ಇತರೆ
ಯಾತ್ರೆ ವೇಳೆ ವಿದ್ಯುತ್ ಅವಘಡ :ಡಿಜೆ ವಾಹನಕ್ಕೆ ಹೈ ಟೆನ್ಷನ್ ವಿದ್ಯುತ್ ತಂತಿ ತಗುಲಿ 10 ಜನರು ಸಾವು

Views: 113
ಬಿಹಾರ: ಬಿಹಾರದ ವೈಶಾಲಿಯಲ್ಲಿ ಕನ್ವರ್ ಯಾತ್ರೆ ವೇಳೆ ದೊಡ್ಡ ದುರಂತವೊಂದು ಸಂಭವಿಸಿದೆ. ಡಿಜೆ ವಾಹನಕ್ಕೆ ಹೈ ಟೆನ್ಷನ್ ತಂತಿ ತಗುಲಿ 10 ಮಂದಿ ಸಾವನ್ನಪ್ಪಿದ್ದಾರೆ. ಘಟನೆಯಲ್ಲಿ ಇಬ್ಬರು ಕನ್ವಾರಿಯಾಗಳ ಸ್ಥಿತಿ ಚಿಂತಾಜನಕವಾಗಿದೆ.
ವೈಶಾಲಿಯ ಹಾಜಿಪುರ ಕೈಗಾರಿಕಾ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿರುವ ಸುಲ್ತಾನ್ಪುರ ಗ್ರಾಮದಲ್ಲಿ ವಾಸಿಸುತ್ತಿದ್ದ ಹತ್ತಕ್ಕೂ ಹೆಚ್ಚು ಯುವಕರು ಡಿಜೆ ಟ್ರಾಲಿಯೊಂದಿಗೆ ಸರನ್ನ ಪಹೇಲ್ಜಾ ಘಾಟ್ಗೆ ಹೋಗುತ್ತಿದ್ದರು. ಸೋನ್ಪುರ ಬಾಬಾ ಹರಿಹರನಾಥದಲ್ಲಿ ಗಂಗಾಜಲದಿಂದ ಜಲಾಭಿಷೇಕದ ವೇಳೆ ಅಪಘಾತ ಸಂಭವಿಸಿದೆ.
ಎಂಟು ಮಂದಿ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಇನ್ನಿಬ್ಬರು ಚಿಕಿತ್ಸೆ ವೇಳೆ ಸಾವನ್ನಪ್ಪಿದ್ದಾರೆ. ಆದರೆ, 8 ಜನರ ಸಾವಿನ ಬಗ್ಗೆ ಸರ್ಕಾರಿ ಅಧಿಕಾರಿಗಳು ದೃಢಪಡಿಸಿದ್ದಾರೆ. ಒಟ್ಟು 10 ಮಂದಿ ಸಾವನ್ನಪ್ಪಿರುವ ಬಗ್ಗೆ ಗ್ರಾಮಸ್ಥರು ತಿಳಿಸಿದ್ದಾರೆ.






