ಕೃಷಿ

ರಾಜ್ಯದ ವಿವಿಧ ಮಾರುಕಟ್ಟೆಗಳಲ್ಲಿ ಅಡಿಕೆ ಮತ್ತು ಕೊಬ್ಬರಿ ಧಾರಣೆ ತಿಳಿಯಿರಿ

Views: 7

‘ಕನ್ನಡ ಕರಾವಳಿ’ ಕೃಷಿ ಮಾಹಿತಿ ಸುದ್ಧಿ

ರಾಶಿ ಕೆಂಪಡಕೆ ಕ್ವಿಂಟಾಲ್‌ಗೆ 55000 ರೂಪಾಯಿ ಮುಟ್ಟಿದ ನಂತರ ಕುಸಿತ ಕಂಡಿದ್ದ ಅಡಿಕೆ ಧಾರಣೆ ಸದ್ಯ ಸ್ಥಿರತೆ ಕಾಯ್ದುಕೊಂಡಿದೆ. ಸದ್ಯ ರಾಜ್ಯದ ವಿವಿಧ ಮಾರುಕಟ್ಟೆಗಳಲ್ಲಿ 45,000 – 48,000 ಆಸುಪಾಸಿನಲ್ಲಿ ಮಾರಾಟವಾಗುತ್ತಿದೆ.

ಮಂಗಳವಾರ ರಾಜ್ಯದ ಶಿವಮೊಗ್ಗ, ಸಿದ್ಧಾಪುರ, ಚನ್ನಗಿರಿ, ಚಿತ್ರದುರ್ಗ ಮಾರುಕಟ್ಟೆಗಳಲ್ಲಿ ರಾಶಿ ಅಡಿಕೆ ಧಾರಣೆ ಗರಿಷ್ಠ ದರ 45-47 ಸಾವಿರದ ಆಸುಪಾಸಿನಲ್ಲಿದೆ

ಶಿವಮೊಗ್ಗ ಮಾರುಕಟ್ಟೆಯಲ್ಲಿ ರಾಶಿ ಕೆಂಪಡಕೆ ಧಾರಣೆ ಕನಿಷ್ಠ 40,159 ರೂಪಾಯಿ ಆಗಿದ್ದರೆ ಗರಿಷ್ಠ ಮಾರಾಟ ದರ 47,221 ರೂಪಾಯಿಗಳಾಗಿತ್ತು. ಶಿರಸಿ ಮಾರುಕಟ್ಟೆಯಲ್ಲಿ ರಾಶಿ ಅಡಿಕೆ ಧಾರಣೆ ಕನಿಷ್ಠ 45,269 ರೂಪಾಯಿ ಆಗಿದ್ದರೆ, ಗರಿಷ್ಠ ಧಾರಣೆ 47,509 ರೂಪಾಯಿ ಆಗಿತ್ತು.

ಸಾಗರ ಮಾರುಕಟ್ಟೆಯಲ್ಲಿ ರಾಶಿ ಅಡಿಕೆ ಧಾರಣೆ ಕನಿಷ್ಠ 32,290 ರೂಪಾಯಿ ಇದ್ದರೆ ಗರಿಷ್ಠ 47,389 ರೂಪಾಯಿ ಆಗಿತ್ತು. ಸಿದ್ಧಾಪುರ ಮಾರುಕಟ್ಟೆಯಲ್ಲಿ ರಾಶಿ ಅಡಿಕೆ ಕನಿಷ್ಟ 44,099 ರೂಪಾಯಿ ಇದ್ದರೆ ಗರಿಷ್ಠ 46,789 ರೂಪಾಯಿ ಆಗಿತ್ತು.

ಕುಸಿದ ಅಡಿಕೆ ಬೆಲೆ, ಕೊಬ್ಬರಿ ಧಾರಣೆ ತಿಳಿಯಿರಿ

ನವೆಂಬರ್ 7 ರಂದು ವಿವಿಧ ಮಾರುಕಟ್ಟೆಯಲ್ಲಿ ಅಡಿಕೆ ಧಾರಣೆ (ಪ್ರತಿ ಕ್ವಿಂಟಾಲ್)

1 ಚನ್ನಗಿರಿ ರಾಶಿ ₹45,399 ₹47,500 ₹46,394

2 ಬಂಟ್ವಾಳ ಹಳೆಯ ವೆರೈಟಿ ₹43,500 ₹48,500 ₹46,500

3 ಚಿತ್ರದುರ್ಗ ಕೆಂಪು ಗೋಟು ₹30,000 ₹30,400 ₹30,200

4 ಚಿತ್ರದುರ್ಗ ರಾಶಿ ₹44,929 ₹45,389 ₹45,179

5 ಗೋಣಿಕೊಪ್ಪಲು ಅಡಿಕೆ-ಸಿಪ್ಪೆ ₹4,000 ₹4,800 ₹4,500

6 ಹೊನ್ನಳ್ಳಿ ರಾಶಿ ₹46,819 ₹46,819 ₹46,819

7 ಕಾರ್ಕಳ ಹೊಸ ವೆರೈಟಿ ₹25,000 ₹36,500 ₹30,000

8 ಕುಮಟಾ ಫ್ಯಾಕ್ಟರಿ ₹10,099 ₹24,299 ₹23,579

9 ಕುಮಟಾ ಹಳೆ ಚಾಲಿ ₹39,809 ₹40,199 ₹40,019

10 ಸಾಗರ ಚಾಲಿ ₹29,499 ₹38,899 ₹37,199

11 ಸಾಗರ ಕೆಂಪು ಗೋಟು ₹28,299 ₹34,699 ₹33,179

12 ಸಾಗರ ರಾಶಿ ₹32,290 ₹47,389 ₹46,899

13 ಶಿವಮೊಗ್ಗ ಬೆಟ್ಟೆ ₹45,009 ₹52,952 ₹52,750

14 ಶಿವಮೊಗ್ಗ ರಾಶಿ ₹40,159 ₹47,221 ₹45,559

15 ಸಿದ್ದಾಪುರ ಚಾಲಿ ₹37,609 ₹40,239 ₹38,699

16 ಸಿದ್ದಾಪುರ ರಾಶಿ ₹44,099 ₹46,789 ₹45,809

17 ಶಿರಸಿ ರಾಶಿ ₹45,269 ₹47,509 ₹46,044

18 ಯಲ್ಲಾಪುರ ಕೋಕಾ ₹17,999 ₹31,999 ₹28,899

19 ಯಲ್ಲಾಪುರ ರಾಶಿ ₹45,900 ₹54,815 ₹49,809

ಸ್ಥಿರತೆ ಕಾಯ್ದುಕೊಂಡ ಕೊಬ್ಬರಿ ಧಾರಣೆ

ಮಂಗಳವಾರ ರಾಜ್ಯದ ಹಲವು ಮಾರುಕಟ್ಟೆಗಳಲ್ಲಿ ಕೊಬ್ಬರಿ ದರ ಸ್ಥಿರತೆ ಕಾಯ್ದುಕೊಂಡಿದೆ. ರಾಜ್ಯದ ಪ್ರಮುಖ ಕೊಬ್ಬರಿ ಮಾರುಕಟ್ಟೆ ತಿಪಟೂರಿನಲ್ಲಿ ಕೊಬ್ಬರಿ ಧಾರಣೆ ಕನಿಷ್ಠ 7,500 ರೂಪಾಯಿ ಇದ್ದರೆ ಗರಿಷ್ಠ 8,600 ರೂಪಾಯಿಗೆ ಮಾರಾಟವಾಗಿದೆ.

ತುರುವೇಕೆರೆ ಮಾರುಕಟ್ಟೆಯಲ್ಲಿ ಕೊಬ್ಬರಿ ಬೆಲೆ ಕನಿಷ್ಠ 8,200 ರೂಪಾಯಿಗೆ ಮಾರಾಟವಾಗಿದ್ದು, ಹುಳಿಯಾರಿನಲ್ಲಿ 8,000 ರೂಪಾಯಿ ಮತ್ತು ಸಿರಾ ಮಾರುಕಟ್ಟೆಯಲ್ಲಿ 8,000 ರೂಪಾಯಿಗೆ ಮಾರಾಟವಾಗಿದೆ.

ರಾಜ್ಯದ ವಿವಿಧ ಮಾರುಕಟ್ಟೆಗಳಲ್ಲಿ ಕೊಬ್ಬರಿ ದರ (ಪ್ರತಿ ಕ್ವಿಂಟಾಲ್‌ಗೆ

1 ತಿಪಟೂರು ಕೊಬ್ಬರಿ ₹7,500 ₹8,600 ₹8,200

2 ತುರುವೇಕೆರೆ ಕೊಬ್ಬರಿ ₹8,200 ₹8,200 ₹8,200

3 ಅರಸೀಕೆರೆ ಕೊಬ್ಬರಿ ₹7,500 ₹8,430 ₹8,185

4 ಹುಳಿಯಾರ್ ಬಾಲ್ ₹7,900 ₹8,100 ₹8,000

5 ಸಿರಾ ಸಣ್ಣ ₹8,000 ₹8,000 ₹8,000

6 ಕೆ.ಆರ್.ಪೇಟೆ ಬೇರೆ ₹8,408 ₹8,408 ₹8,408

Related Articles

Back to top button
error: Content is protected !!