ಶಿಕ್ಷಣ

ಮೇ.29 ಶಾಲಾರಂಭಕ್ಕೆ ಕೋವಿಡ್ ಉಲ್ಬಣ ಭೀತಿ: ಶಿಕ್ಷಣ ಇಲಾಖೆಯ ನಿರ್ಧಾರವೇನು?

Views: 287

ಕನ್ನಡ ಕರಾವಳಿ ಸುದ್ದಿ: ದಿನದಿಂದ ದಿನಕ್ಕೆ ಕೋವಿಡ್ ಸೋಂಕಿತರ ಸಂಖ್ಯೆ ಹೆಚ್ಚಳವಾಗುತ್ತಿದೆ. ಈಗಾಗಲೇ ಈ ಮಹಾಮಾರಿ ಮೊದಲ ಬಲಿಯನ್ನು ಪಡೆದಿದೆ. ಆದ್ರೇ ಈಗ ರಾಜ್ಯದಲ್ಲಿ ಒಮಿಕ್ರಾನ್ ಆತಂಕ ಶುರುವಾಗುತ್ತಿದ್ದಂತೆ ಶಿಕ್ಷಣ ಇಲಾಖೆ ಮಹತ್ವದ ನಿರ್ಧಾರಕ್ಕೆ ಮುಂದಾಗಿದೆ.

ಮೇ 29ರಿಂದ ರಾಜ್ಯಾದ್ಯಂತ ಸರ್ಕಾರಿ ಶಾಲೆ ಆರಂಭ ಮಾಡೋದಕ್ಕೆ ಶಿಕ್ಷಣ ಇಲಾಖೆ ತಯಾರಿ ನಡೆಸುತ್ತಿದ್ದಾರೆ. ಆದ್ರೆ ಸದ್ದಿಲ್ಲದೇ ಒಮಿಕ್ರಾನ್ ಉಪತಳಿ ಉಪಟಳ ಕೊಡ್ತಾ ಇರೋ ಹಿನ್ನೆಲೆಯಲ್ಲಿ ಶಾಲೆ ಆರಂಭ ಮಾಡುವುದಾ ಅಥವಾ ಪೋಸ್ಟ್ ಪೋನ್ ಮಾಡಬೇಕಾ ಅಂತ ಯೋಚನೆಯಲ್ಲಿದ್ದಾರೆ. ಏಕೆಂದರೆ ದಿನೇ ದಿನೇ ಸೋಂಕು ಉಲ್ಬಣ ಆಗೋ ಭೀತಿ ಎದುರಾಗಿದೆ. ಮಳೆ ಮಧ್ಯೆ ಶಾಲೆ ಆರಂಭವಾಗಿ ಮಕ್ಕಳಲ್ಲಿ ವ್ಯಾಪಕ ಸೋಂಕು ಕಾಣಿಸಿಕೊಂಡರೆ ಅನ್ನೋ ಭೀತಿ ಇದೆ. ಮಳೆಯಲ್ಲಿ ಮಕ್ಕಳಿಗೆ ಸೊಂಕು ಬೇಗನೇ ಹರಡುತ್ತವೆ. ಈಗಾಗಲೇ 3 ಮಕ್ಕಳಲ್ಲಿ ಕೋವಿಡ್ ಪಾಸಿಟಿವ್ ಬಂದಿದೆ. ಹೀಗಾಗಿ ಮಕ್ಕಳ ಹಿತ ದೃಷ್ಟಿಯಿಂದ ಶಾಲಾ ಆರಂಭ ಪೋಸ್ಟ್ ಪೋನ್ಗೆ ಶಿಕ್ಷಣ ಇಲಾಖೆ ಪ್ಲಾನ್ ಮಾಡುತ್ತಿದೆ.

ಹೀಗಾಗಿ ಇನ್ನೂ ಎರಡು ದಿನ ಕಾದ ಬಳಿಕ ಇಲಾಖೆ ಅಧಿಕೃತ ಘೋಷಣೆ ಮಾಡಲಿದೆ. ಟೆಸ್ಟಿಂಗ್ ಶುರುವಾದ ಮೇಲೆ ಸೋಂಕಿತರ ಸಂಖ್ಯೆ ಅವಲೋಕಿಸಿ ಶಾಲೆ ಪೋಸ್ಟ್ ಪೋನ್ ಬಗ್ಗೆ ಇಲಾಖೆ ನಿರ್ಧಾರ ಮಾಡಲಿದೆ ಎಂದು ಶಿಕ್ಷಣ ಇಲಾಖೆ ಮೂಲಗಳಿಂದ ಮಾಹಿತಿ ಲಭ್ಯವಾಗಿದೆ.

Related Articles

Back to top button
error: Content is protected !!