ಸಾಂಸ್ಕೃತಿಕ

ಮೇ.18 ರಂದು ಎಡಮಕ್ಕಿ- ಶಂಕನಾರಾಯಣದಲ್ಲಿ ಶ್ರೀ ಕ್ಷೇತ್ರ ಕಮಲಶಿಲೆ ಮೇಳದವರಿಂದ ಯಕ್ಷಗಾನ ಬಯಲಾಟ

Views: 64

ಕುಂದಾಪುರ ತಾಲೂಕಿನ ಎಡಮಕ್ಕಿ- ಶಂಕರ ನಾರಾಯಣದಲ್ಲಿ ಮೇ.18 ರಂದು ಶನಿವಾರ ಶ್ರೀ ಬ್ರಾಹ್ಮೀ ದುರ್ಗಾಪರಮೇಶ್ವರಿ ದಶಾವತಾರ ಯಕ್ಷಗಾನ ಮಂಡಳಿ ಶ್ರೀ ಕ್ಷೇತ್ರ ಕಮಲಶಿಲೆ ಇವರಿಂದ ಶ್ರೀಮತಿ ಮತ್ತು ಶ್ರೀ ವಿಠಲ ಶೆಟ್ಟಿಗಾರ್ ಮತ್ತು ಮಕ್ಕಳ ಹರಕೆ ಬಯಲಾಟವಾಗಿ ಎಡಮಕ್ಕಿ-ಶಂಕರನಾರಾಯಣ “ಅಕ್ಷರ ನಿವಾಸ“ದ ವಠಾರದಲ್ಲಿ ಪೌರಾಣಿಕ ಯಕ್ಷಗಾನ ಪ್ರಸಂಗ ನಡೆಯಲಿದೆ.

ಅಂದು ಬೆಳಿಗ್ಗೆ 10ಕ್ಕೆ ಶ್ರೀ ಸತ್ಯನಾರಾಯಣ ಪೂಜೆ, ಮಧ್ಯಾಹ್ನ 12:30ಕ್ಕೆ ಭೋಜನಕೂಟ, ರಾತ್ರಿ 7ಕ್ಕೆ ಗಣಪತಿ ಪೂಜೆ, ತದನಂತರ ಕಾಲಮಿತಿ ಯಕ್ಷಗಾನ ಬಯಲಾಟ ನಡೆಯಲಿದೆ.

ಈ ಎಲ್ಲಾ ಕಾರ್ಯಕ್ರಮಗಳಿಗೆ ತಾವು ಕುಟುಂಬ ಸಮೇತರಾಗಿ ಆಗಮಿಸಿ, ಶ್ರೀದೇವರ ಸಿರಿಮುಡಿ ಗಂಧ ಪ್ರಸಾದವನ್ನು ಸ್ವೀಕರಿಸಿ, ಶ್ರೀದೇವಿಯ ಕೃಪೆಗೆ ಪಾತ್ರರಾಗಬೇಕಾಗಿ ಅಪೇಕ್ಷಿಸುವ;

ಶ್ರೀಮತಿ ಮತ್ತು ಶ್ರೀ ವಿಠಲ ಶೆಟ್ಟಿಗಾರ ಮತ್ತು ಮಕ್ಕಳು ಹಾಗೂ ಕುಟುಂಬಸ್ಥರು, ಎಡಮಕ್ಕಿ- ಶಂಕರನಾರಾಯಣ

Related Articles

Back to top button
error: Content is protected !!