ಇತರೆ

ರಶ್ಮಿಕಾ ಮಂದಣ್ಣ ವಿಜಯ್ ದೇವರಕೊಂಡ ಮದುವೆ ಫಿಕ್ಸ್! ಯಾವಾಗ ಗೊತ್ತಾ?

Views: 49

ಕನ್ನಡ ಕರಾವಳಿ ಸುದ್ದಿ: ರಶ್ಮಿಕಾ ಮಂದಣ್ಣ ಹಾಗೂ ನಟ ವಿಜಯ್ ದೇವರಕೊಂಡ ಮದುವೆ 2026 ಫೆಬ್ರವರಿ 26 ರಂದು ನಡೆಯಲಿದೆ ಎಂದು ರಾಷ್ಟ್ರೀಯ ಮಾಧ್ಯಮಗಳು ವರದಿ ಮಾಡಿವೆ. ನಿಶ್ಚಿತಾರ್ಥ ಕಾರ್ಯಕ್ರಮದಂತೆ ವಿವಾಹ ಸಮಾರಂಭ ಕೂಡ ಕುಟುಂಬಸ್ಥರ ಹಾಗೂ ಆಪ್ತರ ಸಮ್ಮುಖದಲ್ಲಷ್ಟೇ ನಡೆಯಲಿದೆ.

ವರದಿಗಳ ಪ್ರಕಾರ, ವಿವಾಹ ಕಾರ್ಯಕ್ರಮವು ರಾಜಸ್ಥಾನದ ಉದಯ್ಪುರ ಪ್ಯಾಲೇಸ್ನಲ್ಲಿ ನಡೆಯಲಿದೆ. ಮದುವೆ ಬಳಿಕ ರಶ್ಮಿಕಾ ಮತ್ತು ವಿಜಯ್ ದೇವರಕೊಂಡ ಅವರ ಆರತಕ್ಷತೆ ಕಾರ್ಯಕ್ರಮವು ಹೈದರಾಬಾದ್ನಲ್ಲಿ ಆಯೋಜನೆಗೊಳ್ಳಲಿದೆ. ಈ ಕಾರ್ಯಕ್ರಮಕ್ಕೆ ಸಿನಿಮಾ ತಾರೆಯರಿಗೆ ಆಹ್ವಾನ ನೀಡಲಿದ್ದಾರೆ. ಈ ಜೋಡಿ 2025, ಅಕ್ಟೋಬರ್ 3 ರಂದು ನಿಶ್ಚಿತಾರ್ಥ ನೆರವೇರಿಸಿಕೊಂಡಿತ್ತು.

ಇನ್ನೊಂದು ವಿಚಾರ ಅಂದ್ರೆ ಇಬ್ಬರೂ ಕೂಡ ಎಂಗೆಜ್ಮೆಂಟ್ ಆಗಿರುವ ವಿಚಾರವನ್ನೂ ಇನ್ನೂ ಕೂಡ ಸಾರ್ವಜನಿಕವಾಗಿ ಬಹಿರಂಗಪಡಿಸಿಲ್ಲ. ಇತ್ತೀಚೆಗೆ ಹಾಲಿವುಡ್ ವರದಿಗಾರನೊಬ್ಬ ರಶ್ಮಿಕಾರನ್ನು ಸಂದರ್ಶನ ಮಾಡಿದ್ದ. ಈ ವೇಳೆ ಮದುವೆ ವದಂತಿ ಬಗ್ಗೆ ಕೇಳಲಾಗಿರುವ ಪ್ರಶ್ನೆಗೆ ಉತ್ತರಿಸಿದ್ದ ರಶ್ಮಿಕಾ, ಮದುವೆಯನ್ನು ನಾನು ದೃಢಕರಿಸಲು ಅಥವಾ ನಿರಾಕರಿಸಲ್ಲ ಇಷ್ಟಪಡುವುದಿಲ್ಲ. ಅದರ ಬಗ್ಗೆ ನಾವು ಯಾವಾಗ ಹೇಳಬೇಕು ಅಂತಾ ಹೇಳ್ತೇವೆ ಎಂದಿದ್ದರು.

Related Articles

Back to top button
error: Content is protected !!