ಜನಮನ

ರಸ್ತೆ ದಾಟುತ್ತಿದ್ದಾಗ ಬಸ್ಸಿನಡಿಗೆ ಸಿಲುಕಿ ವ್ಯಕ್ತಿ ಸಾವು..

Views: 0

ಪುತ್ತೂರು: ಪ್ರಯಾಣಿಕರೊಬ್ಬರು ಬಸ್ಸಿನಡಿಗೆ ಬಿದ್ದು, ಮೃತಪಟ್ಟ ಘಟನೆ ಕರ್ನಾಟಕ-ಕೇರಳ ಗಡಿಪ್ರದೇಶವಾದ ಪುತ್ತೂರು ತಾಲೂಕಿನ ನೆಟ್ಟಣಿಗೆ ಮುಡ್ನೂರು ಗ್ರಾಮದ ಗಾಳಿಮುಖದಲ್ಲಿ ಡಿ.8ರ ಸಂಜೆ ವೇಳೆ ನಡೆದಿದೆ.

ಕಾಸರಗೋಡು ಜಿಲ್ಲೆಯ ಮುಳ್ಳೇರಿಯಾ ನಿವಾಸಿ ಕುಂಞರಾಮ ಮಣಿಯಾಣಿ (68) ಮೃತಪಟ್ಟವರು. ಕೇರಳದ ಅಡೂರಿನಿಂದ ಮುಳ್ಳೇರಿಯಾ ಕಡೆಗೆ ತೆರಳುತ್ತಿದ್ದ ಖಾಸಗಿ ಬಸ್ಸೊಂದರಲ್ಲಿ ಬಂದು ಗಾಳಿಮುಖದಲ್ಲಿ ಇಳಿದ ಕುಂಞರಾಮ ಅವರು, ಬಸ್ಸಿನಿಂದ ಇಳಿದು ಬಸ್ಸಿನ ಎದುರು ಭಾಗದ ಮೂಲಕವಾಗಿ ರಸ್ತೆ ದಾಟುತ್ತಿದ್ದರು. ಈ ವೇಳೆ ಅವರನ್ನು ಗಮನಿಸದೆ ಇದ್ದ ಬಸ್ ಚಾಲಕ ಬಸ್ಸನ್ನು ಮುಂದಕ್ಕೆ ಚಲಾಯಿಸಿದ್ದಾರೆ. ಆಗ ಕುಂಞರಾಮ ಅವರು ಬಸ್ಸಿನಡಿಗೆ ಬಿದ್ದಿದ್ದು, ಅವರ ಎದೆ ಭಾಗದ ಮೇಲೆಯೇ ಬಸ್ಸಿನ ಚಕ್ರವೊಂದು ಹರಿದು ಹೋಗಿದೆ. ಗಂಭೀರ ಗಾಯಗೊಂಡ ಅವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ.

Related Articles

Back to top button
error: Content is protected !!