ಇತರೆ
ರಸ್ತೆ ಅಪಘಾತದಲ್ಲಿ ಗಂಭೀರ ಗಾಯಗೊಂಡ ಕೋಟೇಶ್ವರದ ಗಿರಿಧರ ಎಸ್. ಭಟ್ ಚಿಕಿತ್ಸೆಗೆ ಸ್ಪಂದಿಸದೇ ಸಾವು
Views: 319
ಕನ್ನಡ ಕರಾವಳಿ ಸುದ್ದಿ: ಇತ್ತೀಚಿಗೆ ನಡೆದ ರಸ್ತೆ ಅಪಘಾತದಲ್ಲಿ ಗಂಭೀರ ಗಾಯಗೊಂಡು ಪ್ರಜ್ಞಾಹೀನರಾಗಿ ಮಣಿಪಾಲ ಹಾಗೂ ಕೋಟೇಶ್ವರದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆಯಲ್ಲಿದ್ದ ಕೋಟೇಶ್ವರದ ಮಲ್ಲಿಗೆ ಹೂವಿನ ವ್ಯಾಪಾರಿ ಗಿರಿಧರ ಎಸ್. ಭಟ್ (57) ) ಅವರು ಚಿಕಿತ್ಸೆಗೆ ಸ್ಪಂದಿಸದೇ ಮೃತಪಟ್ಟರು. ಮೃತರು ಪತ್ನಿ ಹಾಗೂ ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ.
ಕೆಲವು ದಿನಗಳ ಹಿಂದೆ ಹೊಂಬಾಡಿ ಬಳಿ ದ್ವಿಚಕ್ರ ವಾಹನದಲ್ಲಿ ಸಾಗುತ್ತಿದ್ದ ಗಿರಿಧರ ಭಟ್ ಅವರಿಗೆ ಅಪರಿಚಿತ ವಾಹನ ಢಿಕ್ಕಿ ಹೊಡೆದ ಪರಿಣಾಮ ಗಂಭೀರ ಗಾಯಗೊಂಡು ಮಣಿಪಾಲ ಹಾಗೂ ಕೋಟೇಶ್ವರ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು.
ಕೋಟೇಶ್ವರದಲ್ಲಿ ಪ್ರಥಮ ಕನ್ನಡ ಟೈಪಿಂಗ್ ಮಿಷನ್ ತಂದು ವ್ಯವಹಾರ ನಡೆಸುತ್ತಿದ್ದ ಅವರು ಪರಿಸರದ ಹೂವಿನ ವ್ಯಾಪಾರಿಗಳಿಗೆ ಮಲ್ಲಿಗೆ ಹೂವನ್ನು ಒದಗಿಸುವುದರ ಮೂಲಕ ಗಿರಿಯಣ್ಣ ಎಂದು ಗುರುತಿಸಿಕೊಂಡಿದ್ದರು. ವಿವಿಧ ರಾಜ್ಯ ಹಾಗೂ ಪರಿಸರದ ವ್ಯಾಪಾರ ವ್ಯವಹಾರಿಗಳ ಪಾರ್ಸೆಲ್ ಗಳನ್ನು ಒದಗಿಸುವುದರಲ್ಲಿಯೂ ಮುಂಚೂಣಿಯಲ್ಲಿದ್ದರು.






