ಮೂವರು ಪತ್ನಿಯರ ಮುದ್ದಿನ ಗಂಡ ಹೆಂಡತಿಯರು ಸೂಪರ್ ಆಗಿ ಕಾಣಲೆಂದು ದುಬಾರಿ ಬೆಲೆಯ ಪ್ಲಾಸ್ಟಿಕ್ ಸರ್ಜರಿ!

Views: 0
ಇಲ್ಲೊಬ್ಬ ಬರೋಬ್ಬರಿ ಮೂವರನ್ನು ಮದುವೆಯಾಗಿದ್ದಲ್ಲದೇ ಅವರುಇನ್ನೂ ಸುಂದರವಾಗಿ ಕಾಣಲೆಂದು ಪ್ಲಾಸ್ಟಿಕ್ ಸರ್ಜರಿಯನ್ನೂ ಮಾಡಿಸಿದ್ದಾರೆ.
ಅಮೆರಿಕದ ವಾಣಿಜ್ಯೋದ್ಯಮಿ ಮಜಯಾ ಆಂಡ್ರ್ಯೂಸ್ ಎನ್ನುವರು ಸ್ಟೆಫನಿ, ರೋಸ್ ಮತ್ತು ಡೆಜಾರೆ ಎನ್ನುವ ಮೂವರು ಮಹಿಳೆಯರನ್ನು ಮದುವೆಯಾಗಿದ್ದಾರೆ. ಮಜಯಾ ಮೊದಲು ಸ್ಟೆಫನಿ ಜೊತೆ ಒಳ್ಳೆಯ ಸಂಬಂಧ ಹೊಂದಿದ್ದರು. ಆ ಮೇಲೆ ಯಾವುದೋ ಘಟನೆಯಿಂದ ಇಬ್ಬರು ಬೇರೆ, ಬೇರೆಯಾಗಿದ್ದಕ್ಕೆ ರೋಸ್ ಜೊತೆ ಡೇಟಿಂಗ್ ಮಾಡಲು ಶುರುಮಾಡಿದ್ದರು. ಆಗ ಸ್ಟೆಫನಿ ಮತ್ತೆ ವಾಪಾಸು ಬಂದು ನಿನ್ನ ಜೊತೆಯಾಗಿ ಇರುವುದಾಗಿ ಹೇಳಿದ್ದರಿಂದ ಇಬ್ಬರ ಪತ್ನಿಯರ ಜೊತೆಗೆ ಮಜಯಾ ಇದ್ದನು.
ಆದ್ರೆ ನನಗೆ ಇನ್ನೊಬ್ಬಳು ಬೇಕು ಎಂದು ಪತ್ನಿ ಸ್ಟೆಫನಿ ಕೇಳಿದ್ದರಿಂದ ಮನೆಗೆ 3ನೇಯವಳಾಗಿ ಡೆಜಾರೆರನ್ನು ಕರೆಯಿಸಿಕೊಂಡಿದ್ದಾರೆ. ಇದರಲ್ಲಿ ಸ್ಟೆಫಾನಿಗೆ ನೋಡಲು ಚೆನ್ನಾಗಿ, ಸೂಪರ್ ಆಗಿ ಕಾಣಿಸಲೆಂದು ದುಬಾರಿ ಬೆಲೆಯ ಪ್ಲಾಸ್ಟಿಕ್ ಸರ್ಜರಿ ಮಾಡಿಸುತ್ತಿದ್ದಾಗ, ನಮಗೂ ಪ್ಲಾಸ್ಟಿಕ್ ಸರ್ಜರಿ ಬೇಕೆಂದು ಇನ್ನಿಬ್ಬರು ಒತ್ತಾಯಿಸಿದ್ದಾರೆ. ಹೀಗಾಗಿ ಗಂಡನಾದ ಮಜಯಾ ಆಂಡ್ರ್ಯೂಸ್, ಆ ದುಬಾರಿ ಬೆಲೆಯ ಪ್ಲಾಸ್ಟಿಕ್ ಸರ್ಜರಿಯನ್ನು ಈಗಾಗಲೇ ಮಾಡಿಸಿದ್ದಾನೆ ಎನ್ನಲಾಗಿದೆ.







