ಜನಮನ
ಮೈಸೂರು: ಹುಲಿ ದಾಳಿಯಿಂದ 2ನೇ ತರಗತಿ ಬಾಲಕ ಸಾವು

Views: 0
ಮೈಸೂರು: ಎಚ್.ಡಿ.ಕೋಟೆ ತಾಲೂಕಿನ ಸಿದ್ದಾಪುರ (ಕಲ್ಲಹಟ್ಟಿ) ಗ್ರಾಮದಲ್ಲಿ 9 ವರ್ಷದ ಬಾಲಕನ ಮೇಲೆ ಹುಲಿ ದಾಳಿ ಮಾಡಿ ಕೊಂದು ಹಾಕಿರುವ ಘಟನೆ ನಡೆದಿದೆ.
ಕೃಷ್ಣ ನಾಯಕ್ ಮತ್ತು ಮಹಾದೇವಿಬಾಯಿ ದಂಪತಿಯ ಪುತ್ರ, ಸಿದ್ದಾಪುರ ಸರ್ಕಾರಿ ಶಾಲೆಯಲ್ಲಿ ಎರಡನೇ ತರಗತಿ ಓದುತ್ತಿದ್ದ ಹುಡುಗ ಚರಣ್ ನಾಯಕ್ ಹುಲಿಯ ಬಾಯಿಗೆ ಬಲಿಯಾದ ಬಾಲಕ. ಸೋಮವಾರ ಮಧ್ಯಾಹ್ನದ ನಂತರ ಶಾಲೆಗೆ ರಜೆ ನೀಡಿದ್ದರಿಂದ ಚರಣ್ ಜಮೀನಿನಲ್ಲಿದ್ದ ತಂದೆ-ತಾಯಿ ಬಳಿಗೆ ಹೋಗಿದ್ದ, ಬಿಸಿಲು ಇದ್ದದ್ದರಿಂದ ಮಗನನ್ನು ಮರದ ನೆರಳಲ್ಲಿ ಕೂರಿಸಿ ಹೊಲದಲ್ಲಿ ಮೆಣಸಿನಕಾಯಿ ಕೊಯ್ಲು ಮಾಡುತ್ತಿದ್ದರು. ಈ ವೇಳೆ ಹುಲಿ ಬಾಲಕನ್ನು ಹೊತ್ತೊಯ್ದಿದೆ.
ಬಳಿಕ ಮಗ ಇಲ್ಲದನ್ನು ಗಮನಿಸಿ ಹುಡುಕಾಡಿದಾಗ ರಕ್ತದ ಮಡುವಿನಲ್ಲಿ ಮಗನ ದೇಹ ಇರುವುದು ಕಂಡುಬಂದಿದೆ






