ಸಾಂಸ್ಕೃತಿಕ

ಯವ ರಾಜ್ ಕುಮಾರ್ ಮೇಲೆ ಗಂಭೀರ ಆರೋಪ ಮಾಡಿದ ಶ್ರೀದೇವಿ

Views: 166

ದೊಡ್ಮನೆ ಕುಟುಂಬದಲ್ಲಿ ಇದುವರೆಗೆ ನಡೆಯದ ಘಟನೆ ನಡೆದು ಹೋಗಿದೆ. ಯುವ ರಾಜ್ ಕುಮಾರ್ ಡಿವೋರ್ಸ್ಗಗೆ ಅರ್ಜಿ ಸಲ್ಲಿಸಿದ್ದಾರೆ. ಪತ್ನಿಯಿಂದ ಮಾನಸಿಕ ಹಿಂಸೆ ಅಂತ ಯುವ ಆರೋಪ ಮಾಡಿದರೆ  ಶ್ರಿದೇವಿ ಮಾತ್ರ ಪತಿಗೆ ಬೇರೊಂದು ಸಂಬಂಧವಿದೆ ಎಂದು ಗಂಭೀರ ಆರೋಪ ಮಾಡಿದ್ದಾರೆ.

ದೊಡ್ಮನೆಯಲ್ಲಿ ಮೊದಲ ಡಿವೋರ್ಸ್ ಕೇಸ್ ದಾಖಲಾಗಿದೆ. ಕೌಟುಂಬಿಕ ನ್ಯಾಯಾಲಯದಲ್ಲಿ ರಾಘವೇಂದ್ರ ರಾಜ್ ಕುಮಾರ್ ಎರಡನೇ ಪುತ್ರ ಯುವ ರಾಜ್ ಕುಮಾರ್ ಡಿವೋರ್ಸ್ಗೆ ಅರ್ಜಿ ಸಲ್ಲಿಸಿದ್ದಾರೆ. ಪತ್ನಿಯ ವಿರುದ್ಧ ಕ್ರೌರ್ಯ, ಅಗೌರವ ಹಾಗೂ ಮಾನಸಿಕ ಟಾರ್ಚರ್ ಆರೋಪ ಮಾಡಿ ಕೇಸ್ ದಾಖಲಿಸಿದ್ದಾರೆ. ಕಳೆದ 6ನೇ ತಾರೀಕು ಅರ್ಜಿ ಸಲ್ಲಿಸಿದ್ದು ಯುವ ಪತ್ನಿ ಶ್ರೀದೇವಿ ಭೈರಪ್ಪಗೆ ಕೋರ್ಟ್ ನೋಟಿಸ್ ಕೊಟ್ಟಿದೆ. ಜುಲೈ 4ರಂದು ವಿಚಾರಣೆ ನಿಗದಿ ಮಾಡಲಾಗಿದೆ.

ಚಂದನವನದ ದೊಡ್ಮನೆಯಲ್ಲಿ ಮೊದಲ ಬಾರಿಗೆ ಡಿವೋರ್ಸ್ ಸದ್ದು ಮಾಡಿದೆ. ಯುವ ರಾಜ್ ಕುಮಾರ್ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದಾರೆ. ತನ್ನ ವಿರುದ್ಧ ಮಾನಸಿಕ ಕಿರುಕುಳ ಆರೋಪ ಮಾಡಿದ ಪತಿ ವಿರುದ್ಧ ಅಫೇರ್ ಬಗ್ಗೆ ಗಂಭೀರ ಆರೋಪ ಮಾಡಿದ್ದಾರೆ.

ಇನ್ನು ಲೀಗಲ್‌ ನೋಟಿಸ್‌ ನೀಡಿದ ಪತಿ ಯುವರಾಜ್‌ ಕುಮಾರ್‌ಗೆ ಶ್ರೀದೇವಿ ಸವಿವರ ಉತ್ತರ ನೀಡಿದ್ದಾರೆ. ಉತ್ತರದಲ್ಲಿ ಗಂಭೀರವಾದ ಆರೋಪ ಮಾಡಿದ್ದಾರೆ. ಅಮೆರಿಕದಿಂದ ಯುವ ವಕೀಲರಿಗೆ ಪ್ರತ್ಯುತ್ತರ ಕೊಟ್ಟಿದ್ದು, ಯುವನಿಗೆ ಸಹ ನಟಿ ಜೊತೆ ಅಫೇರ್‌ ಇರೋದಾಗಿ ಆರೋಪಿಸಿದ್ದಾರೆ. ಕೇಳಿದ್ದಕ್ಕೆ ಇದು ವಯಸ್ಕರ ವಿಚಾರ ಅಂತ ಹೇಳಿದ್ದಾರಂತೆ. ಅಲ್ಲದೆ ಯುವಗೆ ಅವರ ಕರಿಯರ್ ಮೇಲೆ ಗುರಿಯೇ ಇರಲಿಲ್ಲ ಅಂತ ಹೇಳಿದ್ದಾರೆ.

ಕಳೆದ ಆರೇಳು ತಿಂಗಳಿಂದ ಯುವ-ಶ್ರೀದೇವಿ  ದೂರ ಇದ್ದಾರೆ. ಸುಮಾರು 7 ವರ್ಷ ಪ್ರೀತಿಸಿ ಮದುವೆಯಾದ ಜೋಡಿ ಈಗ ಬೇರೆಯಾಗುತ್ತಿದ್ದಾರೆ.

ಶ್ರೀದೇವಿ ತಂದೆ ಬೈರಪ್ಪ ಮಾತನಾಡಿ, ನನ್ನ ಮಗಳನ್ನು ಬಲವಂತವಾಗಿ ಮದುವೆ ಮಾಡಿಕೊಂಡಿದ್ದಾರೆ. ರಾಘವೇಂದ್ರ ರಾಜ್ ಕುಮಾರ್ ಅವರೇ ಬಲವಂತ ಮಾಡಿದರು. ಡಾ.ರಾಜ್ ಕುಮಾರ್ ಅಕಾಡೆಮಿ ಆರಂಭಿಸಿದ್ದು ನನ್ನ ಮಗಳು. ಅವರಿಂದ ನನ್ನ ಮಗಳು ಸಾಕಷ್ಟು ಹಿಂಸೆ ಅನುಭವಿಸಿದ್ದಾಳೆ. ನನ್ನ ಮಗಳ ವಿದ್ಯಾಭ್ಯಾಸಕ್ಕೆ ಅವರೇ ಯುಎಸ್ ಗೆ ಕಳುಹಿಸಿದ್ದಾರೆ. ನಮಗೆ ಅವರಿಬ್ಬರು ಕೂಡ ಚೆನ್ನಾಗಿರಬೇಕು ಅಂತ ಆಸೆ. ಯಾವುದೇ ಕಾರಣಕ್ಕೂ ಡಿವೋರ್ಸ್ ಕೊಡಲ್ಲ ಎಂದಿದ್ದಾರೆ.

ನಟ ಯುವರಾಜಕುಮಾರ್ ಡಿವೋರ್ಸ್ ಸುದ್ದಿ ಚಂದನವನವನ್ನು ಶೇಕ್ ಮಾಡಿದೆ. ಅಣ್ಣಾವ್ರ ಕುಟುಂಬದ ಅಭಿಮಾನಿಗಳು ಶಾಕ್ ಗೆ ಒಳಗಾಗಿದ್ದಾರೆ.. ಆದಷ್ಟು ಬೇಗ ಇಬ್ಬರೂ ತಮ್ಮ ಬಿನ್ನಾಭಿಪ್ರಾಯಗಳನ್ನು ಸರಿಪಡಿಸಿಕೊಳ್ಳಲಿ ಎಂದು ಅಭಿಮಾನಿಗಳ ಹಾರೈಕೆಯಾಗಿದೆ.

Related Articles

Back to top button
error: Content is protected !!