ಸಾಂಸ್ಕೃತಿಕ
ಯಕ್ಷಗಾನ ಭಾಗವತಿಕೆ ಮಾಡುತ್ತಿರುವಾಗಲೇ ಸಾವು

Views: 227
ಉಡುಪಿ : ಮುಂಬೈನಲ್ಲಿ ಯಕ್ಷಗಾನ ಕಲಾ ಸೇವೆ ಮಾಡುತ್ತಿದ್ದ ಕುಕ್ಕೆಹಳ್ಳಿ ವಿಟ್ಠಲ ಪ್ರಭು ಅವರು ದೈಸರ್ ನಲ್ಲಿ ಯಕ್ಷಗಾನ ಭಾಗವತಿಕೆ ಮಾಡುತ್ತಿದ್ದಾಗಲೇ ಎದೆನೋವು ಬಂದು ಸಾವನ್ನಪ್ಪಿದ್ದಾರೆ.
ಮುಂಬೈ ದೈಸರ್ ಕಾಶಿಮಠದಲ್ಲಿ ನ.23 ಶನಿವಾರ ದಂದು ಕುಕ್ಕೆಹಳ್ಳಿ ವಿಟ್ಠಲ ಪ್ರಭು ಅವರ ನಿರ್ದೇಶನದಲ್ಲಿ ಯಕ್ಷಗಾನ ನಡೆಯುತ್ತಿತ್ತು. ಭಾಗವತಿಕೆ ನಡೆಸುತ್ತಿದ್ದ ವೇಳೆ ಎದೆ ನೋವು ಬಂದು ಭಾಗವತಿಕೆಯನ್ನು ಬೇರೊಬ್ಬ ಭಾಗವತರಿಗೆ ತಾಳವನ್ನು ಹಸ್ತಾಂತರಿಸಿ ಸ್ವಲ್ಪ ಹೊತ್ತಿನಲ್ಲಿಯೇ ಪ್ರಾಣ ಬಿಟ್ಟಿದ್ದಾರೆ.
ವಿಟ್ಠಲ್ ಪ್ರಭು ಅವರು ಮುಂಬೈ ನಗರದಲ್ಲಿ ಹಲವಾರು ವಿದ್ಯಾರ್ಥಿಗಳಿಗೆ ಯಕ್ಷಗಾನವನ್ನು ಕಲಿಸಿ ಯಕ್ಷಗಾನ ಭಾಗವತಿಗೆ, ಪಾತ್ರಧಾರಿ, ಯಕ್ಷಗಾನ ತಾಳಮದ್ದಲೆ, ಯಕ್ಷಗಾನ ನಿರ್ದೇಶನ ಮಾಡುತ್ತಿದ್ದಾರೆ.






