದಿದ್ದ ಭ್ರೂಣ ಲಿಂಗ ಪತ್ತೆ ಹಾಗೂ ಹತ್ಯೆ ಕೇಸ್‌ನಲ್ಲಿ ಡಾ. ಸತೀಶ್ ಶಂಕಿತ ಆರೋಪಿಯಾಗಿದ್ದರು. ಪ್ರಕರಣ ಬೆಳಕಿಗೆ ಬಂದ ಮೇಲೆ ವೈದ್ಯರ ಮೇಲೆ ಸ್ಥಳೀಯರು ಸಾಕಷ್ಟು ಗಂಭೀರ ಆರೋಪಗಳನ್ನು ಮಾಡಿದ್ದರು.

ಸ್ಕ್ಯಾನಿಂಗ್ ನಡೆಯುತ್ತಿದ್ದ ಆಲೆಮನೆಗೆ ಆರೋಗ್ಯ ಸಚಿವ ದಿನೇಶ್​ ಗುಂಡೂರಾವ್​ ಭೇಟಿ ನೀಡಿದ್ದ ವೇಳೆ ವೈದ್ಯ ಸತೀಶ್ ವಿರುದ್ಧ ಸ್ಥಳೀಯರು ದೂರು ನೀಡಿ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದರು. ಹೀಗಾಗಿ ತಕ್ಷಣ ತನಿಖೆ ನಡೆಸುವಂತೆ ಸಚಿವರು ಸೂಚಿಸಿದ್ದರು. ಎಲ್ಲಿ ತನಿಖೆಯಲ್ಲಿ ಸಿಕ್ಕಿಬೀಳುತ್ತೇನೆ ಎಂಬ ಭಯದಿಂದ ಆತ್ಮಹತ್ಯೆಗೆ ಮಾಡಿಕೊಂಡಿದ್ದಾನೆ ಎಂದು ಶಂಕೆ ವ್ಯಕ್ತವಾಗಿದೆ.

Related Articles

Back to top button