ಆರೋಗ್ಯ

ಮಾರ್ಗ ಮಧ್ಯದಲ್ಲಿಯೇ ಆಟೊದಲ್ಲಿ ಗಂಡು ಮಗುವಿಗೆ ಜನ್ಮ ನೀಡಿದ ಮಹಿಳೆ

Views: 74

ರಾಯಚೂರು: ಗರ್ಭಿಣಿಯೊಬ್ಬರು ಹೆರಿಗೆಗಾಗಿ ಆಸ್ಪತ್ರೆಗೆ ತೆರಳುವ ಸಂದರ್ಭದಲ್ಲಿ ಆಟೊದಲ್ಲಿಯೇ ಗಂಡು ಮಗುವಿಗೆ ಜನ್ಮ ನೀಡಿದ ಘಟನೆ ಶುಕ್ರವಾರ ನಗರದ ಮಸ್ಕಿಯಲ್ಲಿ ನಡೆದಿದೆ.

ಇಲ್ಲಿನ  ಸಂತೆ ಬಜಾರ ರಸ್ತೆಯಲ್ಲಿನ ಮನೆಯೊಂದರ ಮಹಿಳೆಗೆ ಬೆಳಿಗ್ಗೆಯೇ ಹೆರಿಗೆ ನೋವು ಕಾಣಿಸಿಕೊಂಡಿದೆ. ಕುಟುಂಬಸ್ಥರು ತಕ್ಷಣ ಆಟೊ ಕರೆಸಿದ್ದಾರೆ. ಮಹಿಳೆಯನ್ನು ಆಟೊದಲ್ಲಿ ಕೂರಿಸಿ ಆಸ್ಪತ್ರೆಗೆ ಕರೆದುಕೊಂಡು ಹೋಗುವ ಸಂದರ್ಭದಲ್ಲಿ ನೋವು ಹೆಚ್ಚಾಗಿದೆ. ಹೀಗಾಗಿ ಚಾಲಕ ತಕ್ಷಣ ಮಾರ್ಗ ಮಧ್ಯದಲ್ಲಿಯೇ ಆಟೊ ನಿಲ್ಲಿಸಿದ್ದಾನೆ.

ನೆರೆಹೊರೆ ಮಹಿಳೆಯರು ಹಾಗೂ ಕುಟುಂಬದ ಸದಸ್ಯರು ಆಟೊ ಸುತ್ತ ಪರದೆ ಕಟ್ಟಿ ಹೆರಿಗೆಗೆ ಸಹಕಾರ ನೀಡಿದ್ದಾರೆ. ಮಹಿಳೆಯು ಗಂಡು ಮಗುವಿಗೆ ಜನ್ಮ ನೀಡಿದ್ದಾರೆ. ತಾಯಿ ಮಗು ಆರೋಗ್ಯವಾಗಿದ್ದಾರೆ ಎಂದು ಸ್ಥಳೀಯರು ತಿಳಿಸಿದ್ದಾರೆ.

ಸುದ್ದಿ ತಿಳಿದು ಸ್ಥಳಕ್ಕೆ ಬಂದ ಆಶಾ ಕಾರ್ಯಕರ್ತೆಯರು ಮಹಿಳೆ ಹಾಗೂ ಮಗುವನ್ನು ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಪ್ರಾಥಮಿಕ ಚಿಕಿತ್ಸೆ ಕೊಡಿಸಿದ್ದಾರೆ.

Related Articles

Back to top button
error: Content is protected !!